ಒತ್ತಾಯದ ಮೇರೆಗೆ ರಣ್ವೀರ್ ಸಿಂಗ್ ಸಿನಿಮಾಕ್ಕಾಗಿ ವಿಶೇಷ ಹಾಡು ನೀಡಿದ ದೇವಿಶ್ರೀ ಪ್ರಸಾದ್

'ಪುಷ್ಪ' ಚಿತ್ರದ ಯಶಸ್ಸು ಅನೇಕರ ಜೀವನಗಳಲ್ಲಿ ಅದೃಷ್ಟ ಖುಲಾಯಿಸುವಂತೆ ಮಾಡಿದೆ. ಅಲ್ಲು ಅರ್ಜುನ್ ಅಭಿನಯದ 'ಪುಷ್ಪ-1' ಹಿಂದಿ ಡಬ್ಬಿಂಗ್ ಆವೃತ್ತಿ ಸೂಪರ್ ಹಿಟ್ ಆಗುವುದರ ಮೂಲಕ, ಈಗ ಅವರು ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಬದಲಾಗಿದ್ದಾರೆ. ಈಗ ಅವರ ಹಳೆಯ ಚಿತ್ರ 'ಅಲಾ ವೈಕುಂಠಪುರಮುಲೋ' ಬಿಡುಗಡೆಯಾದ ಎರಡು ವರ್ಷಗಳ ನಂತರ ಹಿಂದಿ ನಲ್ಲಿ ಡಬ್ ಮಾಡಿ ಹಿಂದಿ ಪ್ರೇಕ್ಷಕರಿಗಾಗಿ ಚಿತ್ರಮಂದಿರಗಳಲ್ಲಿ ಇದೆ ತಿಂಗಳ 26ರಂದು ಬಿಡುಗಡೆ ಮಾಡಲಾಗುತ್ತಿದೆ.

ಇನ್ನೊಂದೆಡೆ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಕೂಡ ಈ ಚಿತ್ರದ ಯಶಸ್ಸಿನ ನಂತರ ತನ್ನ ಸಂಭಾವನೆಯನ್ನು ಭಾರಿ ಏರಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಚಿತ್ರದ ನಿರ್ದೇಶಕ ಸುಕುಮಾರ್ ಅವರಿಗೆ ನೇರವಾಗಿ ಅಕ್ಷಯ್ ಕುಮಾರ್ ಕರೆ ಮಾಡಿ ಚಿತ್ರದ ಮೇಕಿಂಗ್ ಬಗ್ಗೆ ಅಪಾರವಾದ ಪ್ರಶಂಸೆಯನ್ನು ಮಾಡುವುದರ ಜೊತೆಗೆ ತಮಗಾಗಿ ನೇರ ಹಿಂದಿ ಚಿತ್ರವೊಂದನ್ನು ನಿರ್ದೇಶಿಸುವಂತೆ ಕೇಳಿಕೊಂಡಿದ್ದಾರೆ. ಇನ್ನು ಚಿತ್ರದ ಐಟಂ ಸಾಂಗ್ ನ ಮೂಲಕ ಸಮಂತಾ ಈಗ ದೇಶದಾದ್ಯಂತ ಪಡ್ಡೆ ಹುಡುಗರ ನಿದ್ದೆಗೆಡಿಸಿ, ಬಾಲಿವುಡ್ ಮಂದಿ ಆಕೆಯ ಮನೆಯ ಮುಂದೆ ತಮ್ಮ ಮುಂದಿನ ಚಿತ್ರಕ್ಕಾಗಿ ಬುಕ್ ಮಾಡಲು ಕ್ಯೂ ನಿಲ್ಲುವಂತೆ ಮಾಡಿಕೊಂಡಿದ್ದಾಳೆ. ಹೀಗೆ ಪುಷ್ಪ ಚಿತ್ರದ ಪ್ರತಿಯೊಬ್ಬರೂ ಕೂಡ ಈ ಚಿತ್ರದ ಯಶಸ್ಸಿನ ನಂತರ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿರುವಾಗಲೇ ಈಗ ಮತ್ತೊಬ್ಬರು ಇದೇ ಸಾಲಿಗೆ ಸೇರಲು ಸಜ್ಜಾಗಿದ್ದಾರೆ. ಅದೇ ಚಿತ್ರದ ಭರ್ಜರಿ ಯಶಸ್ವಿಗೆ ಕಾರಣವಾದ ಚಿತ್ರದಲ್ಲಿನ ಹಾಡುಗಳಿಗೆ ಜೀವ ತುಂಬಿದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್.

