»   » 'ಟಕಿಲ' ನಂತರ ಚಂದನ್ ಶೆಟ್ಟಿಯ 'ಗಾಂಚಲಿ' ಹಾಡು ರಿಲೀಸ್

'ಟಕಿಲ' ನಂತರ ಚಂದನ್ ಶೆಟ್ಟಿಯ 'ಗಾಂಚಲಿ' ಹಾಡು ರಿಲೀಸ್

Posted By:
Subscribe to Filmibeat Kannada

Rapper ಚಂದನ್ ಶೆಟ್ಟಿಯ 'ಟಕಿಲ' ಹಾಡು ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹವಾ ಮಾಡ್ತಿದೆ. ಸಿನಿಮಾ ಹಾಡುಗಳನ್ನೆಲ್ಲ ಹಿಂದಿಕ್ಕಿ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಹೀಗಿರುವಾಗಲೇ ಚಂದನ್ ಶೆಟ್ಟಿಯ ಮತ್ತೊಂದು ಹಾಡು ರಿಲೀಸ್ ಆಗಿದೆ.

'ಟಕಿಲ' ಅಬ್ಬರದ ಮಧ್ಯೆ 'ಟಾಪ್ ಟು ಬಾಟಮ್ ಗಾಂಚಲಿ' ಹಾಡು ತೆರೆಕಂಡಿದ್ದು ಸಂಗೀತ ಪ್ರಿಯರ ಮಸ್ತ್ ಎಂಜಾಯ್ ಮಾಡ್ತಿದ್ದಾರೆ. ಹೌದು, 'ಗಾಂಚಲಿ' ಚಿತ್ರದ ಈ ಸಾಂಗ್ ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅಬ್ಬರವಿಡುತ್ತಿದೆ.

ವಿಡಿಯೋ : ಚಂದನ್ ಶೆಟ್ಟಿ ಹೊಸ ರಾಪ್ ಹಾಡು 'ಟಕಿಲ' ರಿಲೀಸ್

chandan shettys top to bottom ganchali song release

ಈ ಹಾಡನ್ನ ಚಂದನ್ ಶೆಟ್ಟಿ ಮತ್ತು ಸ್ನೇಹಾ ಹೆಗಡೆ ಹಾಡಿದ್ದು, ಚಂದನ್ ಹಾಗೂ ಸುದರ್ಶನ್ ಸಾಹಿತ್ಯ ರಚಿಸಿದ್ದಾರೆ. ಸ್ವತಃ ಚಂದನ್ ಶೆಟ್ಟಿ ಅವರೇ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಇನ್ನುಳಿದಂತೆ 'ಗಾಂಚಲಿ' ಚಿತ್ರವನ್ನ ಸುದರ್ಶನ್ ನಿರ್ದೇಶನ ಮಾಡುತ್ತಿದ್ದು, ಆದರ್ಶ, ಅಜಯ್, ಮಹೇಶ್, ಅಖಿಲಾ, ಪ್ರಕೃತಿ, ನವ್ಯ ಸೇರಿದಂತೆ ಹಲವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ, 'ಗಾಂಚಲಿ' ಚಿತ್ರದ ಟೈಟಲ್ ಟ್ರ್ಯಾಕ್ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ಆದಷ್ಟೂ ಬೇಗ ಪೂರ್ತಿ ವಿಡಿಯೋ ಸಾಂಗ್ ಸಿಗಲಿದೆ.

'ಟಾಪ್ ಟು ಬಾಟಮ್ ಗಾಂಚಲಿ' ಹಾಡನ್ನ ಕೇಳಲು ಈ ಲಿಂಕ್ ಕ್ಲಿಕ್ ಮಾಡಿ

English summary
after Super hit Rap song 'Tequila', now another Rap song released by chandan shetty team. the song name 'top to bottom ganchali' from kannada movie ganchali. the movie directed by sudarshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X