For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಒಡೆಯ' ಹಾಡುಗಳ ತಕಧಿಮಿತಾ: ದಾಖಲೆಗಳು ಧೂಳಿಪಟ

  |

  'ಕುರುಕ್ಷೇತ್ರ' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಆದ್ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆತ್ತಿಕೊಂಡ ಪ್ರಾಜೆಕ್ಟ್ 'ಒಡೆಯ'. ಎಂ.ಡಿ.ಶ್ರೀಧರ್ ನಿರ್ದೇಶನದ 'ಒಡೆಯ' ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

  'ಒಡೆಯ' ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಅನೌನ್ಸ್ ಆಗಿಲ್ಲ. ಹೀಗಿರುವಾಗಲೇ, 'ಒಡೆಯ'ನ ದರ್ಬಾರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ತಾಗಿದೆ. ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ 'ಒಡೆಯ' ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಆಗಿತ್ತು.

  ಅರ್ಜುನ್ ಜನ್ಯ ಸಂಗೀತ ನೀಡಿರುವ, ವ್ಯಾಸರಾಜ್ ಹಾಡಿರುವ, ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ 'ಒಡೆಯ ಹೇ ಒಡೆಯ...' ಹಾಡು ಯೂಟ್ಯೂಬ್ ನಲ್ಲಿ ಅಕ್ಷರಶಃ ಧೂಳೆಬ್ಬಿಸಿದೆ. ಸದ್ಯ ಟ್ರೆಂಡಿಂಗ್ ನಲ್ಲಿ ಇರುವ ಈ ಹಾಡಿಗೆ 16 ಲಕ್ಷಕ್ಕೂ ಹೆಚ್ಚು ವ್ಯೂಸ್ ಬಂದಿದೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಈ ಹಾಡನ್ನು ಮೆಚ್ಚಿದ್ದಾರೆ.

  ವಿಡಿಯೋ: ನಂಜಿ ಮೇಲೆ 'ಒಡೆಯ'ನಿಗೆ ಶಾನೆ ಲವ್ ಆಗಿದೆವಿಡಿಯೋ: ನಂಜಿ ಮೇಲೆ 'ಒಡೆಯ'ನಿಗೆ ಶಾನೆ ಲವ್ ಆಗಿದೆ

  ಇನ್ನೂ ಎರಡು ದಿನಗಳ ಹಿಂದೆಯಷ್ಟೇ ರಿಲೀಸ್ ಆದ 'ಶ್ಯಾನೆ ಲವ್ ಆಗೋಯ್ತಲ್ಲೇ ನಂಜಿ' ಹಾಡು ಕೂಡ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಸದ್ಯಕ್ಕೆ ಈ ಹಾಡಿಗೆ 9 ಲಕ್ಷಕ್ಕೂ ಹೆಚ್ಚು ವ್ಯೂಸ್ ಲಭಿಸಿದೆ. ಈ ಮೂಲಕ 'ಒಡೆಯ' ಹಾಡುಗಳು ಹೊಸ ದಾಖಲೆ ಬರೆಯುತ್ತಿವೆ.

  'ಒಡೆಯ' ಚಿತ್ರದ 'ಒಡೆಯ ಹೇ ಒಡೆಯ..' ಹಾಡು ಕೇಳಲು ರೆಡಿಯಾಗಿ'ಒಡೆಯ' ಚಿತ್ರದ 'ಒಡೆಯ ಹೇ ಒಡೆಯ..' ಹಾಡು ಕೇಳಲು ರೆಡಿಯಾಗಿ

  ಅಂದ್ಹಾಗೆ, 'ಒಡೆಯ' ಚಿತ್ರಕ್ಕೆ ಎಂ.ಡಿ.ಶ್ರೀಧರ್ ಆಕ್ಷನ್ ಕಟ್ ಹೇಳಿದ್ದರೆ, ಎನ್.ಸಂದೇಶ್ ನಿರ್ಮಾಣ ಮಾಡಿದ್ದಾರೆ. ಇನ್ನೊಂದು ಸ್ವಲ್ಪ ದಿನಗಳಲ್ಲಿ 'ಒಡೆಯ' ಗ್ರ್ಯಾಂಡ್ ರಿಲೀಸ್ ಆಗಲಿದೆ. ನೋಡಲು ನೀವು ರೆಡಿನಾ.?

  English summary
  Challenging Star Darshan starrer Odeya songs trending in Social Media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X