Don't Miss!
- Sports
ಜಿಂಬಾಬ್ವೆ ವಿರುದ್ಧ ಗೆಲುವು: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆ ಬರೆದ ರಾಹುಲ್ ಪಡೆ!
- Lifestyle
ನಿಮ್ಮ ಲೈಫ್ ಪಾರ್ಟನರ್ ಹತ್ರ ಈ ವಿಷಯಗಳನ್ನು ಹೇಳಲೇಬೇಡಿ
- Finance
ರೈತರಿಗೆ ಸಿಹಿಸುದ್ದಿ: ಪಿಎಂ ಕಿಸಾನ್ ಯೋಜನೆ ಇಕೆವೈಸಿ ಮತ್ತೆ ವಿಸ್ತರಣೆ
- News
ಕೃಷ್ಣ ಜನ್ಮಾಷ್ಟಮಿ 2022: ಕೃಷ್ಣನ ನೆಚ್ಚಿನ ಬಿಳಿ ಬೆಣ್ಣೆಯು ಯಾವ ರೋಗಗಳಿಗೆ ರಾಮಬಾಣ ?
- Automobiles
ಸ್ಟೈಲಿಶ್ ಲುಕ್ ಹೊಂದಿರುವ ಹೋಂಡಾ ಆಕ್ಟಿವಾ 6ಜಿ ಪ್ರೀಮಿಯಂ ಎಡಿಷನ್ ವಿಶೇಷತೆಗಳು
- Technology
ಆಂಡ್ರಾಯ್ಡ್ 13 ನಲ್ಲಿ ಈ ಫೀಚರ್ಸ್ಗಳು ನಿಮಗೆ ಲಭ್ಯವಾಗಲಿವೆ!
- Education
Online Courses After Class 12 : ಆನ್ಲೈನ್ ಸರ್ಟಿಫಿಕೇಟ್, ಡಿಪ್ಲೋಮಾ ಮತ್ತು ಪದವಿ ಕೋರ್ಸ್ ಗಳ ಪಟ್ಟಿ
- Travel
2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ: ಭಾರತದಲ್ಲಿಯ ಪ್ರಸಿದ್ದ ಕೃಷ್ಣ ದೇವರ ದೇವಾಲಯಗಳಿಗೆ ಭೇಟಿ ಕೊಡಿ
ಗಾಯಕಿಗೆ ಅಸಹ್ಯಕರ ಚಿತ್ರ ಕಳಿಸಿದವರ ವಿರುದ್ಧ ದೂರು: ಗಾಯಕಿಯ ಖಾತೆಯೇ ಬ್ಲಾಕ್!
ಸಾಮಾಜಿಕ ಜಾಲತಾಣದಲ್ಲಿ ಹಲವಾರು ನಟಿಯರಿಗೆ ಪ್ರತಿದಿನವೂ ಕಿರುಕುಳ. ಯಾವ ಪೋಸ್ಟ್ ಹಾಕಿದರು ಕೆಟ್ಟ ಕಮೆಂಟ್ ಮಾಡಲು ಕೆಲವರು ಕಾದಿರುತ್ತಾರೆ. ತುಸು ಹಾಟ್ ಚಿತ್ರ ಹಾಕಿದ್ದರಂತೂ ಮುಗಿದೆ ಬಿಡುತ್ತದೆ ಕತೆ.
ಟ್ರೋಲ್ಗಳ ಉಪಟಳ ಕೇಲವ ನಾಯಕಿಯರಿಗಷ್ಟೆ ಅಲ್ಲ ಗಾಯಕಿಯರಿಗೂ ಇದು ಸಾಮಾನ್ಯ ಎಂಬಂತಾಗಿದೆ. ಟ್ರೋಲ್ಗಳ ವಿರುದ್ಧ ಹೋರಾಡಿ-ಹೋರಾಡಿ ಪಾಪ ನಟಿಯರ ಕೈ ಸೋತಿದೆ. ಏಕೆಂದರೆ ಸಾಮಾಜಿಕ ಜಾಲತಾಣ ಸಂಸ್ಥೆಗಳು ಇಂಥಹಾ ಟ್ರೋಲರ್ಗಳ ವಿರುದ್ಧ ಸೂಕ್ತ ಕ್ರಮವನ್ನೇ ಕೈಗೊಳ್ಳುವುದಿಲ್ಲ.
ಟ್ರೋಲ್
ಮಾಡಿ
ಏನ್
ಮಾಡ್ತೀರಪ್ಪ:
ರಶ್ಮಿಕಾ
ಮಂದಣ್ಣ!