ಇಂಡಿಯನ್ ರಾಕ್ ಸ್ಟಾರ್ ಡಿಎಸ್‌ಪಿ

ಇಂಡಿಯನ್ ರಾಕ್ ಸ್ಟಾರ್ ಡಿಎಸ್‌ಪಿ

ದೇವಿಶ್ರೀ ಪ್ರಸಾದ್ ಎಲ್ಲರಿಗೂ ಕೂಡ ಡಿಎಸ್‌ಪಿ ಅಂತಲೇ ಚಿರಪರಿಚಿತರು. 'ಡಿಎಸ್‌ಪಿ'ಯನ್ನು ರಾಕ್ ಸ್ಟಾರ್ ಅಂತ ಕೂಡ ಕರೆಯಲಾಗುತ್ತದೆ. ಮೊದಲಿನಿಂದಲೂ ದೇವಿಶ್ರೀ ಪ್ರಸಾದ್ ತನ್ನ ರಾಕ್ ಕಂಪೋಸಿಂಗ್ ಇಂದ ಸಾಕಷ್ಟು ಪ್ರಸಿದ್ಧಿ ಹೊಂದಿದವರು. ಆರ್ಯ, ಆರ್ಯ-2, ಜಲ್ಸ, ಜುಲಾಯಿ, ಇದ್ದರಮ್ಮಾಯಿಲತೋ ಹೀಗೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ದೇವಿಶ್ರೀ ಅವರ ಸಂಗೀತ ಪ್ರಧಾನವಾಗಿ ಎದ್ದುಕಾಣುತ್ತದೆ. ದೇವಿಶ್ರೀ ಅಂದರೆ ಫಾಸ್ಟ್ ಬೀಟ್, ಐಟಂ ಸಾಂಗ್, ಇವು ಅವರ ಎಲ್ಲಾ ಚಿತ್ರಗಳಲ್ಲೂ ಕೂಡ ಪ್ರಧಾನವಾಗಿ ಕಾಣಬಹುದು. ಪುಷ್ಪ ಚಿತ್ರದ ಎಲ್ಲಾ ಹಾಡುಗಳು ಕೂಡ ಸೂಪರ್ ಹಿಟ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಮತ್ತೊಬ್ಬ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್. ತಮನ್ ಬಂದು ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ ಇಂತಹ ಸಮಯದಲ್ಲಿ ದೇವಿಶ್ರೀ 'ಪುಷ್ಪ' ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದ್ದಾರೆ. ಜೊತೆಗೆ ಹೊಸ ಹೊಸ ಆಫರ್ ಗಳು ದೇವಿಶ್ರೀ ಮುಂದೆ ಎದುರಾಗಿ ನಿಂತಿವೆ. ಇಂಥದೇ ಒಂದು ಆಫರ್ ರೋಹಿತ್ ಶೆಟ್ಟಿ ಕಡೆಯಿಂದ ಬಂದಿದೆ.

