'ಕಿರಿಕ್ ಪಾರ್ಟಿ' ನಟ ಚಂದನ್ ಗೆ ಬ್ರೇಕಪ್ ಆಗಿದೆಯಂತೆ
'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಗಮನ ಸೆಳೆದಿದ್ದ ನಟ ಚಂದನ್ ಗೆ ಈಗ ಬ್ರೇಕಪ್ ಆಗಿದೆ. ಪ್ರೀತಿ ಕಳೆದುಕೊಂಡ ಬೇಸರದಲ್ಲಿ ಅವರು ರಸ್ತೆಗಳಲ್ಲಿ ಹಾಡು ಹೇಳುತ್ತಿದ್ದಾರೆ. ಆದರೆ. ಇಷ್ಟೆಲ್ಲ ನಡೆಯುತ್ತಿರೋದು ರಿಯಲ್ ಆಗಿ ಅಲ್ಲ, ಸಿನಿಮಾದಲ್ಲಿ.
ನಟ ಚಂದನ್ ಆಚಾರ್ ಈಗ ಹೊಸ ಸಿನಿಮಾ ಮಾಡುತ್ತಿದ್ದಾರೆ. 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಎಂಬ ಸಿನಿಮಾದಲ್ಲಿ ಅವರೇ ನಾಯಕರಾಗಿದ್ದು, ಸಂಜನಾ ನಾಯಕಿಯಾಗಿದ್ದಾರೆ. ಈ ಸಿನಿಮಾದ ಬ್ರೇಕಪ್ ಹಾಡು ಬಿಡುಗಡೆಯಾಗಿದ್ದು, ಹಾಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

''ಉರ್ವಶಿ ಅವರು...ನನ್ನನ್ನು ಬೇವರ್ಸಿ ಮಾಡಿ ಹೋದ್ಲು...'' ಎನ್ನುವ ಹಾಡು ಮಾಸ್ ಅಭಿಮಾನಿಗಳಿಗೆ ಇಷ್ಟ ಆಗುವಂತಿದೆ. ಈ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ. ಕುಮಾರ್ ಹಾಡು ಬರೆದಿದ್ದು, ಅರವ್ ರಿಶಿಕ್ ಸಂಗೀತ ನೀಡಿದ್ದಾರೆ.
'ಎಣ್ಣೆ ನಮ್ದು ಊಟ ನಿಮ್ದು..' ಹಾಡು ಸೂಪರ್ ಹಿಟ್ ಆದ ಬಳಿಕ ನವೀನ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹೊಸ ಎಣ್ಣೆ ಹಾಡು ಹುಡುಗರನ್ನು ಕುಣಿಸುತ್ತಿದೆ.
English summary
Actor Chandan Achar's 'Chemistry Of Kariyappa' movie song released.


Click it and Unblock the Notifications