Kaatera: ವಿಜಯದಶಮಿ ಸಡಗರದಲ್ಲೇ ಸಿಕ್ತು 'ಕಾಟೇರ' ಬಿಗ್ ಅಪ್‌ಡೇಟ್

ಆಯುಧ ಪೂಜೆ ಸಂಭ್ರಮದಲ್ಲಿ 'ಕಾಟೇರ' ಚಿತ್ರದ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಿತ್ತು. ಇದೀಗ ವಿಜಯದಶಮಿ ಸಂಭ್ರಮದಲ್ಲಿ ಮತ್ತೊಂದು ಅಪ್‌ಡೇಟ್ ಸಿಕ್ಕಿದೆ. 'ಕಾಟೇರ' ಸಿನಿಮಾ ದಿನದಿಂದ ದಿನಕ್ಕೆ ಭಾರೀ ಸದ್ದು ಮಾಡ್ತಿದೆ. ಅಭಿಮಾನಿಗಳು ಸಿನಿಮಾ ಯಾವಾಗ ರಿಲೀಸ್ ಎಂದು ಕಾತರದಿಂದ ಕಾಯುತ್ತಿದ್ದಾರೆ.

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಚಿತ್ರವನ್ನು ತರುಣ್ ಸುಧೀರ್ ಕೊಟ್ಟಿಕೊಡುತ್ತಿದ್ದಾರೆ. ಚಿತ್ರದಲ್ಲಿ 70ರ ದಶಕದ ಕತೆಯನ್ನು ಹೇಳಲಾಗ್ತಿದೆ. ಉಳುವವನೆ ಭೂಮಿಯ ಒಡೆಯ ಕಾಯ್ದೆಯ ಸುತ್ತಾ ಇಡೀ ಸಿನಿಮಾ ಕತೆ ಸುತ್ತಲಿದೆ. ದರ್ಶನ್ ಹಳ್ಳಿ ಹೈದನಾಗಿ ರಗಡ್ ಲುಕ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗ್ತಿದೆ.

Darshan Starrer Kaatera audio rights bagged by Anand Audio

ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. 2 ಹಾಡುಗಳ ಶೂಟಿಂಗ್ ಮಾತ್ರ ಬಾಕಿಯಿದೆ. ಮುಂದಿನ ವರ್ಷದ ಆರಂಭದಲ್ಲೇ 'ಕಾಟೇರ'ನಾಗಿ ದರ್ಶನ್ ಬಾಕ್ಸಾಫೀಸ್ ಅಖಾಡಕ್ಕೆ ಇಳಿತ್ತಿದ್ದಾರೆ. ಚಿತ್ರವನ್ನು ಬಹಳ ಸೊಗಸಾಗಿ ತಿದ್ದಿ ತೀಡುವ ಕೆಲಸ ನಡೀತಿದೆ. ಒಂದೊಳ್ಳೆ ತಂತ್ರಜ್ಞರು ಹಾಗೂ ಕಲಾವಿದರ ತಂಡ ಕಟ್ಟಿಕೊಂಡು ತರುಣ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

'ಕಾಟೇರ' ಮ್ಯೂಸಿಕ್ ಆಲ್ಬಂ ಬಗ್ಗೆ ಭಾರೀ ನಿರೀಕ್ಷೆಯಿದೆ. ವಿ. ಹರಿಕೃಷ್ಣ ಚಿತ್ರಕ್ಕೆ ಟ್ಯೂನ್ ಹಾಕುತ್ತಿದ್ದಾರೆ. ದರ್ಶನ್ ಹಾಗೂ ಹರಿ ಕಾಂಬಿನೇಷನ್‌ ಆಲ್ಬಂಗಳು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿರೋದು ಗೊತ್ತೇಯಿದೆ. 'ಕ್ರಾಂತಿ' ಸಿನಿಮಾ ಆಲ್ಬಮ್ ಕೂಡ ದೊಡ್ಡಮಟ್ಟದಲ್ಲಿ ಹಿಟ್ ಆಗಿತ್ತು. 'ಗೊಂಬೆ ಗೊಂಬೆ' ಹಾಗೂ ' ಶೇಕ್ ಇಟ್ ಪುಷ್ಪವತಿ' ಹಾಡುಗಳು ಇನ್ನು ಅಭಿಮಾನಿಗಳ ಬಾಯಲ್ಲಿ ನಲಿದಾಡ್ತಿದೆ. ಇದೀಗ 'ಕಾಟೇರ' ಆಲ್ಬಂ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.

