For Quick Alerts
  ALLOW NOTIFICATIONS  
  For Daily Alerts

  ಕನ್ನಡ ಸಂಗೀತ ಲೋಕದ ಹೊಸ ಅತಿಥಿ - ಸಿ ಮ್ಯೂಸಿಕ್

  By Mahesh
  |

  ಚಿತ್ತಾರ ಸಿನಿ ಮಾಸ ಪತ್ರಿಕೆ ಹೊರ ತರುತ್ತಿರುವ 'ಸಿ' ಮ್ಯೂಸಿಕ್ ಲೋಕಾರ್ಪಣೆಗೆ ಸಜ್ಜಾಗಿದೆ. ಸೆಪ್ಟೆಂಬರ್ 21 ರ ಸಂಜೆ ಸಂಗೀತ ಹಬ್ಬಕ್ಕೆ ಕನ್ನಡ ಸಿನಿಮಾಲೋಕದ ತಾರೆಗಳು ಚಾಲನೆ ನೀಡಲಿದ್ದಾರೆ.

  ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್ ವಿಶೇಷ ಸಂದರ್ಭವೊಂದಕ್ಕೆ ಸಾಕ್ಷಿಯಾಗಲಿದೆ. ಅಂದು ಸಿ ಮ್ಯೂಸಿಕ್ ಸಂಸ್ಥೆಯ ಉದಯವಾಗಲಿದೆ ಎಂದು ಚಿತ್ತಾರ ತಂಡದ ಮುಖ್ಯಸ್ಥರಾದ ಕೆ ಶಿವಕುಮಾರ್ ಅವರು ಫಿಲ್ಮಿಬೀಟ್ ಗೆ ತಿಳಿಸಿದರು.

  ಕನ್ನಡದ ಹಾಡುಗಳ ಮಾರುಕಟ್ಟೆಯನ್ನು ವಿಸ್ತರಿಸಬೇಕೆನ್ನುವ ಮಹತ್ತರ ಕನಸಿನೊಂದಿಗೆ ಈ ಹೆಜ್ಜೆಯನ್ನಿಡುತ್ತಿದ್ದೇವೆ. ಚಿತ್ರರಂಗದ ಸ್ನೇಹಿತರು, ಕಲಾವಿದರು, ತಂತ್ರಜ್ಞರು ಹಾಗೂ ಕನ್ನಡ ಚಿತ್ರರಂಗವನ್ನು ಉಳಿಸಿ ಬೆಳೆಸುತ್ತಿರುವ ಕಲಾರಸಿಕರೇ ನಮ್ಮ ಬಂಧುಗಳು. ನಿಮ್ಮ ಹಾರೈಕೆಯೊಂದಿಗೆ ನಮ್ಮ ಹೊಸ ಕನಸು ನನಸಾಗಲಿದೆ ಎಂದರು.

  ಯುವ ಪ್ರತಿಭೆಗಳಿಗೆ ಪ್ರೋತ್ಸಾಹ:ಸಿ- ಮ್ಯೂಸಿಕ್ ಕೇವಲ ಕನ್ನಡ ಚಲನಚಿತ್ರ ಗೀತೆಗಳಿಗೆ ಸೀಮಿತವಾಗುವ ಆಡಿಯೋ ಸಂಸ್ಥೆಯಲ್ಲ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ನಮ್ಮ ಸಂಸ್ಥೆ ಮುಂದಾಗಿದ್ದು, ಕನ್ನಡ Rap, ಖಾಸಗಿ ಮ್ಯೂಸಿಕೆ ಆಲ್ಬಮ್, ಜಾನಪದ ಗೀತೆ ಸಂಗ್ರಹವನ್ನು ಹೊರತರಲು ಇಚ್ಛಿಸುವವರಿಗೆ ನಮ್ಮ ಸಂಸ್ಥೆ ನೆರವಾಗಲಿದೆ ಎಂದು ಕೆ ಶಿವಕುಮಾರ್ ಹೇಳಿದರು.

