ಒಂದೇ ದಿನ ರಿಲೀಸ್ ಆಯ್ತು 'ಕುರುಕ್ಷೇತ್ರ' ಮತ್ತು 'ಪೈಲ್ವಾನ್' ವಿಡಿಯೋ ಸಾಂಗ್ಸ್
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬಿನಯದ ಕುರುಕ್ಷೇತ್ರ ಸಿನಿಮಾ ಸದ್ಯ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಶತದಿನಗಳತ್ತ ಮುನ್ನುಗ್ಗುತ್ತಿದೆ. ಇದೇ ಖುಷಿಯಲ್ಲಿ ಅಭಿಮಾನಿಗಳು ಕುರುಕ್ಷೇತ್ರ ವಿಜಯೋತ್ಸವ ಹೆಸರಿನಲ್ಲಿ ಕುರುಕ್ಷೇತ್ರ ಯಶಸ್ಸನ್ನು ಆಚರಿಸಲು ಮುಂದಾಗಿದ್ದಾರೆ.
ಇದರ ಜೊತೆಗೆ ಇಂದು ಕುರುಕ್ಷೇತ್ರ ಚಿತ್ರದ "ಸಾಹೋರೆ ಸಾಹೋ ..." ವಿಡಿಯೋ ಸಾಂಗ್ ಅನ್ನು ರಿಲೀಸ್ ಮಾಡಿದೆ ಚಿತ್ರತಂಡ. ಟಿ ಸಿರೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ರಿಲೀಸ್ ಆಗಿದೆ. ವಿ ನಾಗೇಂದ್ರ ಪ್ರಸಾದ್ ಈ ಗೀತೆಗೆ ಸಾಹಿತ್ಯ ಬರೆದಿದ್ದು, ವಿಜಯ ಪ್ರಕಾಶ್ ಹಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರ ಆಗಸ್ಟ್ 9ರಂದು ತೆರೆಗೆ ಬಂದಿತ್ತು.
ಇನ್ನು ಮತ್ತೊಂದೆಡೆ ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸುತ್ತಿರುವ ಪೈಲ್ವಾನ್ ಸಿನಿಮಾದ ವಿಡಿಯೋ ಹಾಡು ಬಿಡುಗಡೆಯಾಗಗಿದೆ. ಚಿತ್ರ ರಿಲೀಸ್ ಆಗಿ ಒಂದು ವಾರ ಆಗಿದೆ. ಆಗಲೆ ಚಿತ್ರದ ಹಾಡನ್ನು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಮನತಣಿಸಿದೆ ಪೈಲ್ವಾನ್.

ಈ ಹಾಡನ್ನು ಸಹ ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. "ನಾನು ನೀನು.."ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಸುದೀಪ್ ಮತ್ತು ಆಕಾಂಕ್ಷ ಸಿಂಗ್ ನಡುವಿನ ರೋಮ್ಯಾಂಟಿಕ್ ಹಾಡಾಗಿದೆ. ಈ ಹಾಡು ನರೇಶ್ ಐಯ್ಯರ್ ಮತ್ತು ಶ್ರುತಿ ಸಸಿಧರನ್ ಧ್ವನಿಯಲ್ಲಿ ಮೂಡಿಬಂದಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಪೈಲ್ವಾನ್ ಸದ್ಯ ಉತ್ತಮ ಕಲೆಕ್ಷನ್ ಮಾಡುತ್ತ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.


Click it and Unblock the Notifications











