ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ 'ಒಂದೆ ಒಂದು ಸಲ'; 24 ಗಂಟೆಗಳಲ್ಲಿ 'ಡೆವಿಲ್' ಸಾಂಗ್ ಖದರ್ ಹೇಗಿದೆ?

ದರ್ಶನ್ ಹಾಗೂ ರಚನಾ ರೈ ನಟನೆಯ 'ಡೆವಿಲ್' ಚಿತ್ರದ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ. ಅಭಿಮಾನಿಗಳಿಂದ ಮೆಚ್ಚುಗೆ ಪಡೆದು ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಸದ್ದು ಮಾಡ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕೂಡ ಭರ್ಜರಿ ವೀವ್ಸ್, ಲೈಕ್ಸ್ ಗಿಟ್ಟಿಸಿಕೊಂಡು ವೈರಲ್ ಆಗ್ತಿದೆ. ಅಜನೀಶ್ ಲೋಕನಾಥ್ ಸಂಗೀತದ ಹಾಡಿಗೆ ಕಪಿಲ್ ಕಪಿಲನ್, ಚಿನ್ಮಯಿ ಶ್ರೀಪಾದ ದನಿಯಾಗಿದ್ದಾರೆ.

ಪ್ರಮೋದ್ ಮರವಂತೆ ರೊಮ್ಯಾಂಟಿಕ್ ಸಾಂಗ್‌ಗೆ ಸಾಹಿತ್ಯ ಬರೆದಿದ್ದಾರೆ. ಅಜನೀಶ್ ಹಾಗೂ ಪ್ರಮೋದ್ ಕಾಂಬೋ ಸಾಂಗ್ಸ್ ಈಗಾಗಲೇ ಹಿಟ್ ಲಿಸ್ಟ್ ಸೇರಿವೆ. ಈಗ ಅದೇ ಸಾಲಿಗೆ 'ಒಂದೇ ಒಂದು ಸಲ' ಕೂಡ ಸೇರಿಕೊಂಡಿದೆ. ಸಂತು ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಕಡಲ ತಡಿಯಲ್ಲಿ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿ ಸಾಂಗ್ ಸೆರೆಹಿಡಿದಿದ್ದಾರೆ. ಬಿಂದಾಸ್ ಅವತಾರದಲ್ಲಿ ರಚನಾ ರೈ ಮಿಂಚಿದ್ದಾರೆ.

Darshan Rachana Rai s Song Onde Onde Sala from Devil Trends on YouTube and Instagram

ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ನಡೀತಿದೆ. ಡಿಸೆಂಬರ್ 12ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. 'ಇದ್ರೇ ನೆಮ್ದಿಯಾಗಿರ್ಬೇಕ್' ಸಾಂಗ್ ಬಳಿಕ ಇದೀಗ 'ಒಂದೇ ಒಂದು ಸಲ' ಸಾಂಗ್ ರಿಲೀಸ್ ಆಗಿ ಗಮನ ಸೆಳೆದಿದೆ.

ನಟ ದರ್ಶನ್ ಸಿಕ್ಕಾಪಟ್ಟೆ ಯಂಗ್ ಆಗಿ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ದರ್ಶನ್ ಜೊತೆ ರಚನಾ ಮೈ ಚಳಿ ಬಿಟ್ಟು ಕಾಣಿಸಿಕೊಂಡಿದ್ದು ಇಬ್ಬರ ಕೆಮೆಸ್ಟ್ರಿ ವೈರಲ್ ಆಗ್ತಿದೆ. ಸದ್ಯ 'ಕಾಂತಾರ- 1' ಚಿತ್ರದ ಮ್ಯೂಸಿಕ್‌ನಿಂದ ಸದ್ದು ಮಾಡುತ್ತಿರುವ ಅಜನೀಶ್ ಇದೇ ಮೊದಲ ಬಾರಿಗೆ ದರ್ಶನ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ದರ್ಶನ್ ಅಭಿಮಾನಿಗಳು ಸಾಂಗ್ ನೋಡಿ ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ.