ಈಗಲೂ ಹೀಗೆಯೇ ಆಗಿದೆ. ಗಾಯಕಿಯೊಬ್ಬರಿಗೆ ವ್ಯಕ್ತಿಯೊಬ್ಬ ಕೆಟ್ಟ ಚಿತ್ರಗಳನ್ನು ಕಳಿಸಿದ್ದಾನೆ. ಇದರ ಬಗ್ಗೆ ಸಾಮಾಜಿಕ ಜಾಲತಾಣ ಸಂಸ್ಥೆಗೆ ನಟಿ ದೂರು ನೀಡಿದ್ದಾರೆ. ಇದಕ್ಕೆ ಪರ್ಯಾಯವಾಗಿ ಆ ಸಂಸ್ಥೆಯು ಗಾಯಕಿಯ ಸಾಮಾಜಿಕ ಜಾಲತಾಣ ಖಾತೆಯನ್ನೇ ಬ್ಲಾಕ್ ಮಾಡಿದೆ!
ದಕ್ಷಿಣ ಭಾರತದ ಸೆಲೆಬ್ರಿಟಿ ಗಾಯಕಿ ಶ್ರೀಪಾದ್ ಚಿನ್ಮಯಿ ಅವರ ಇನ್ಸ್ಟಾಗ್ರಾಂ ಖಾತೆ ಬ್ಲಾಕ್ ಆಗಿದೆ. ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಗಾಯಕಿ ಚಿನ್ಮಯಿ, ''ನನಗೆ ವ್ಯಕ್ತಿಯೊಬ್ಬ ಕೆಟ್ಟ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಕಳಿಸುತ್ತಿದ್ದ, ಆತನ ಖಾತೆ ರಿಪೋರ್ಟ್ ಮಾಡಿದೆ. ಇದಕ್ಕೆ ಪ್ರತಿಯಾಗಿ ನನ್ನದೇ ಖಾತೆಯನ್ನು ಬ್ಲಾಕ್ ಮಾಡಲಾಗಿದೆ'' ಎಂದಿದ್ದಾರೆ.

ಜನನಾಂಗದ ಚಿತ್ರ ಕಳಿಸಿದ್ದರು ಎಂದ ಗಾಯಕಿ ಚಿನ್ಮಯಿ
ಈ ಬಗ್ಗೆ ಟ್ವಿಟ್ಟರ್ನಲ್ಲಿ ಅಸಮಧಾನ ವ್ಯಕ್ತಪಡಿಸಿರುವ ಚಿನ್ಮಯಿ, ''ತಮ್ಮ ಜನನಾಂಗದ ಚಿತ್ರಗಳನ್ನು ನನಗೆ ಇನ್ಸ್ಟಾಗ್ರಾಂನಲ್ಲಿ ಸಂದೇಶದ ಮೂಲಕ ಕಳಿಸಿದ್ದ ಕೆಲವು ಪುರುಷರ ಖಾತೆಗಳನ್ನು ರಿಪೋರ್ಟ್ ಮಾಡಿದ್ದಕ್ಕಾಗಿ ಇನ್ಸ್ಟಾಗ್ರಾಂ ನನ್ನ ಖಾತೆಯನ್ನೇ ಬ್ಲಾಕ್ ಮಾಡಿದೆ. ಇದು ಕೆಲವು ದಿನಗಳಿಂದಲೂ ನಡೆಯುತ್ತಲೇ ಇದೆ. ಈಗ ಅಂಥಹಾ ಖಾತೆಗಳನ್ನು ರಿಪೋರ್ಟ್ ಮಾಡಲು ನನಗೆ ಅವಕಾಶವೇ ಇಲ್ಲದಂತಾಗಿದೆ. ಆಗಿದ್ದಾಗಲಿ ನನಗೊಂದು ಬ್ಯಾಕ್ಅಪ್ ಖಾತೆ ಇದ್ದು ಅದರ ಚಿನ್ಮಯ ಶ್ರೀಪಾದ ಎಂದಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

''ಟ್ರೋಲರ್ಗಳನ್ನು ಉಳಿಸಿಕೊಂಡು ನನ್ನ ಖಾತೆ ಬಂದ್''
ಇನ್ಸ್ಟಾಗ್ರಾಂನಲ್ಲಿ ತಮ್ಮ ಮತ್ತೊಂದು ಖಾತೆಯ ಮೂಲಕ ಈ ಆಕ್ರೋಶ ಹೊರಹಾಕಿರುವ ಗಾಯಕಿ ಚಿನ್ಮಯಿ, ''ಕೊನೆಗೂ ಇನ್ಸ್ಟಾಗ್ರಾಂ ನನ್ನ ಒರಿಜಿನಲ್ ಖಾತೆಯನ್ನು ಡಿಲೀಟ್ ಮಾಡಿದೆ. ಟ್ರೋಲ್ ಮಾಡುವವರನ್ನು, ಆನ್ಲೈನ್ನಲ್ಲಿ ಮೂದಲಿಸುವವರನ್ನು ಇರಿಸಿಕೊಂಡಿದೆ ಆದರೆ ಅಂಥಹವರ ವಿರುದ್ಧ ಮಾತನಾಡುವವರನ್ನು, ದೂರು ನೀಡುವವರ ಖಾತೆಯನ್ನು ಡಿಲೀಟ್ ಮಾಡಿದೆ'' ಎಂದಿದ್ದಾರೆ.

