kaatera: 'ಪಸಂದಗವನೇ' ಕಾಟೇರ: ಶುರುವಾಗುತೈತೆ ಗಾನಬಜಾನಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಹೇಳಿ ಇತ್ತೀಚೆಗೆ ಚಿತ್ರತಂಡ ಶಾಕ್ ಕೊಟ್ಟಿತ್ತು. ಪ್ರಚಾರ ಮಾಡೋಕೆ ಒಂದು ತಿಂಗಳು ಸಾಕಾ ಎಂದು ಕೆಲ ಅಭಿಮಾನಿಗಳು ಕೇಳಿದ್ದರು. ಮಾಡಿ ತೋರಿಸುತ್ತೇನೆ ಎಂದು ನಿರ್ದೇಶಕರು ಹೇಳಿದ್ದರು.

ಬಹುನಿರೀಕ್ಷಿತ 'ಕಾಟೇರ' ಸಾಂಗ್ಸ್‌ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಯೂಟ್ಯೂಬ್‌ನಲ್ಲಿ ಒಂದೊಂದೇ ಸಾಂಗ್ ರಿಲೀಸ್ ಮಾಡೋಕೆ ಚಿತ್ರತಂಡ ಮುಂದಾಗಿದೆ. ಫಸ್ಟ್ ಸಾಂಗ್ ರಿಲೀಸ್ ಡೇಟ್‌, ಟೈಮ್ ಕೂಡ ಈಗ ರಿವೀಲ್ ಆಗಿದೆ. ಡಿಸೆಂಬರ್ 4ರಂದು ಮಧ್ಯಾಹ್ನ 12.30ಕ್ಕೆ ಚಿತ್ರದ 'ಪಸಂದಗವನೇ' ಸಾಂಗ್ ರಿಲೀಸ್ ಆಗಲಿದೆ.

Darshans Kaatera First song Pasandagavane Releasing On 4Th December

'ಕಾಟೇರ' ಚಿತ್ರಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ಟೀಸರ್‌ನಲ್ಲಿದ್ದ ಬಿಜಿಎಂಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಫಸ್ಟ್ ಸಾಂಗ್ ರಿಲೀಸ್ ಸಮಯ ಬಂದಿದೆ. ಪಕ್ಕಾ ಹಳ್ಳಿ ಸ್ಟೈಲ್ ಡ್ಯುಯೆಟ್ ಸಾಂಗ್ 'ಪಸಂದಗವನೇ'. ಕಲರ್‌ಫುಲ್ ಪೋಸ್ಟರ್ ಸಮೇತ ಕುತೂಹಲ ಮೂಡಿಸಿದೆ ಚಿತ್ರತಂಡ. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ಕಾಣಿಸಿಕೊಂಡಿದ್ದಾರೆ.

'ಪಸಂದಗವನೇ' ಕಲರ್‌ಫುಲ್ ಸೆಟ್‌ನಲ್ಲಿ ಶೂಟ್ ಮಾಡಿರುವ ಸಾಂಗ್ ರೀತಿ ಕಾಣುತ್ತಿದೆ. ದರ್ಶನ್ ಹಾಗೂ ಆರಾಧನಾ ಕಲರ್‌ಫುಲ್ ಕಾಸ್ಟ್ಯೂಮ್ಸ್‌ನಲ್ಲಿ ಮಿಂಚಿದ್ದಾರೆ. ಬಣ್ಣಬಣ್ಣದ ಅಂಗಿ ಹಾಗೂ ಲುಂಗಿ ತೊಟ್ಟು ದರ್ಶನ್ ಕಾಣಿಸಿಕೊಂಡಿದ್ದರೆ ಲಂಗ ದಾವಣಿಯಲ್ಲಿ ಆರಾಧನಾ ಕಂಗೊಳಿಸುತ್ತಿದ್ದಾರೆ. ಸುತ್ತಾ ಒಂದಷ್ಟು ಜನ ಡ್ಯಾನ್ಸರ್ಸ್ ಸಾಥ್ ಕೊಟ್ಟಿದ್ದಾರೆ. ಸೋಮವಾರ ಲಿರಿಕಲ್ ವಿಡಿಯೋ ಸಾಂಗ್ ಮಾತ್ರ ರಿಲೀಸ್ ಆಗಲಿದೆ.