ಥಾಯ್ಲೆಂಡ್‌ನ ಪುಕೆಟ್‌ನಲ್ಲಿರುವ ಜೇಮ್ಸ್ ಬಾಂಡ್ ಐಲ್ಯಾಂಡ್‌ನಲ್ಲಿ ಈ ಸಾಂಗ್ ಶೂಟ್ ಮಾಡಿದ್ದಾರೆ. ಚೇತನ್ ಎಂಬುವವರು ನಾಯಕ-ನಾಯಕಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಲಾಗಿದೆ. ಅಭಿಮಾನಿಗಳು ಪದೇ ಪದೆ ಮೆಲೋಡಿ ಸಾಂಗ್ ಕೇಳಿ ಎಂಜಾಯ್ ಮಾಡುತ್ತಿದ್ದಾರೆ.

'ಒಂದೆ ಒಂದು ಸಲ' ಸಾಂಗ್ 24 ಗಂಟೆಗಳಲ್ಲಿ ಬರೀ ಯೂಟ್ಯೂಬ್‌ನಲ್ಲಿ 50 ಲಕ್ಷಕ್ಕೂ ಹೆಚ್ಚು ವೀವ್ಸ್, 2 ಲಕ್ಷಕ್ಕೂ ಹೆಚ್ಚು ಲೈಕ್ಸ್, 25 ಸಾವಿರ ಕಾಮೆಂಟ್ಸ್ ಗಿಟ್ಟಿಸಿದೆ. ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ 10ನೇ ಸ್ಥಾನದಲ್ಲಿದೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ 1 ಕೋಟಿಗೂ ಹೆಚ್ಚು ವೀವ್ಸ್, 45 ಲಕ್ಷ ಲೈಕ್ಸ್, 7 ಸಾವಿರ ಕಾಮೆಂಟ್ಸ್, 86 ಸಾವಿರ ಶೇರ್ ಪಡೆದಿದೆ.

'ಡೆವಿಲ್' ಚಿತ್ರದಲ್ಲಿ ಮತ್ತೆರಡು ಸಾಂಗ್ಸ್ ಇದೆ. ಶೀಘ್ರದಲ್ಲೇ ಅವು ಕೂಡ ರಿಲೀಸ್ ಆಗಲಿದೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಮತ್ತೊಂದು ಕಡೆ ಚಿತ್ರತಂಡ ಪ್ರಮೋಷನ್ ಆರಂಭಿಸಲು ಸಿದ್ಧತೆ ನಡೀತಿದೆ. ದರ್ಶನ್ ಅನುಪಸ್ಥಿತಿಯಲ್ಲೇ 'ಡೆವಿಲ್' ಸಿನಿಮಾ ತೆರೆಗಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದಾರೆ. ಸದ್ಯಕ್ಕೆ ಜಾಮೀನು ಸಿಗುವುದು ಅನುಮಾನ ಎನ್ನುವಂತಾಗಿದೆ. ತಾವು ಜೈಲಿನಲ್ಲಿ ಇದ್ದರೂ ಸಿನಿಮಾ ಬಿಡುಗಡೆಗೆ ಯಾವುದೇ ಸಮಸ್ಯೆ ಆಗಬಾರದು ಎಂದು ಸಂದೇಶ ರವಾನಿಸಿದ್ದಾರೆ. ಪತ್ನಿಗೆ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಜವಾಬ್ದಾರಿ ವಹಿಸಿದ್ದಾರೆ. ಹಾಗಾಗಿ ವಿಜಯಲಕ್ಷ್ಮಿ 'ಡೆವಿಲ್' ಚಿತ್ರದ ಪ್ರಚಾರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ದರ್ಶನ್ ಅನುಪಸ್ಥಿತಿ ಅಭಿಮಾನಿಗಳನ್ನು ಕಂಗೆಡಿಸಿದೆ. ಇದೆಲ್ಲದರ ನಡುವೆಯೇ 'ಡೆವಿಲ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಹಿಂದೆ ದರ್ಶನ್ ಜೈಲಿನಲ್ಲಿ ಇದ್ದಾಗಲೇ 'ಸಾರಥಿ' ಸಿನಿಮಾ ತೆರೆಕಂಡು ಹಿಟ್ ಆಗಿತ್ತು.

More from Filmibeat

English summary
‘Onde Onde Sala’ Becomes a Chartbuster — Darshan and Rachana Rai’s Chemistry Wins Hearts
Read more about: devil darshan sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X