ಹಿಂದಿಯಲ್ಲಿ 'ಪುಷ್ಪ' ಸಿನಿಮಾದ ಹಾಡುಗಳ ಹವಾ ಜೋರಾಗಿದೆ

ಹಿಂದಿಯಲ್ಲಿ 'ಪುಷ್ಪ' ಸಿನಿಮಾದ ಹಾಡುಗಳ ಹವಾ ಜೋರಾಗಿದೆ

ರಣವೀರ್ ಸಿಂಗ್ ಅಭಿನಯದ 'ಸರ್ಕಸ್' ಚಿತ್ರದಲ್ಲಿ ಒಂದು ಹಾಡಿಗೆ ರೋಹಿತ್ ಶೆಟ್ಟಿ ಅವರೊಂದಿಗೆ ಕೆಲಸ ಮಾಡಲು ಥ್ರಿಲ್ ಆಗಿದ್ದೇನೆ ಎಂದು ಸಂಯೋಜಕ ದೇವಿ ಶ್ರೀ ಪ್ರಸಾದ್ ಹೇಳಿದ್ದಾರೆ. ದೇವಿ ಶ್ರೀ ಪ್ರಸಾದ್ ಅವರು ರಣವೀರ್ ಸಿಂಗ್ ಅಭಿನಯದ ಸರ್ಕಸ್ ಚಿತ್ರದಲ್ಲಿ ಒಂದು ಹಾಡಿಗೆ ರೋಹಿತ್ ಶೆಟ್ಟಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಈಗ ದೇವಿಶ್ರೀ ಗೆ ಬಂದಿದೆ. ಅಲ್ಲು ಅರ್ಜುನ್ ಅವರ ಪುಷ್ಪ: ದಿ ರೈಸ್ ಅದ್ಭುತ ಯಶಸ್ಸನ್ನು ಕಂಡಿದೆ. ಮೂಲತಃ ತೆಲುಗಿನಲ್ಲಿ, ಸುಕುಮಾರ್ ನಿರ್ದೇಶನದ ಚಿತ್ರ ಮತ್ತು ಪ್ರಮುಖ ಪಾತ್ರಗಳಲ್ಲಿ ಫಹಾದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದಾರೆ, ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲಿ ಅದ್ಭುತ ವ್ಯಾಪಾರ ಮಾಡಿದೆ. ಚಿತ್ರಕಥೆ ಮತ್ತು ನಟನೆಯ ಹೊರತಾಗಿ ಹಾಡುಗಳು ಕೂಡ ಮೆಚ್ಚುಗೆ ಪಡೆದಿವೆ. ಹೆಸರಾಂತ ಸಂಯೋಜಕ ದೇವಿ ಶ್ರೀ ಪ್ರಸಾದ್ (ಡಿಎಸ್‌ಪಿ) ಅವರು 'ಪುಷ್ಪ' ಜನಪ್ರಿಯ ಹಾಡುಗಳ ಹಿಂದಿನ ಸೂತ್ರಧಾರಿ

ಮತ್ತು ಹಾಡುಗಳ ಹಿಂದಿ ಆವೃತ್ತಿಯನ್ನು ಭೂಷಣ್ ಕುಮಾರ್ ಅವರ ಟಿ-ಸೀರೀಸ್ ಪ್ರಸ್ತುತಪಡಿಸಿದ್ದಾರೆ. ಚಿತ್ರದ ಹಿಂದಿ ಹಾಡುಗಳು ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿವೆ, ಅವು ಯೂಟ್ಯೂಬ್‌ನಲ್ಲಿ ಟಾಪ್ 5 ಚಾರ್ಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಶ್ರೀವಳ್ಳಿ ನಂಬರ್ ಒನ್ ಸ್ಥಾನದಲ್ಲಿದ್ದರೆ, ಓ ಬೊಲೆಗಾ ಯಾ ಊ ಓ ಬೊಲೆಗಾ ಎರಡನೇ ಸ್ಥಾನದಲ್ಲಿದ್ದರೆ, ಸಾಮಿ ಸಾಮಿ ಕೂಡ ನಾಲ್ಕನೇ ಸ್ಥಾನದಲ್ಲಿದೆ

