ವೇದಿಕೆಗಳಲ್ಲಿ ರಘು ದೀಕ್ಷಿತ್ ಪಂಚೆ ಉಟ್ಟು, ಗೆಜ್ಜೆ ಕಟ್ಟಿ ಹಾಡುವುದು ಯಾಕೆ?

ಬೆಂಗಳೂರಿನಲ್ಲಿ ರಘು ದೀಕ್ಷಿತ್ ಲೈವ್ ಕಾನ್ಸರ್ಟ್ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು. ಮಳೆಯನ್ನು ಲೆಕ್ಕಿಸದೇ ಸಂಗೀತ ಪ್ರೇಮಿಗಳು ರಘು ಸಂಗೀತ, ಗಾಯನಕ್ಕೆ ಮಾರು ಹೋದರು. ತಮ್ಮ ವಿಭಿನ್ನ ಶೈಲಿಯ ಹಾಡುಗಳಿಂದ ಸಂಗೀತ ಸಂಜೆಯನ್ನು ರಘು ಯಶಸ್ವಿಗೊಳಿಸಿದರು. ಅಕಾರ್ ಅಡ್ವರ್ಟೈಸಿಂಗ್ & ಮಾರ್ಕೆಟಿಂಗ್, ಹಮ್ಮಿಂಗ್‌ಬರ್ಡ್ ಇಂಕ್ ಈವೆಂಟ್ಸ್ ಮತ್ತು ಟ್ರೈಬ್‌ವೈಬ್‌ ಈ ಲೈವ್ ಕಾನ್ಸರ್ಟ್‌ ಅನ್ನು ಯಶಸ್ವಿಗೊಳಿಸಿವೆ. ಇನ್ನು ವೇದಿಕೆಯಲ್ಲಿ ಯಾಕೆ ವಿಭಿನ್ನ ಕಾಸ್ಟ್ಯೂಮ್ ಎನ್ನುವ ಬಗ್ಗೆ ರಘು ಮಾತನಾಡಿದ್ದಾರೆ.

ಡಿಸೆಂಬರ್ 1ರಂದು ವೈಟ್‌ಫೀಲ್ಡ್‌ನಲ್ಲಿರುವ ಫೀನಿಕ್ಸ್ ಮಾರ್ಕೆಟ್‌ಸಿಟಿ ಮಾಲ್‌ನಲ್ಲಿ ರಘು ದೀಕ್ಷಿತ್ ಮ್ಯೂಸಿಕ್ ಕಾನ್ಸರ್ಟ್ ರಂಗೇರಿತ್ತು. ಸಾಕಷ್ಟು ಹಾಡುಗಳನ್ನು ರಘು ಮತ್ತವರ ತಂಡ ಪ್ರಸ್ತುಪಡಿಸಿದ್ದರು. ಮುಖ್ಯವಾಗಿ 'ಶಕ್ಕರ್' ಎಂಬ ಆಲ್ಬಮ್ ಅನ್ನು ಭಾರತದಲ್ಲಿ ಅನಾವರಣ ಮಾಡಲಾಯಿತು. 7 ಹಾಡುಗಳ ಆಲ್ಬಮ್ 6 ತಿಂಗಳ ಹಿಂದೆ ಲಂಡನ್‌ನಲ್ಲಿ ಲಾಂಚ್ ಆಗಿತ್ತು. ಭಾರತದಲ್ಲಿ ಇದೇ ಮೊದಲ ಬಾರಿಗೆ ಹೊರ ತರಲಾಯಿತು.

Desi Rockstar Raghu Dixit reveals why he wear dhoti and gejje in stage

'ಶಕ್ಕರ್' ಆಲ್ಬಮ್ ಸಾಂಗ್ಸ್ ಜೊತೆ ತಮ್ಮ ಜನಪ್ರಿಯ ಗೀತೆಗಳನ್ನು ಕೂಡ ವೇದಿಕೆಯಲ್ಲಿ ರಘು ದೀಕ್ಷಿತ್ ಹಾಡಿದ್ದರು. 'ಮುಂಜಾನೆ ಮಂಜಲ್ಲಿ', 'ನಿನ್ನ ಪೂಜೆಗೆ ಬಂದೇ ಮಾದೇಶ್ವರ' ಹಾಡುಗಳು ಲಿಸ್ಟ್‌ನಲ್ಲಿತ್ತು. ತಮ್ಮ ಲೈವ್ ಕಾನ್ಸರ್ಟ್ ಬಗ್ಗೆ ರಘು ದೀಕ್ಷಿತ್ ಫಿಲ್ಮಿಬೀಟ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಅವರ ಲುಂಗಿ ಕಾಸ್ಟ್ಯೂಮ್ ಸೀಕ್ರೆಟ್ ಸಹ ಬಿಚ್ಚಿಟ್ಟಿದ್ದಾರೆ.

