'ರುಸ್ತುಂ' ನಲ್ಲಿ ಮರು ಬಳಕೆ ಆಯ್ತು 'ಡೈರೆಕ್ಟರ್ ಸ್ಪೆಷಲ್' ಹಾಡು
Recommended Video
ಶಿವರಾಜ್ ಕುಮಾರ್ ನಟನೆಯ 'ರುಸ್ತುಂ' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಇತ್ತೀಚಿಗಷ್ಟೆ ಸಿನಿಮಾದ ಮೂರನೇ ಹಾಡು ರಿಲೀಸ್ ಆಗಿದೆ.
ಎರಡು ಮಾಸ್ ಹಾಡುಗಳ ಬಳಿಕ ಮಧುರ ಗೀತೆಯನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಈ ಹಾಡು 'ಡೈರೆಕ್ಟರ್ ಸ್ಪೆಷಲ್' ಸಿನಿಮಾದಾಗಿದೆ.
'ಡೈರೆಕ್ಟರ್ ಸ್ಪೆಷಲ್' ಚಿತ್ರದಲ್ಲಿ 'ದೇವರೇ ಆಗಾದ ನಿನ್ನ ಮಹಿಮೆಯ ಕಡಲು..' ಎಂಬ ಹಾಡು ಇತ್ತು. ಕವಿ ಬಿ ಆರ್ ಲಕ್ಷಣ್ ರಾವ್ ಅವರ ಹಾಡನ್ನು ಆ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿತ್ತು. ಒಳ್ಳೆಯ ಸಂಗೀತ ಬೆರೆತ ಕಾರಣ ಹಾಡಿನ ಅಂದ ಮತ್ತಷ್ಟು ಜಾಸ್ತಿಯಾಗಿತ್ತು.

ಆ ಸಿನಿಮಾಗೆ ಮ್ಯೂಸಿಕ್ ನೀಡಿ ಆ ಹಾಡನ್ನು ಹಾಡಿದ್ದರು ಅನೂಪ್ ಸಿಳೀನ್. ಈಗ ಅನೂಪ್ ತಮ್ಮ 'ರುಸ್ತುಂ' ಚಿತ್ರಕ್ಕೂ ಅದೇ ಹಾಡನ್ನು ಮರುಬಳಕೆ ಮಾಡಿದ್ದಾರೆ. ಈ ಬಾರಿ ಇದು ಸೆಂಟಿಮೆಂಟ್ ಹಾಡಾಗಿದೆ.
ಅದೇ ಸಾಹಿತ್ಯಕ್ಕೆ ಹೊಸ ಸಂಗೀತ ಸೇರಿಸಿ, ಕೈಲಾಶ್ ಖೇರ್ ರಿಂದ ಹಾಡನ್ನು ಹಾಡಿಸಿದ್ದು, ಹೊಸ ರೂಪ ಸಿಕ್ಕಿದೆ. ಯೂ ಟ್ಯೂಬ್ ನಲ್ಲಿ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
'ರುಸ್ತುಂ' ಚಿತ್ರದ ಹಾಡು ಕೇಳಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











