ಅಂದು ಸಮೋಸ ಮಾರುತ್ತಿದ್ದವರ ಮಗಳು ಇದೀಗ 'ಕೋಟ್ಯಾಧಿಪತಿ'; ಯಾರಿವರು?

By ಅನಿತಾ ಬನಾರಿ

ಹೌದು, ಕಲಾವಿದರು ಎಂದ ಮೇಲೆ ಸಿನಿಮಾ ಡ್ಯಾನ್ಸ್ ಅಥವಾ ಸಂಗೀತ ಹೀಗೆ ಯಾವುದೇ ಕಲೆಯಾದರೂ ಸರಿ ತಮ್ಮ ತಮ್ಮ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಬೇಕೆಂಬ ಕನಸು ಕಾಣುತ್ತಿರುತ್ತಾರೆ. ಇಂದು ನಾವು ಹಲವಾರು ಕಲಾವಿದರನ್ನು, ಕಲೆಯನ್ನು ನಮ್ಮ ದೈನಂದಿನ ಜೀವನದಲ್ಲಿ ನೋಡುತ್ತಲೇ ಇದ್ದೇವೆ.

ಅಂಥದ್ದೇ ಒಂದು ಕಲಾವಿದೆಯ ಕಥೆ ಇದು. ಭಾರತ ಕಂಡ ಅದ್ಬುತ ಗಾಯಕರಲ್ಲಿ ಒಬ್ಬರಾದ ಗಾಯಕಿ ನೇಹಾ ಕಕ್ಕರ್ ಹಿಂದಿ ಗಾಯನ ಪ್ರಿಯರಿಗಂತೂ ಅಚ್ಚುಮೆಚ್ಚು. ಗಾಯಕಿ ನೇಹಾ ಕಕ್ಕರ್ ಇದೀಗ ಒಂದು ದಶಕದಿಂದ ಬಹಳ ಪಾಪ್ಯುಲಾರಿಟಿಯನ್ನು ಪಡೆದಿದ್ದಾರೆ. ಇದಕ್ಕೂ ಮೊದಲು ಗಾಯಕಿ ನೇಹಾ ಕಕ್ಕರ್ ಅವರ ಜೀವನ ಹೇಗಿತ್ತು ಎಂಬ ಕುತೂಹಲ ಎಲ್ಲರಿಗೂ ಇದೆ.

Daughter of a samosa seller is now a millionaire become most popular in films

ನೇಹಾ ಕಕ್ಕರ್ ಕಡುಬಡತನದಿಂದ ಬಂದ ಹುಡುಗಿ. ಅವರ ತಂದೆ ಸಮೋಸ ಮಾರುತಿದ್ದರು. ಅವರು ಬಾಲ್ಯವಿಡೀ ಒಂದು ಬೆಡ್ ರೂಮಿನ ಮನೆಯಲ್ಲೇ ಕಳೆದಿದ್ದರು. ಸುಮಾರು ನಾಲ್ಕು ವರ್ಷದವರಿದ್ದಾಗಲೇ ನೇಹಾ ಕಕ್ಕರ್ ಹಾಡಲು ಆರಂಭಿಸಿದ್ದರು. ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಾಡುತ್ತಿದ್ದರು. ಪ್ರತಿ ಕಾರ್ಯಕ್ರಮದಲ್ಲಿ ಹಾಡಿದಾಗಲೂ ಇವರಿಗೆ 50 ರೂಪಾಯಿ ಸಿಗುತ್ತಿತ್ತು.

ಈ ರೀತಿ ಮುಂದೆ ಬಂದ ಈಕೆ ನಂತರ ಇಂಡಿಯನ್ ಐಡಲ್‌ಗೆ ಹೋಗುತ್ತಾರೆ. ಆದರೆ, ಶಾಸ್ತ್ರೀಯವಾಗಿ ಸಂಗೀತವನ್ನು ಕಲಿಯದ ಕಾರಣ ಬಹುಬೇಗ ಎಲಿಮಿನೇಟ್ ಆಗುತ್ತಾರೆ. ಆದರೂ, ಎದೆಗುಂದದ ನೇಹಾ ಕಕ್ಕರ್, ಕಾರ್ಯಕ್ರಮಗಳಲ್ಲಿ ಹಾಡುವುದನ್ನು ಮುಂದುವರೆಸಿದ್ದರು. ನಂತರ ಅವರಿಗೆ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಹಾಡಲು ಅವಕಾಶ ದೊರೆಯಿತು.