ಸಲ್ಮಾನ್ ಖಾನ್ ಚಿತ್ರಗಳಿಗೂ ಕೂಡ ಸ್ಪೆಷಲ್ ಸಾಂಗ್ ಮಾಡಿದ್ದ ದೇವಿಶ್ರೀ

ಸಲ್ಮಾನ್ ಖಾನ್ ಚಿತ್ರಗಳಿಗೂ ಕೂಡ ಸ್ಪೆಷಲ್ ಸಾಂಗ್ ಮಾಡಿದ್ದ ದೇವಿಶ್ರೀ

ದೇವಿಶ್ರೀ ಪ್ರಸಾದ್ ಹಿಂದಿಯಲ್ಲಿ ತನ್ನ ಸ್ಪೆಷಲ್ ಸಾಂಗ್ ಗಳಿಗೆ ಸಾಕಷ್ಟು ಜನಪ್ರಿಯ. ಈ ಹಿಂದೆ ಸಲ್ಮಾನ್ ಖಾನ್ ಅವರ ರಾಧೆ ಮತ್ತು ರೆಡಿ ಚಿತ್ರಗಳಿಗೆ ಒಂದೊಂದು ಸ್ಪೆಷಲ್ ಸಾಂಗ್ ಮಾಡಿ ಜನಪ್ರಿಯತೆಯನ್ನು ಪಡೆದವರು ದೇವಿಶ್ರೀ. ನೇರ ಹಿಂದಿ ಚಿತ್ರಕ್ಕೆ ಪೂರ್ಣಪ್ರಮಾಣದಲ್ಲಿ ಸಂಗೀತ ನೀಡುವ ಬಗ್ಗೆ ಅವರನ್ನು ಕೇಳಿದರೆ, "ನಾನು ಅದನ್ನು ಮಾಡಲು ಎದುರು ನೋಡುತ್ತಿದ್ದೇನೆ. ಭಾಷೆ ನನಗೆ ಯಾವತ್ತೂ ಅಡ್ಡಿಯಾಗಿರಲಿಲ್ಲ. ನಾನು ಈಗಾಗಲೇ ರೋಹಿತ್ ಶೆಟ್ಟಿ ಅವರ ಸರ್ಕಸ್‌ಗೆ ಒಂದು ಹಾಡನ್ನು ರಚಿಸಿದ್ದೇನೆ. ನಾನು ಇನ್ನೂ ಒಂದೆರಡು ಚಿತ್ರಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ಆದರೆ ಈ ಲಾಕ್‌ಡೌನ್ ಪರಿಸ್ಥಿತಿ ಮುಗಿದ ನಂತರ, ನಾವು ಹೆಚ್ಚಿನ ಸ್ಪಷ್ಟತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ನಾನು ಈ ವರ್ಷ ಕೆಲವು ಹಿಂದಿ ಸಿಂಗಲ್ಸ್‌ಗಳೊಂದಿಗೆ ಬರುತ್ತಿರುವ ಕಾರಣ ನಾನು ಉತ್ಸುಕನಾಗಿದ್ದೇನೆ. ಇದು ಕಳೆದ ವರ್ಷವೇ ಆಗಬೇಕಿತ್ತು ಆದರೆ ಎರಡನೇ ಅಲೆಯಿಂದಾಗಿ ಸ್ವಲ್ಪ ವಿಳಂಬವಾಯಿತು. ಆದರೆ ನಾನು ಸಮಯವನ್ನು ಸದುಪಯೋಗಪಡಿಸಿಕೊಂಡಿದ್ದೇನೆ ಮತ್ತು ಉತ್ತಮ ಕೆಲಸದೊಂದಿಗೆ ಬರಲು ಪ್ರಯತ್ನಿಸಿದೆ" ಎಂದು news18 ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

''ರೋಹಿತ್ ಶೆಟ್ಟಿ ಅವರೊಂದಿಗೆ ಕೆಲಸ ಮಾಡುವುದು ಖುಷಿಕೊಟ್ಟಿದೆ''

''ರೋಹಿತ್ ಶೆಟ್ಟಿ ಅವರೊಂದಿಗೆ ಕೆಲಸ ಮಾಡುವುದು ಖುಷಿಕೊಟ್ಟಿದೆ''