ಆನಂದ್ ಆಡಿಯೋ ಸಂಸ್ಥೆ 'ಕಾಟೇರ' ಆಡಿಯೋ ರೈಟ್ಸ್ ಖರೀದಿಸಿದೆ. ಈ ಹಿಂದೆಯೇ ಇಂತಾದೊಂದು ಸುದ್ದಿ ಕೇಳಿಬಂದಿತ್ತು. ಇದೀಗ ಸ್ವತಃ ಆನಂದ್ ಆಡಿಯೋ ಪಾರ್ಟ್ನರ್ ಶ್ಯಾಮ್ ಟ್ವೀಟ್ ಮಾಡಿ ಈ ವಿಚಾರ ಸ್ಪಷ್ಟಪಡಿಸಿದ್ದಾರೆ. "ಇನ್ನು ಕಾಯಬೇಕಿಲ್ಲ. ಕಾಟೇರ ಆಡಿಯೋ ಬರ್ತಿದೆ" ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ಸಾಂಗ್ಸ್ ಆನಂದ್ ಆಡಿಯೋ ಲೇಬಲ್‌ನಲ್ಲೇ ರಿಲೀಸ್ ಆಗಿ ಸದ್ದು ಮಾಡಿತ್ತು. ಇದೀಗ ಅದೇ ಮ್ಯಾಜಿಕ್ ರಿಪೀಟ್ ಮಾಡುವ ಪ್ರಯತ್ನ ನಡೀತಿದೆ. ಚಿತ್ರದಲ್ಲಿ 5 ಹಾಡುಗಳ ಜೊತೆಗೆ ಸಣ್ಣ ಸಣ್ಣ ಬಿಟ್ಸ್ ಇದೆ ಎನ್ನಲಾಗ್ತಿದೆ.

ರಾಜ್ಯೋತ್ಸವ ಸಂಭ್ರಮದಲ್ಲಿ 'ಕಾಟೇರ' ಸಾಂಗ್ ರಿಲೀಸ್ ಆಗುವ ಸಾಧ್ಯತೆಯಿದೆ. ನವೆಂಬರ್‌ನಿಂದ ಒಂದೊಂದಾಗಿ ಲಿರಿಕಲ್ ವಿಡಿಯೋ ಸಾಂಗ್ಸ್ ಹೊರಬರೋದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬರ್ತಿದೆ. ನವೆಂಬರ್‌ 1ಕ್ಕೆ ಮೊದಲ ಹಾಡು ಬಂದರೂ ಅಚ್ಚರಿ ಪಡಬೇಕಿಲ್ಲ. 'ಕ್ರಾಂತಿ' ಸಿನಿಮಾ ನಿರ್ದೇಶನ ಜವಾಬ್ದಾರಿ ವಹಿಸಿಕೊಂಡಿದ್ದ ಹರಿಕೃಷ್ಣ ಇತ್ತೀಚೆಗೆ ಹೆಚ್ಚು ಸಂಗೀತ ಸಂಯೋಜನೆ ಮಾಡಿರಲಿಲ್ಲ. 'ಕ್ರಾಂತಿ' ಬಳಿಕ 'ಗರಡಿ' ಟ್ಯೂನ್ ಹಾಕಿದ್ದರು. ಇದೀಗ 'ಕಾಟೇರ' ಹಾಡುಗಳನ್ನು ಕಟ್ಟಿಕೊಡುತ್ತಿದ್ದಾರೆ.

ಬರೀ ಪೋಸ್ಟರ್‌ಗಳಿಂದಲೇ 'ಕಾಟೇರ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಜಗಪತಿ ಬಾಬು, ಶ್ರೀನಿವಾಸ್ ಮೂರ್ತಿ, ಬಿರಾದಾರ್, ಕುಮಾರ್ ಗೋವಿಂದ್, ಶ್ರುತಿ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಸಾಕಷ್ಟು ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗ್ತಿದೆ. ಮಾಸ್ತಿ ಸಂಭಾಷಣೆ, ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನು ಡಾ. ರಾಜ್‌ಕುಮಾರ್ 'ಭಕ್ತಪ್ರಹ್ಲಾದ' ಚಿತ್ರದಲ್ಲಿ ಹಿರಣ್ಯ ಕಶಿಪು ಅವತಾರದಲ್ಲಿ ಹೇಳಿದ್ದ ಡೈಲಾಗ್ ಅನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆ. ದರ್ಶನ್ ಆ ಡೈಲಾಗ್ ಹೇಳಿರುವ ಮೇಕಿಂಗ್ ವಿಡಿಯೋ ಲೀಕ್ ಆಗಿದೆ. ಮುಂದಿನ ವರ್ಷ ದರ್ಶನ್ ಹುಟ್ಟುಹಬ್ಬದ ವೇಳೆಗೆ 'ಕಾಟೇರ' ಸಿನಿಮಾ ತೆರೆಗಪ್ಪಳಿಸಲಿದೆ.

More from Filmibeat

English summary
Audio rights of Darshan's Kaatera bagged for a record price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X