For Quick Alerts
  ALLOW NOTIFICATIONS  
  For Daily Alerts

  ಹಾಡಿನಲ್ಲಿ ಅಶ್ಲೀಲತೆ ; ಗಾಯಕ, ನಟ ಖೇಸರಿ ಲಾಲ್ ವಿರುದ್ಧ ದೂರು ದಾಖಲು

  |

  ಅಶ್ಲೀಲವಾಗಿ ಹಾಡು ಚಿತ್ರೀಕರಣ ಮಾಡಿದ ಆರೋಪದ ಮೇರೆಗೆ ಭೋಜಪುರಿಯ ಖ್ಯಾತ ಗಾಯಕ, ನಟ ಮತ್ತು ಬಿಗ್ ಬಾಸ್ ಸ್ಪರ್ಧಿ ಖೇಸರಿ ಲಾಲ್ ಯಾದವ್ ವಿರುದ್ಧ ಮುಂಬೈನಲ್ಲಿ ಕ್ರಿಮಿಲ್ ದೂರು ದಾಖಲಾಗಿದೆ.

  ಸನಾತನ್ ಸೇವಾ ಫೌಂಡೇಶ್ ನ ಅಧ್ಯಕ್ಷ ಸುರ್ಜಿತ್ ಸಿಂಗ್, ಗಾಯಕ ಖೇಸರಿ ವಿರುದ್ಧ ದೂರು ನೀಡಿದ್ದಾರೆ. ಮಹಿಳೆಯರ ಬಗ್ಗೆ ಅಶ್ಲೀಲವಾದ ಹಾಡನ್ನು ನಿರ್ಮಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಹಣ ಗಳಿಸುವ ಏಕೈಕ ಉದ್ದೇಶದಿಂದ ಇಂಥ ಹಾಡುಗಳನ್ನು ನಿರ್ಮಿಸಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಹಾಡಿನ ಸ್ಕ್ರೀನ್ ಶಾಟ್ ಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ.

  ಅಂದಹಾಗೆ ಗಾಯಕ ಯಾದವ್ ವಿರುದ್ಧ ಕೇಳಿಬರುತ್ತಿರುವ ಆರೋಪ ಮೊದಲಲ್ಲ, ಇತ್ತೀಚಿಗೆ ನಿರ್ದೇಶಕ ರಾಜ್ ಕುಮಾರ್ ಪಾಂಡೆ ಜೊತೆ ಕೆಟ್ಟದಾಗಿ ವರ್ತಿಸಿ, ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಯಾದವ್ ವಿರುದ್ಧ ಪ್ರಕರಣ ದಾಖಲಾಗಿತ್ತು. ನಿರ್ದೇಶಕರನ್ನು ನಿಂದಿಸಿದ ಆರೋಪ ಅವರ ಮೇಲಿದೆ.

  ಇದರ ಬೆನ್ನಲ್ಲೇ ಈಗ ಮಹಿಳೆಯರಿಗೆ ಮಹಿಳೆಯರಿಗೆ ಅಗೌರವ ತೋರಿದ ಆರೋಪ ಕೇಳಿಬರುತ್ತಿದೆ. ಖೇಸರಿ ಯಾದವ್ ಹಿಂದಿ ಬಿಗ್ ಬಾಸ್ 13ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ವೀಕ್ಷಕರ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಉತ್ತಮ ಅನುಭವೇನು ಆಗಿಲ್ಲ, ಶೋನ ಫಾರ್ಮೇಟ್ ಇಷ್ಟವಾಗಿಲ್ಲ ಎಂದು ಹೇಳುವ ಮೂಲಕ ಶಾಕ್ ನೀಡಿದ್ದರು.

  35 ವರ್ಷದ ಗಾಯಕ ಖೇಸರಿ ಲಾಲ್ ಯಾದವ್ ವಿರುದ್ಧ ಸೆಕ್ಷನ್ 292, 294 ಮತ್ತು 354 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚಿಗೆ ಬಿಡುಗಡೆ ಮಾಡಿದ ಚಾಚಿ ಕೆ ಬಾಚಿ..ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಹಾಡಿನಲ್ಲಿ ಮಹಿಳೆಯರಿಗೆ ಅಗೌರವ ತೋರಿದ್ದಾರೆ ಎಂದು ಸುರ್ಜಿತ್ ದೂರಿನಲ್ಲಿ ಉಲ್ಲೇಖಿಸಿ, ಗಾಯಕ ಖೇಸರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

  English summary
  Complaint filed against Singer Khesari Lal Yadav for Obscene content in his song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X