"ಬರೀ ಮ್ಯೂಸಿಕ್, ಹಾಡು ಅಷ್ಟೇ ಅಲ್ಲ, ನಾವು ಯಾರು ಎನ್ನುವುದನ್ನು ಪ್ರತಿನಿಧಿಸುವ ಕಾಸ್ಟ್ಯೂಮ್ ಅದು. ನಾವು ಹೆಮ್ಮೆಯ ಕರ್ನಾಟಕದವರು, ದಕ್ಷಿಣ ಭಾರತದವರು. ಮನೆಯಲ್ಲಿ ಪಂಚೆ ಉಟ್ಟು ಬೆಳೆದವರು. ಅದನ್ನೇ ವೇದಿಕೆ ತಗೊಂಡು ಹೋಗಿ, ನಾವು ಎಲ್ಲಿದ್ದೀವಿ, ನಾವು ಯಾರು ಎಂದು ತೋರಿಸಲು ಹೆಮ್ಮೆಯಿಂದ ಆ ಕಾಸ್ಟ್ಯೂಮ್ ಧರಿಸುತ್ತೇನೆ" ಎಂದು ರಘು ದೀಕ್ಷಿತ್ ಹೇಳಿದ್ದಾರೆ.

Desi Rockstar Raghu Dixit reveals why he wear dhoti and gejje in stage

"ನಾವು ಯಾವ ಸಂಗೀತ ನುಡಿಸುತ್ತೇವೆ ಎನ್ನುವುದು ಇಲ್ಲಿ ಬಹಳ ಮುಖ್ಯ. ಜಾನಪದ ಸಂಗೀತ ಅಂದ್ರೆ ಅದು ಬಹಳ ಕಲರ್‌ಫುಲ್ ಆಗಿರುತ್ತದೆ. ಹಾಗಾಗಿ ಬಣ್ಣ ಬಣ್ಣದ ಪಂಚೆ, ಜೊತೆಗೆ ಕಾಲಿಗೆ ಗೆಜ್ಜೆ ಹಾಕಿಕೊಳ್ಳುವ ಸಂಪ್ರದಾಯ. ತಾಳಕ್ಕೂ ಅದನ್ನು ಬಳಸಿಕೊಳ್ತೀನಿ. ನಾನು ಭರತನಾಟ್ಯ ಸಹ ಕಲಿತ್ತಿದ್ದರಿಂದ ಗೆಜ್ಜೆ ಕಟ್ಟಿಕೊಳ್ಳುವುದು ಬಹಳ ಸಹಜ" ಎಂದು ರಘು ತಿಳಿಸಿದ್ದಾರೆ.

"ಈ ವಿಭಿನ್ನ ಕಾಸ್ಟ್ಯೂಮ್‌ ಬಗ್ಗೆ ಎಲ್ಲರೂ ಮಾತನಾಡುವಂತಾಯಿತು. ಎಲ್ಲರಿಗೂ ಆ ಬಗ್ಗೆ ಕುತೂಹಲ ಇದೆ. ನಮಗೆ ಅದು ಮಾರ್ಕೆಟಿಂಗ್ ಆಗೋಯ್ತು, ಈಗ ಯಾರೇ ಪಂಚೆ ಉಟ್ಟು ವೇದಿಕೆ ಏರಿದರು, ರಘು ದೀಕ್ಷಿತ್‌ನ ಕಾಪಿ ಮಾಡ್ತಾರೆ ಅಂತಾರೆ. ಆದರೆ ನಾನಲ್ಲ, ಸುಮಾರು ಜನ ಅದನ್ನು ಮಾಡ್ತಿದ್ದಾರೆ. ಲುಂಗಿ ಬ್ಯಾಂಡ್ ಅಂತ್ಲೇ ಉತ್ತರ ಭಾರತದವರು ನಮ್ಮನ್ನು ಕರೀತಾರೆ. ಅದು ನಮಗೆ ಬಹಳ ಹೆಮ್ಮೆಯ ವಿಷಯ" ಎಂದು ರಘು ವಿವರಿಸಿದ್ದಾರೆ.

More from Filmibeat

English summary
Folk musician Raghu Dixit opens up about his unique costume and look
Read more about: raghu dixit sandalwood music
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X