ಲಕ್ ಅಂದ್ರೆ ಇದೇ ಇರಬೇಕು ; ಹೀರೋಯಿನ್ ಆದ ದೆಹಲಿಯ ವೈರಲ್ ವಡಾ ಪಾವ್ ಹುಡುಗಿ..!

ಯಾರಿಗೆ ಎಲ್ಲಿ, ಹೇಗೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಯಾರಿಂದನೂ ಊಹಿಸಲು ಸಾಧ್ಯ ಇಲ್ಲ. ಕುರಿಕಾಯುತ್ತಾ ತನಗಿಷ್ಟ ಬಂದಂತೆ ಹಾಡುತ್ತಿದ್ದ ಹನುಮಂತ ಸರಿಗಮಪ ಸೀಜನ್ 15ರ ರನ್ನರ್ ಅಪ್ ಆಗುತ್ತಾನೆಂದರೆ ತಮಾಷೆಯ ಮಾತೇ.? ಇನ್ನೂ ಕೇವಲ ಕಣ್ಸನ್ನೆಯಿಂದ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ವಾರಿಯರ್ ಅವರದ್ದು ಅದೃಷ್ಟವಲ್ಲದೇ ಮತ್ತೇನು..? ಇಷ್ಟೇ ಯಾಕೆ..ರೈಲ್ವೆ ಸ್ಟೇಷನ್ನಿನಲ್ಲಿ ಹಾಡುತ್ತಿದ್ದ ರಾಣು ಮಂಡಾಲ್ ರಾತ್ರೋ ರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದು ಕೂಡ ಇದೇ ಅದೃಷ್ಟದಿಂದ ಅಲ್ಲವೇ..? ಈ ಸಾಲಿಗೆ ಈಗ ದೆಹಲಿಯ ಚಂದ್ರಿಕಾ ದೀಕ್ಷಿತ್ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಹೌದು, ಚಂದ್ರಿಕಾ ದೀಕ್ಷಿತ್ .. ಬದುಕಿನ ಬಂಡಿಯನ್ನ ಎಳೆಯಲು ಕಳೆದ ನಾಲ್ಕು ವರ್ಷದಿಂದ ಹರ ಸಾಹಸ ಮಾಡುತ್ತಿದ್ದ ಹೆಣ್ಣು. ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿ, ಕುಟುಂಬ ನಿರ್ವಹಣೆಗೆ ದೆಹಲಿ ಬೀದಿ ಬದಿಯಲ್ಲಿ ವಡಾ-ಪಾವ ಮಾರುತ್ತಿದ್ದ ಚಂದ್ರಿಕಾ ದೀಕ್ಷಿತ್ ಹಣೆಬರಹ ಬದಲಿಸಿದ್ದು ಇದೇ ಸೋಶಿಯಲ್ ಮೀಡಿಯಾ.

delhis-viral-vada-pav-girl-chandrika-gera-dixit-marks-her-debut-in-the-music-with-the-song-darji

ಚಂದ್ರಿಕಾ ವಡಾ-ಪಾವ ಮಾರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಹಂಚಿಕೊಂಡಿದ್ದೇ ತಡ, ಚಂದ್ರಿಕಾ ಅವರ ತಳ್ಳುವ ಗಾಡಿಯ ಮುಂದೆ ಕಣ್ಣಾಯಿಸಿದ ಕಡೆಯೆಲ್ಲ ಜನ ಕಂಡು ಬಂದರು. ದಿನಕ್ಕೊಬ್ಬರು ವಡಾ ಪಾವ್ ಮತ್ತು ಚಂದ್ರಿಕಾ ಅವರ ವಿಡಿಯೋಗಳನ್ನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳತೊಡಗಿದರು. ನೋಡ .. ನೋಡುತ್ತಾ.. ಸಾಮಾಜಿಕ ಜಾಲತಾಣದಲ್ಲಿ ಇವರ ಹಿಂಬಾಲಕರ ಸಂಖ್ಯೆ ಹೆಚ್ಚಾಯಿತು. 70 ಲಕ್ಷ ಬೆಲೆ ಬಾಳುವ ಪೋರ್ಡ್ ಮಸ್ಟಾಂಗ್ ಕಾರು ಕೂಡ ಚಂದ್ರಿಕಾ ಅವರನ್ನ ಅರಸಿಕೊಂಡು ಬಂತು

ಹೀಗೆ ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ, ವಡಾ ಪಾವ್ ಹುಡುಗಿ ಎಂದೇ ಜನಜನಿತವಾದ ಚಂದ್ರಿಕಾ ದೀಕ್ಷಿತ್ ಈಗ ಬೀದಿಯಿಂದ ಬಣ್ಣದ ಪ್ರಪಂಚಕ್ಕೆ ಬಂದಿದ್ದಾರೆ. ಆಲ್ಬಂ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಸದ್ಯಕ್ಕೆ ಚಂದ್ರಿಕಾ ಅವರ ಈ ಹೆಜ್ಜೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವಡಾ ಪಾವ್ ಹುಡುಗಿಯ ಬಿಂಕ-ಬಿನ್ನಾಣ- ವಯ್ಯಾರ ಕಂಡು ಪಡ್ಡೆ ಹುಡುಗರ ಗುಂಪು ದಿಗ್ಗನೆ ಎದ್ದು ಕುಂತಿದೆ.

