'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾದ ಮೊದಲ ಹಾಡು ಕೇಳಿ
'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾ ಈಗಾಗಲೇ ಒಂದು ಮಟ್ಟಕ್ಕೆ ಸ್ಯಾಂಡಲ್ ವುಡ್ ಪ್ರೇಕ್ಷಕರ ಗಮನ ಸೆಳೆದಿದೆ. ಈ ಸಿನಿಮಾದ ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ. ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಯೂ ಟ್ಯೂಬ್ ಚಾನಲ್ ನಲ್ಲಿ ಹಾಡು ಹೊರಬಂದಿದೆ.
ಹಾಡಿನ ಮ್ಯೂಸಿಕ್ ವಿಶೇಷವಾಗಿದೆ. 'ಜೀವಕ್ಕಿಲ್ಲಿ ಜೀವ ಬೇಟೆ' ಎನ್ನುವ ಈ ಹಾಡನ್ನು ನಟ ಡಾಲಿ ಧನಂಜಯ್ ಬರೆದಿದ್ದಾರೆ. 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ಮಿಥುನ್ ಮುಕುಂದನ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕಾರ್ತಿಕ್ ಚಿನ್ನೋಜಿ ರಾವ್, ನಾರಾಯಣ್ ಶರ್ಮಾ ಹಾಗೂ ಮಿಥುನ್ ಮುಕುಂದನ್ ಹಾಡಿಗೆ ಧ್ವನಿ ನೀಡಿದ್ದಾರೆ.

'ಡಾಟರ್ ಆಫ್ ಪಾರ್ವತಮ್ಮ' ಚಿತ್ರದಲ್ಲಿ ಹರಿಪ್ರಿಯಾ ವೈದೇಹಿ ಹೆಸರಿನ ತನಿಖಾಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಇದು ಅವರ 25ನೇ ಸಿನಿಮಾವಾಗಿದೆ. ಹರಿಪ್ರಿಯಾಗೆ ತಾಯಿಯಾಗಿ ಸುಮಲತಾ ನಟಿಸಿದ್ದಾರೆ. ಶಂಕರ್ ಜಿ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.
ಶ್ರೀಮುರಳಿ ಈ ಹಾಡನ್ನು ಬಿಡುಗಡೆ ಮಾಡಿದ್ದು, ಧನಂಜಯ್ ಸಾಹಿತ್ಯ ಹಾಗೂ ಮ್ಯೂಸಿಕ್ ಅನ್ನು ಮೆಚ್ಚಿಕೊಂಡಿದ್ದಾರೆ. ಅಂದಹಾಗೆ, 'ಡಾಟರ್ ಆಫ್ ಪಾರ್ವತಮ್ಮ' ಚಿತ್ರ ಮೇ 24 ರಂದು ರಾಜ್ಯಾದಂತ್ಯ ಬಿಡುಗಡೆಯಾಗಲಿದೆ.


Click it and Unblock the Notifications











