ಜೋರಾಗಿದೆ 'ಕ್ರಾಂತಿ' ಸ್ಪೆಷಲ್ ಸಾಂಗ್ ಶೂಟಿಂಗ್: ದರ್ಶನ್ ಜೊತೆ ಕುಣಿತಿರೋ ಆ 'ಪದ್ಮಾವತಿ' ಯಾರು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿತ್ತು. ಸಿನಿಮಾ ಡಬ್ಬಿಂಗ್ ಕೂಡ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಸಾಗಿದೆ. ಇದರ ನಡುವೆ ಬಾಕಿ ಉಳಿದಿದ್ದ ಸ್ಪೆಷಲ್ ಸಾಂಗ್ ಶೂಟಿಂಗ್ ಶುರುವಾಗಿದೆ. ಇತ್ತೀಚಿಗೆ ಸ್ನೇಹಿತರ ಜೊತೆ ಥೈಲ್ಯಾಂಡ್ ಪ್ರವಾಸ ಮುಗಿಸಿದ ಬಂದಿದ್ದ ನಟ ದರ್ಶನ್ ಬಿಂದಾಸ್ ಸ್ಟೆಪ್ಸ್ ಹಾಕ್ತಿದ್ದಾರೆ.

ಕಮರ್ಷಿಯಲ್ ಸಿನಿಮಾ ಅಂದಮೇಲೆ ಒಂದು ಸ್ಪೆಷಲ್ ಸಾಂಗ್ ಇರಲೇಬೇಕು ಎನ್ನುವಂತಾಗಿದೆ. ದರ್ಶನ್- ವಿ. ಹರಿಕೃಷ್ಣ ಕಾಂಬಿನೇಷನ್‌ ಸಿನಿಮಾ ಅಂದಾಗ ಸ್ಪೆಷಲ್ ಸಾಂಗ್ ಬಗ್ಗೆ ಕ್ಯೂರಿಯಾಸಿಟಿ ಕೊಂಚ ಜಾಸ್ತಿನೇ ಇರುತ್ತೆ. ಸೂಪರ್ ಹಿಟ್ 'ಯಜಮಾನ' ಮಾಡಿದ್ದ ಅದೇ ತಂಡ 'ಕ್ರಾಂತಿ'ಗೆ ಮುನ್ನುಡಿ ಬರೆದಿದೆ. 'ಬಸಣ್ಣಿ ಬಾ' ಸಾಂಗ್ ಯಾವ ರೇಂಜಿಗೆ ಹಿಟ್ ಆಗಿತ್ತು ಎನ್ನುವುದನ್ನು ಬಿಡಿಸಿ ಹೇಳುವುದು ಬೇಕಾಗಿಲ್ಲ. ಹಾಗಾಗಿ 'ಕ್ರಾಂತಿ' ಸಿನಿಮಾ ಸ್ಪೆಷಲ್ ಸಾಂಗ್ ಹೇಗಿರುತ್ತೋ ಅಂತ ಅಭಿಮಾನಿಗಳು ಕಾಯ್ತಿದ್ದಾರೆ.

'ಕ್ರಾಂತಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸ್ವತಃ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಹಾಗಾಗಿ ಈ ಆಲ್ಬಮ್ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ದಿಲ್ಲದೇ ಚಿತ್ರದ ಡ್ಯಾನ್ಸಿಂಗ್ ನಂಬರ್ ಶೂಟಿಂಗ್ ನಡೀತಿದೆ.

'ಡ್ಯಾನ್ಸ್ ವಿತ್ ಪದ್ಮಾವತಿ' ಸಾಂಗ್ ಶೂಟಿಂಗ್

'ಡ್ಯಾನ್ಸ್ ವಿತ್ ಪದ್ಮಾವತಿ' ಸಾಂಗ್ ಶೂಟಿಂಗ್

'ಡ್ಯಾನ್ಸ್ ವಿತ್ ಪದ್ಮಾವತಿ' ಅಂತ ಶುರುವಾಗುವ 'ಕ್ರಾಂತಿ' ಚಿತ್ರದ ಸ್ಪೆಷಲ್ ಸಾಂಗ್ ಶೂಟಿಂಗ್ ಸದ್ದಿಲ್ಲದೇ ನಡೀತಿದೆ. ಕೊಡಿಗೆಹಳ್ಳಿಯಲ್ಲಿ ಸೆಟ್‌ ಹಾಕಿ ಈ ಸಾಂಗ್ ಶೂಟಿಂಗ್ ಮಾಡುತ್ತಿರುವುದಾಗಿ ಹೇಳಲಾಗ್ತಿದೆ. ಬಿಂದಾಸ್ ಚೆಲುವೆ ಜೊತೆ ದರ್ಶನ್ ಹೆಜ್ಜೆ ಹಾಕುತ್ತಿದ್ದಾರೆ. ಈವರೆಗೆ ಸಿನಿಮಾ ಕಥೆ, ಮೇಕಿಂಗ್ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಸೆಟ್‌ಗೂ ಮೊಬೈಲ್ ಫೋನ್ ತಗೊಂಡು ಹೋಗುವಂತಿಲ್ಲ. ಹಾಗಾಗಿ ಸಾಂಗ್ ಹೇಗಿರುತ್ತೋ ಎಂದು ಊಹಿಸಿಕೊಂಡು ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.