ಹಲವು ಸಂಗೀತ ನಿರ್ದೇಶಕರ ವಿರುದ್ಧ ಆರೋಪ ಮಾಡಿದ್ದರು
ಗಾಯಕಿ ಚಿನ್ಮಯಿ ಶ್ರೀಪಾದ್ ಈ ಹಿಂದೆ ಮೀ ಟೂ ಅಭಿನಾಯದ ಸಮಯದಲ್ಲಿ ಭಾರಿ ದೊಡ್ಡದಾಗಿ ಸುದ್ದಿಯಲ್ಲಿದ್ದರು. ನಟಿಯು ಕನ್ನಡದ ಸಂಗೀತಗಾರ ರಘು ದೀಕ್ಷಿತ್ ಸೇರಿದಂತೆ ಖ್ಯಾತ ಗೀತ ಸಾಹಿತಿ ವೈರಮುತ್ತು, ಸಂಗೀತಜ್ಞರಾದ ಓಎಸ್ ತ್ಯಾಗರಾಜನ್, ಮ್ಯಾಂಡೊಲಿನ್ ಯು ರಾಜೇಶ್, ಯುವ ಸಂಗೀತ ನಿರ್ದೇಶಕ ರಾಹುಲ್ ಇನ್ನೂ ಕೆಲವರ ಮೇಲೆ ಆರೋಪ ಮಾಡಿದ್ದರು. ಅಲ್ಲದೆ ತಮಿಳುನಾಡು ಬ್ರಾಹ್ಮಣ ಅಸೋಸಿಯೇಷನ್ನ ಅಧ್ಯಕ್ಷ ಎನ್ ನಾರಾಯಣನ್ ವಿರುದ್ಧ ದೂರು ಸಲ್ಲಿಕೆಯಾಗಲು ಸಹ ತಾವೇ ಕಾರಣ ಎಂದು ಹೇಳಿಕೊಂಡಿದ್ದರು.

ಕನ್ನಡದಲ್ಲಿ ಹಲವು ಹಾಡು ಹಾಡಿದ್ದಾರೆ
ಚಿನ್ಮಯಿ ಶ್ರೀಪಾದ, ಹಲವಾರು ಸಿನಿಮಾಗಳಿಗೆ ನಾಯಕಿಯರಿಗೆ ಹಿನ್ನೆಲೆ ಧ್ವನಿ ನೀಡಿರುವ ಜೊತೆಗೆ, ತೆಲುಗು, ತಮಿಳು ಕನ್ನಡ ಭಾಷೆಗಳಲ್ಲಿ ಹಲವಾರು ಹಾಡುಗಳನ್ನು ಹಾಡಿದ್ದಾರೆ. 'ಇಂತಿ ನಿನ್ನ ಪ್ರೀತಿಯ' ಸಿನಮಾದ 'ಮಧುವನ ಕರೆದರೆ', 'ನಿನ್ನಂದಲೆ' ಸಿನಿಮಾದ 'ನಿಂತೆ ನಿಂತೆ', 'ದಿಯಾ' ಸಿನಿಮಾದ 'ಸೋಲ್ ಆಫ್ ದಿಯಾ', 'ಬೈಟು ಲವ್' ಸಿನಿಮಾದ 'ಪೋಗದಿರಲೋ ರಂಗ' ಇನ್ನೂ ಹಲವು ಹಾಡುಗಳನ್ನು ಚಿನ್ಮಯಿ ಶ್ರೀಪಾದ ಹಾಡಿದ್ದಾರೆ. ಹಲವಾರು ಭಾಷೆಗಳಲ್ಲಿ ಚಿನ್ಮಯಿ ಹಾಡು ಹಾಡಿದ್ದಾರೆ.