ಜಯಂತ್ ಕಾಯ್ಕಿಣಿ ಬರೆದಿರುವ 'ಕಾಲೇಜ್ ಕುಮಾರ್' ಹಾಡು ಕೇಳಿ
'ಕಾಲೇಜ್ ಕುಮಾರ್' ಸಿನಿಮಾದ ಎರಡನೇ ಹಾಡು ಇದೀಗ ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ.
'ಕಾಲೇಜ್ ಕುಮಾರ್' ಚಿತ್ರದ ಒಂದೊಂದೆ ಹಾಡನ್ನು ಚಿತ್ರತಂಡ ರಿಲೀಸ್ ಮಾಡುತ್ತಿದೆ. ಸದ್ಯ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದ್ದು, ಈ ಹಾಡು ಸಖತ್ ಮೆಲೋಡಿಯಾಗಿದೆ. 'ಹಸಿ ಬಿಸಿ ಹೃದಯವು ಹೊರಟಿದೆ...' ಎಂಬ ಈ ಹಾಡನ್ನು ಶ್ವೇತ ಮೋಹನ್ ಹಾಡಿದ್ದಾರೆ. ಹಾಡಿನಲ್ಲಿ ನಟ ವಿಕ್ಕಿ ಹಾಗೂ ನಟಿ ಸಂಯುಕ್ತ ಹೆಗ್ಡೆ ಕ್ಯೂಟ್ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ರಿಲೀಸ್ ಆಗಿದ್ದ ಚಿತ್ರದ ಮೊದಲ ಹಾಡು ಮೋಡಿ ಮಾಡಿತ್ತು. ಈಗ ಎರಡನೇ ಹಾಡು ಕೂಡ ಎಲ್ಲರ ಗಮನ ಸೆಳೆಯುತ್ತಿದೆ. 'ಕಾಲೇಜ್ ಕುಮಾರ್' ಚಿತ್ರಕ್ಕೆ ಅಲೆಮಾರಿ ಸಂತು ನಿರ್ದೇಶನ ಮಾಡಿದ್ದಾರೆ. ಪದ್ಮನಾಭ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸದ್ಯ 'ಕಾಲೇಜ್ ಕುಮಾರ್' ಹಾಡುಗಳ ಸದ್ದು ಜೋರಾಗಿದ್ದು ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.
English summary
Watch video : 'College Kumar' kannada movie 2nd song out.


Click it and Unblock the Notifications