ಸರ್ಕಸ್‌ಗಾಗಿ ರೋಹಿತ್ ಶೆಟ್ಟಿ ಅವರೊಂದಿಗೆ ಕೆಲಸ ಮಾಡುವ ಕುರಿತು ಮಾತನಾಡಿದ ಅವರು, "ರೋಹಿತ್ ಶೆಟ್ಟಿ ಸರ್ ಅವರಿಂದ ಕರೆ ಬಂದಾಗ ನಾನು ಥ್ರಿಲ್ ಆಗಿದ್ದೆ. ಈ ಸಹಯೋಗದ ಬಗ್ಗೆ ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ. ನಾವು ಈಗಾಗಲೇ ಹಾಡನ್ನು ಮಾಡಿದ್ದೇವೆ ಮತ್ತು ನಾನು ಯಾವಾಗಲೂ ಹಿಂದಿಯಲ್ಲಿ ಕಂಪೋಸ್ ಮಾಡಲು ಬಯಸುವ ರೀತಿಯ ಟ್ರ್ಯಾಕ್ ಇದಾಗಿದೆ. ಇದು ಮಾಧುರ್ಯತೆಯನ್ನು ಹೊಂದಿರುವ ಹಾಡಾಗಿದೆ. ರೋಹಿತ್ ಸರ್ ನಾನು ಕಂಡ ಅತ್ಯಂತ ಕೂಲ್ ನಿರ್ದೇಶಕರಲ್ಲಿ ಒಬ್ಬರು. ನಾನು ಇದೀಗ ಹೆಚ್ಚಿನದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ಪ್ರೇಕ್ಷಕರು ಈ ಹಾಡನ್ನು ಪ್ರೀತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ."

 ರಣವೀರ್ ಸಿಂಗ್ ಜೊತೆಗಿನ ಮೊದಲ ಭೇಟಿ

ರಣವೀರ್ ಸಿಂಗ್ ಜೊತೆಗಿನ ಮೊದಲ ಭೇಟಿ

ದೇವಿಶ್ರೀ ಅವರು ರಣವೀರ್ ಅವರನ್ನು ಮೊದಲ ಬಾರಿಗೆ ಭೇಟಿಯಾದುದನ್ನು ನೆನಸಿಕೊಂಡು, "ಕಮಲ್ ಹಾಸನ್ ಅವರು ನನ್ನನ್ನು ಸಮಾರಂಭವೊಂದರಲ್ಲಿ ರಣವೀರ್‌ಗೆ ಪರಿಚಯಿಸಿದರು. ಅವರು ನನ್ನನ್ನು ನೋಡಿದರು ಮತ್ತು ನೃತ್ಯ ಮಾಡಲು ಪ್ರಾರಂಭಿಸಿದರು ಮತ್ತು ಅವರು ನನ್ನ ಹಾಡುಗಳ ಬಗ್ಗೆ ನನ್ನೊಂದಿಗೆ ಮಾತನಾಡಿದರು ಮತ್ತು ಕೆಲವೊಂದು ಶೋಗಳಲ್ಲಿ ನನ್ನ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡಿರುವುದಾಗಿ ಕೂಡ ಅವರು ಆ ಸಂದರ್ಭದಲ್ಲಿ ಹೇಳಿದರು. ಅವರು ನನ್ನ ಒಂದು ಹಾಡನ್ನು ಪ್ರದರ್ಶಿಸಿದರು. ಅವರೊಬ್ಬ ಸ್ಟಾರ್ ಅವರ ಎನರ್ಜಿ ಲೆವೆಲ್ ಸಿಕ್ಕಾಪಟ್ಟೆ ದೊಡ್ಡದು. ಅವರ ಎಲ್ಲಾ ಚಿತ್ರಗಳಲ್ಲಿ ಅವರ ಅಭಿನಯ ಅದ್ಭುತವಾಗಿದೆ. ಅವರ ಮತ್ತು ರೋಹಿತ್ ಸರ್ ಅವರೊಂದಿಗೆ ಒಡನಾಡಲು ನನಗೆ ತುಂಬಾ ಸಂತೋಷವಾಗಿದೆ.

More from Filmibeat

English summary
Music Director Devi Sri Prasad composed a special song for the Hindi movie Circus. Rohit Shetty, directing 'Circus' movie, Ranveer Singh is Hero.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X