  ಉದ್ಘಾಟನಾ ದಿನದಂದು ಚಿತ್ರಸಾಹಿತಿಗಳು, ಕನ್ನಡ ಸಾಹಿತಿಗಳನ್ನು ಸನ್ಮಾನಿಸಲಾಗುವುದು, ನಮ್ಮ ಲೋಗೋ ಅನಾವರಣಗೊಳಿಸಲಾಗುವುದು, ಹಾದಿ ಬೀದಿ ಲವ್ ಸ್ಟೋರಿ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದೇವೆ, ಇನ್ನೂ 10-12 ಚಿತ್ರಗಳ ಹಕ್ಕು ಪಡೆಯುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ.

  ಕನ್ನಡ ಧ್ವನಿಸುರಳಿ ಮಾರುಕಟ್ಟೆಗೆ ಇನ್ನೂ ಬೆಲೆ ಇದೆ ಎಂಬುದನ್ನು ಸಾಬೀತುಪಡಿಸುತ್ತೇವೆ, ಚಿತ್ತಾರ ತಂಡದ ಕೆ ಶಿವಕುಮಾರ್ ಅವರ ಮಾರ್ಗದರ್ಶನದಲ್ಲೇ ಸಿ ಮ್ಯೂಸಿಕ್ ಕೂಡಾ ಕಾರ್ಯನಿರ್ವಹಿಸಲಿದೆ ಎಂದು ಚಿತ್ತಾರ ತಂಡದ ನಂದೀಶ್ ತಿಳಿಸಿದರು.

  ಉದ್ಘಾಟನಾ ಕಾರ್ಯಕ್ರಮಕ್ಕೆ ಪಾಸ್: ಶುಕ್ರವಾರ ಮತ್ತು ಶನಿವಾರದಂದು ಚಿತ್ತಾರ ಕಚೇರಿಯಲ್ಲಿ ಕಾರ್ಯಕ್ರಮದ ವಿಶೇಷ ಪಾಸ್ ಗಳನ್ನು ವಿತರಿಸಲಾಗುತ್ತಿದೆ. ಸಾರ್ವಜನಿಕರು ಕೂಡ ತಾರೆಗಳ ನಡುವಲ್ಲಿ ಕುಳಿತು ಹೊಸ ಸಂಸ್ಥೆಯನ್ನು ಹರಸಬಹುದು. ವಿಶೇಷ ಪಾಸ್ ಗಳಿಗಾಗಿ ಶುಕ್ರವಾರ ಬೆಳಿಗ್ಗೆ 10.30 ರ ನಂತರ ಈ ಕೆಳಕಂಡ ನಂಬರ್ ಗೆ ಕರೆ ಮಾಡಿ. ನಿಮ್ಮ ಪಾಸ್ ಕಾಯ್ದಿರಿಸಿಕೊಳ್ಳಿ.

  ಸಂಪರ್ಕಿಸಿ: 080-40902312 ಎಂದು ಚಿತ್ತಾರ ತಂಡ ಹೇಳಿದೆ.

  ಹಾಡುಗಳ ಜೊತೆ ಚಿತ್ರದ ಪ್ರಚಾರಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗುವುದು, ಸಾಮಾಜಿಕ ಜಾಲ ತಾಣಗಳಲ್ಲಿ ಉತ್ತಮ ಗುಣಮಟ್ಟದ ಹಾಡು, ಸಂಗೀತ ಪ್ರಚಾರ ಮಾಡಲು ನಾವು ಸಿದ್ದರಿದ್ದೇವೆ ಎಂದರು. ಸಿ ಮ್ಯೂಸಿಕ್ ಕಂಪನಿಯ ಫೇಸ್ ಬುಕ್ ಪುಟ ಇಲ್ಲಿದೆ

  English summary
  Chittara Cine and Lifestyle Kannada Monthly magazine team has announced that it will be launching 'C' Music- a dedicated company for Kannada Songs. The C Music launching ceremony scheduled to be held on 21st September 2015 at Chowdaiah Memorial hall, Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X