ಖಾಸಗಿ ಸಂದರ್ಶನ ಒಂದರಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನೆದ ಗಾಯಕಿ ನೇಹಾ ಕಕ್ಕರ್ "ನಾನು ಚಿಕ್ಕವಳಿದ್ದಾಗ ನಮ್ಮ ತಂದೆ ಸಮೋಸ ಮಾರಿ ಜೀವನ ನಡೆಸುತ್ತಿದ್ದರು. ಜೀವನದಲ್ಲಿ ಆರ್ಥಿಕವಾಗಿ ಬಹಳಷ್ಟು ಸಂಕಷ್ಟಗಳು ಇದ್ದವು. ನಾವು ಒಂದು ಬೆಡ್ ರೂಮಿನ ಪುಟ್ಟ ಮನೆಯಲ್ಲಿದ್ದೆವು. ಈ ಎಲ್ಲ ಕಾರಣಕ್ಕೆ ನಾನು ಚಿಕ್ಕವಯಸ್ಸಿನಿಂದಲೇ ದುಡಿಯಲು ಹೊರಟೆ. ಪ್ರತಿ ಕಾರ್ಯಕ್ರಮಕ್ಕೂ ನನಗೆ 50 ರೂಪಾಯಿ ಸಿಗುತ್ತಿತ್ತು. ಆ ರೀತಿ ನನ್ನ ಗಾಯನದ ಜರ್ನಿ ಶುರುವಾಯಿತು. ಇಂದು ನಾನು ಏನೆಲ್ಲಾ ಆಗಿದ್ದೇನೋ ಅದಕ್ಕೆ ನನ್ನ ಕುಟುಂಬದವರ ಸಹಕಾರವೇ ಕಾರಣ" ಎಂದಿದ್ದಾರೆ.

Daughter of a samosa seller is now a millionaire become most popular in films

ಗಾಯಕಿ ನೇಹಾ ಕಕ್ಕರ್ "ದಿಲ್ಬರ್ ದಿಲ್ಬರ್.." ಹಾಡಿನ ಮೂಲಕ ಬಹಳಷ್ಟು ಪಾಪ್ಯುಲಾರಿಟಿಯನ್ನು ಪಡೆದರು. ಸೆಕೆಂಡ್ ಹ್ಯಾಂಡ್ ಜವಾನಿ ಹಾಡು ನೇಹಾ ಜೀವನದ ಬಹುದೊಡ್ಡ ತಿರುವು ಕೊಟ್ಟಿತ್ತು. 'ಕಾಕ್ಟೇಲ್' ಸಿನಿಮಾದ ಈ ಹಾಡಿಗೆ ಸಂಗೀತ ನಿರ್ದೇಶಕ ಪ್ರೀತಮ್ ಅವರೊಂದಿಗೆ ಕೆಲಸ ಮಾಡಿ ನಿಧಾನವಾಗಿ ಜನಪ್ರಿಯತೆಯನ್ನು ಪಡೆಯುತ್ತಾ ಬಂದರು. ಇಂದು ಅವರಿಗೆ ಭಾರತದಾದ್ಯಂತ ಬಹುದೊಡ್ಡ ಫ್ಯಾನ್ ಬೇಸ್ ಇದೆ.

'ಕ್ವೀನ್' ಸಿನಿಮಾದ "ಲಂಡನ್ ತುಮಕ್ದ..", 'ಯಾರಿಯಾನ್' ಸಿನಿಮಾದ "ಸನ್ನಿ ಸನ್ನಿ", ಸತ್ಯಮೇವ ಜಯತೆ, ದಿಲ್ಬರ್, ಅಂಕ್ ಮಾರೇ, ಹೀಗೆ ನೇಹಾ ಗಾಯನದಲ್ಲಿ ಮತ್ತೆ ತಿರುಗಿ ನೋಡಲೇ ಇಲ್ಲ. ಇಂದಿಗೂ ಹಲವಾರು ಸಿನಿಮಾಗಳಲ್ಲಿ ಹಾಡುವ ಗಾಯಕಿ ನೇಹಾ ಕಕ್ಕರ್ ತಮ್ಮ ವಿಭಿನ್ನ ಸ್ವರಕ್ಕೆ ಹೆಸರುವಾಸಿಯಾಗಿದ್ದಾರೆ.

2005ರಲ್ಲಿ ಇಂಡಿಯನ್ ಐಡಲ್‌ನಲ್ಲಿ ಭಾಗವಹಿಸಿ ಸೋತ ಈಕೆ, ಇದೀಗ ಅದೇ ರಿಯಾಲಿಟಿ ಶೋನ ಜಡ್ಜ್ ಆಗಿದ್ದಾರೆ. ಇಂದು ಗಾಯಕಿ ನೇಹಾ ಕಕ್ಕರ್ ಅವರ ಆಸ್ತಿ ಬರೋಬ್ಬರಿ 104 ಕೋಟಿ ರೂಪಾಯಿಗಳು. ಜೀವನದಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಬಂದರೂ, ಸಾಧನೆ ಮಾಡುವ ಛಲವೊಂದಿದ್ದರೆ ಸಾಕು ಎಂಬುದಕ್ಕೆ ಗಾಯಕಿ ನೇಹ ಕಕ್ಕರ್ ಅವರೇ ಸಾಕ್ಷಿ.

More from Filmibeat

English summary
Do you know what singer Neha Kakkar's childhood life was like
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X