delhis-viral-vada-pav-girl-chandrika-gera-dixit-marks-her-debut-in-the-music-with-the-song-darji

ಪಂಜಾಬಿ ಗಾಯಕ ಅಮನ್‌ದೀಪ್‌ ಸಿಂಗ್ ಈ ಹಾಡಿನ ರೂವಾರಿ. ಕಂಠ ಕೂಡಾ ಇವರದ್ದೇ ಹಣ ಕೂಡ ಇವರದ್ದೇ. ಇನ್ನೂ.. ಈ ಹಾಡನ್ನ ಇಲ್ಲಿಯವರೆಗೆ ಒಂದೂವರೆ ಲಕ್ಷಕ್ಕೂ ಅಧಿಕ ಜನ ಕಣ್ತುಂಬಿಕೊಂಡಿದ್ದಾರೆ. ಹಣೆಬರಹಕ್ಕೆ ಹೊಣೆ ಯಾರು ಎಂದು ಕೆಲವರು ಕಮೆಂಟ್ ಸೆಕ್ಷನ್ ನಲ್ಲಿ ತಮ್ಮ ಅಳಲನ್ನೂ ತೋಡಿಕೊಂಡಿದ್ದಾರೆ.

ಇನ್ನೂ ಈ ಕಡೆ ಹಾಡಲ್ಲಿ ಚಂದ್ರಿಕಾ ಸೊಂಟ ಬಳುಕಿಸಿದ್ದನ್ನ ನೋಡಿದ ಅನೇಕರಿಗೆ ಇದೇ ಸಮಯದಲ್ಲಿ ಚಂದ್ರಿಕಾ ತಮ್ಮ ಕೈಯಾರೆ ಮಾಡುವ ರುಚಿ-ಶುಚಿಯಾದ ವಡಾ ಪಾವ್ ತಿನ್ನುವ ಭಾಗ್ಯ ಇನ್ಮುಂದೆ ಸಿಗಲ್ಲವಾ ಅನ್ನುವ ಚಿಂತೆ ಕಾಡ್ತಿದೆ. ಕೆಲವರಿಗೆ ಬಾಲಿವುಡ್ ನಲ್ಲಿ ಈ ವಡಾ ಪಾವ್ ಚೆಲುವೆಯ ಭವಿಷ್ಯವೂ ಕಾಣ್ತಿದೆ.

delhis-viral-vada-pav-girl-chandrika-gera-dixit-marks-her-debut-in-the-music-with-the-song-darji

ಒಟ್ನಲ್ಲಿ ಸದ್ಯಕ್ಕೆ ವಡಾ ಪಾವ್ ಮಾರುತ್ತಿದ್ದ ಚಂದ್ರಿಕಾ ದೀಕ್ಷಿತ್ ಬದುಕು ಬದಲಾಗಿದೆ. ಬಣ್ಣದ ಲೋಕ ಇವರನ್ನ ಅಪ್ಪಿಕೊಂಡಿದೆ. ಇನ್ನೂ.. ಎಷ್ಟೇ ಆದರೂ ಇದು ಬಣ್ಣದ ಲೋಕ. ಈ ಲೋಕಕ್ಕೆ ಟಾರ್ ರೋಡ್‌ನಲ್ಲಿದ್ದವರನ್ನ ಕರೆದು ಸ್ಟಾರ್ ಮಾಡುವುದು ಗೊತ್ತು. ಸ್ಟಾರ್ ಆದರವನ್ನ ಜೀರೋ ಮಾಡುವುದು ಗೊತ್ತು.

ಎಲ್ಲಕ್ಕಿಂತ ಹೆಚ್ಚಾಗಿ ಲಕ್ ಅನ್ನೋದೆ ಹಂಗೇ. ಯಾವ ಟೈಮ್‌ನಲ್ಲಿ ಎಂಥವರಿಗೆ ಕಿಕ್ ಕೊಡುತ್ತೆ ಅನ್ನೋದೇ ಗೊತ್ತಾಗಲ್ಲ. ಸೋತವರಿಗೆ ಇಲ್ಲಿ ಸುಣ್ಣ ಸಿಕ್ಕರೆ, ಗೆದ್ದವರು ಬಣ್ಣದ ರಂಗಲ್ಲಿ ತೇಲುವ ಪ್ರಯತ್ನ ಮಾಡ್ತಾರೆ. ಚಂದ್ರಿಕಾ ದೀಕ್ಷಿತ್ ಇದಕ್ಕೆ ಅತ್ಯುತ್ತಮ ಉದಾಹರಣೆ.

More from Filmibeat

English summary
-Delhi's viral "Vada Pav Girl" Chandrika Dixit releases her debut song "Darji"; Netizens share their reactions - Watch the video!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X