ಹರಿಕೃಷ್ಣ, ದರ್ಶನ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್‌ ಸೂಪರ್ ಹಿಟ್ ಆಗಿದೆ. ದರ್ಶನ್ ಸಿನಿಮಾಗೆ ಹರಿಕೃಷ್ಣ ಮ್ಯೂಸಿಕ್ ಮಾಡಿ ಭಟ್ರು ಸಾಹಿತ್ಯ ಬರೆದ್ರೆ ಸಾಂಗ್ ಸದ್ದು ಮಾಡೋದು ಗ್ಯಾರೆಂಟಿ. 'ಕ್ರಾಂತಿ' ಸಿನಿಮಾ ಸಾಂಗ್ಸ್‌ನಲ್ಲೂ ಇದೇ ಮ್ಯಾಜಿಕ್ ನಡೆದಿತ್ತು. ಇದೀಗ 'ಕಾಟೇರ' ಭಟ್ರು ಬರೆದಿರುವ ಸಾಧ್ಯತೆಯಿದೆ. ಪಕ್ಕಾ ಹಳ್ಳಿ ಸೊಗಡಿನ ಈ ಡ್ಯಾನ್ಸ್ ನಂಬರ್‌ಗೂ ಯೋಗರಾಜ್ ಭಟ್ರು ಸಾಹಿತ್ಯ ಬರೆದಿದ್ದಾರಾ? ಕಾದು ನೋಡಬೇಕಿದೆ.

ಸುತ್ತಾ ಒಂದಷ್ಟು ಲಾರಿಗಳನ್ನು ನಿಲ್ಲಿಸಿ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಿದಂತೆ ಕಾಣುತ್ತಿದೆ. 'ಕಾಟೇರ' ಚಿತ್ರದ ಮೂಲಕ ಆರಾಧನಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆ ಬಗ್ಗೆ ಭಾರೀ ನಿರೀಕ್ಷೆಯಿದೆ. ಇನ್ನು ದರ್ಶನ್- ಆರಾಧನಾ ಜೋಡಿ ನೋಡುವುದಕ್ಕೂ ಅಭಿಮಾನಿಗಳು ಕಾಯುತ್ತಿದ್ದಾರೆ.

ರಾಕ್‌ಲೈನ್ ವೆಂಕಟೇಶ್ 'ಕಾಟೇರ' ಸಿನಿಮಾ ನಿರ್ಮಿಸಿದ್ದಾರೆ. ಸದ್ಯ ಚಿತ್ರತಂಡ ಹೈದರಾಬಾದ್‌ನಲ್ಲಿ ಬೀಡುಬಿಟ್ಟಿದೆ. ಚಿತ್ರಕ್ಕೆ ಅಂತಿಮ ಸ್ಪರ್ಶ ಕೊಡುವ ಕೆಲಸ ನಡೀತಿದೆ. ಶೀಘ್ರದಲ್ಲೇ ಸೆನ್ಸಾರ್ ಸರ್ಟಿಫಿಕೇಟ್ ಕೂಡ ಸಿಗಲಿದೆ. 'ಕಾಟೇರ' ಚಿತ್ರದಲ್ಲಿ 70ರ ದಶಕದ ಕತೆ ಹೇಳಲಾಗುತ್ತಿದೆ. 'ಉಳುವವನೆ ಭೂಮಿಯ ಒಡೆಯ' ಕಾಯ್ದೆಯ ಹಿನ್ನೆಲೆಯಲ್ಲಿ ಸಿನಿಮಾ ಕತೆ ಸಾಗಲಿದೆ.

50 ವರ್ಷಗಳ ಹಿಂದಿನ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಸಾಕಷ್ಟು ಶ್ರಮಿಸಿದೆ. ಚಿತ್ರದಲ್ಲಿ ಜಗಪತಿ ಬಾಬು, ಶ್ರುತಿ, ಕುಮಾರ್ ಗೋವಿಂದ್, ಬಿರಾದಾರ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಮಾಸ್ತಿ ಸಂಭಾಷಣೆ, ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.

ವರ್ಷದ ಕೊನೆಗೆ 'ಕಾಟೇರ' ಸಿನಿಮಾ ರಿಲೀಸ್ ಆಗ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ವರ್ಷದ ಕೊನೆ ವಾರ ತೆರೆಕಂಡ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿರುವ ಸಾಕಷ್ಟು ಉದಾಹರಣೆಯಿದೆ. ಅದೇ ಸಾಲಿಗೆ 'ಕಾಟೇರ' ಸಹ ಸೇರುವ ಸುಳಿವು ಸಿಗುತ್ತಿದೆ. ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
first single of Kaatera is ready to release;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X