ದರ್ಶನ್ ಜೊತೆ ಕುಣಿತ್ತಿರೋ ಪದ್ಮಾವತಿ ಯಾರು?

ದರ್ಶನ್ ಜೊತೆ ಕುಣಿತ್ತಿರೋ ಪದ್ಮಾವತಿ ಯಾರು?

'ಕ್ರಾಂತಿ' ಸಿನಿಮಾ ಸಾಂಗ್‌ ಶೂಟಿಂಗ್ ನಡೀತಿದೆ ಅನ್ನೋದು ಗೊತ್ತಾಗ್ತಿದೆ. ಆದರೆ ಇದು ಐಟಂ ಸಾಂಗಾ ಅಥವಾ ಹೀರೊಯಿನ್ ಜೊತೆ ಕುಣಿಯುವ ಬಿಂದಾಸ್‌ ಸಾಂಗಾ ಅನ್ನುವುದು ಗೊತ್ತಾಗ್ತಿಲ್ಲ. ಇನ್ನು ಸ್ಯಾಂಡಲ್‌ವುಡ್‌ನಲ್ಲಿ ಪದ್ಮಾವತಿ ಅಂದಾಕ್ಷಣ ನಟಿ ರಮ್ಯಾ ನೆನಪಾಗ್ತಾರೆ. 'ಊರಿಗೊಬ್ಬಳೇ ಪದ್ಮಾವತಿ' ಅಂತ ರಮ್ಯಾ ಕುಣಿದಿದ್ದನ್ನು ಸಿನಿರಸಿಕರು ಮರೆತ್ತಿಲ್ಲ. ಹೊಸ ಪದ್ಮಾವತಿಯಾಗಿ ರಚಿತಾ ರಾಮ್ ಕುಣಿದಿದ್ದರು. ಸ್ವತಃ ಡಿಂಪಲ್ ಕ್ವೀನ್ ಈ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಹಾಗಾಗಿ ದರ್ಶನ್ ಜೊತೆ ರಚ್ಚು ಈ ಡ್ಯಾನ್ಸಿಂಗ್‌ ನಂಬರ್‌ಗೆ ಹೆಜ್ಜೆ ಹಾಕ್ತಿದ್ದಾರಾ ಅನ್ನುವ ಕುತೂಹಲವೂ ಇದೆ.

ಸ್ಪೆಷಲ್ ಸಾಂಗ್ ಹಿಟ್ ಆಗುವುದು ಗ್ಯಾರೆಂಟಿ!

ಸ್ಪೆಷಲ್ ಸಾಂಗ್ ಹಿಟ್ ಆಗುವುದು ಗ್ಯಾರೆಂಟಿ!

ದರ್ಶನ್‌ ಸಿನಿಮಾಗಳಿಗೆ ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ರೆ, ಆಲ್ಬಮ್‌ ಹಿಟ್ ಗ್ಯಾರೆಂಟಿ ಎನ್ನುವ ಮಾತಿದೆ. ಅದರಲ್ಲೂ ಸ್ಪೆಷಲ್ ಸಾಂಗ್ಸ್ ಎಲ್ಲರೂ ಸೂಪರ್ ಹಿಟ್ ಆಗಿದೆ. 'ಬಂಗಾರಿ ಯಾರೆ ನೀ ಬುಲ್‌ ಬುಲ್', 'ಕ ತಲಗಟ್ಟು ಕಾ', 'ಬಸಣ್ಣಿ ಬಾ' ಯಾವ ಮಟ್ಟಿಗೆ ಅಭಿಮಾನಿಗಳನ್ನು ಕುಣಿಸಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಇದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಬಿಂದಾಸ್ ನಂಬರ್ ಅಂದಾಕ್ಷಣ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗ್ತಿದೆ.

ರಾಜ್ಯೋತ್ಸವಕ್ಕೆ 'ಕ್ರಾಂತಿ' ಗ್ರ್ಯಾಂಡ್ ರಿಲೀಸ್

ರಾಜ್ಯೋತ್ಸವಕ್ಕೆ 'ಕ್ರಾಂತಿ' ಗ್ರ್ಯಾಂಡ್ ರಿಲೀಸ್

ಅಕ್ಷರ ಕ್ರಾಂತಿಯ ಕುರಿತು 'ಕ್ರಾಂತಿ' ಸಿನಿಮಾ ಮೂಡಿ ಬರ್ತಿದೆ. ಚಿತ್ರದಲ್ಲಿ ಸುಮಲತಾ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಸಿನಿಮಾ ನಿರ್ಮಿಸಿದ್ದು, ರಾಜ್ಯೋತ್ಸವದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

More from Filmibeat

English summary
Darshan Starrer Kranti Movie Special Song shoot in full swing. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X