ಮಹಿಳಾ ದಿನಾಚರಣೆಯಂದು ಹೊಯ್ಸಳ ಎರಡನೇ ಹಾಡು ರಿಲೀಸ್

Dhananjay starrer Hoysala second single releasing on 8th March

2023ರ ಮೂರನೇ ತಿಂಗಳು ಬಂದಿದ್ದು, ಈ ತಿಂಗಳಿನಲ್ಲಿ ಕನ್ನಡದ ಎರಡು ಬಿಗ್ ಚಿತ್ರಗಳು ಬಿಡುಗಡೆಯಾಗಲಿವೆ. ಆರ್ ಚಂದ್ರು ನಿರ್ದೇಶನದ ಕಬ್ಜ ಚಿತ್ರ ಇದೇ ಮಾರ್ಚ್ 17ರಂದು ತೆರೆಕಂಡರೆ, ತಿಂಗಳ ಕೊನೆಯಲ್ಲಿ ಮಾರ್ಚ್ 30ರಂದು ಧನಂಜಯ್ ನಟನೆಯ ಹೊಯ್ಸಳ ಬಿಡುಗಡೆಯಾಗಲಿದೆ.

ಕಳೆದ ವರ್ಷ ಐದಾರು ಸಿನಿಮಾಗಳಲ್ಲಿ ನಟಿಸಿದರೂ ಸಹ ಹೇಳಿಕೊಳ್ಳುವಂತಹ ಯಶಸ್ಸು ಕಾಣದ ಧನಂಜಯ್ ಈ ವರ್ಷ ಹೊಯ್ಸಳ ಸಿನಿಮಾ ಮೂಲಕ ಈ ವರ್ಷದ ತಮ್ಮ ಸಿನಿ ಇನ್ನಿಂಗ್ಸ್ ಅನ್ನು ಶುರು ಮಾಡಲಿದ್ದಾರೆ. ಧನಂಜಯ್ ಈ ಚಿತ್ರದಲ್ಲಿ ಗುರುದೇವ್ ಎಂಬ ಖಡಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಗುರುದೇವ್ ಪಾತ್ರದ ಕುರಿತು ಬಿಡುಗಡೆ ಮಾಡಲಾಗಿದ್ದ ಸಣ್ಣ ಟೀಸರ್ ಹಾಗೂ ಸಳ ಸಳ ಹೊಯ್ಸಳ ಹಾಡು ಸಿನಿ ರಸಿಕರ ಗಮನ ಸೆಳೆದಿದ್ದವು.

ಹೌದು, ಹೊಯ್ಸಳ ಚಿತ್ರದ ಬಿಡುಗಡೆ ದಿನ ಸಮೀಪಿಸುತ್ತಿರುವ ಕಾರಣ ಚಿತ್ರತಂಡ ಹಾಡುಗಳನ್ನು ಒಂದೊಂದಾಗಿ ಬಿಡುಗಡೆ ಮಾಡಲು ಮುಂದಾಗಿದೆ. ಚಿತ್ರದ ಟೈಟಲ್ ಟ್ರ್ಯಾಕ್ ಆದ ಸಳ ಸಳ ಹೊಯ್ಸಳ ಹಾಡನ್ನು ಮೊದಲಿಗೆ ಬಿಡುಗಡೆ ಮಾಡಲಾಯಿತು. ಸಂತೋಷ್ ಆನಂದ್‌ರಾಮ್ ಸಾಹಿತ್ಯವಿದ್ದ ಈ ಹಾಡು ಒಳ್ಳೆಯ ಪ್ರತಿಕ್ರಿಯೆಯನ್ನೇ ಪಡೆದುಕೊಂಡಿತ್ತು. ಧನಂಜಯ್ ನಿರ್ವಹಿಸುತ್ತಿರುವ ಗುರುದೇವ್ ಪಾತ್ರದ ಗುಣಗಳೇನು ಎಂಬುದನ್ನು ಈ ಹಾಡು ತಿಳಿಸಿಕೊಟ್ಟಿತ್ತು.

ಹೀಗೆ ಮೊದಲ ಹಾಡಿನಲ್ಲಿ ಮಾಸ್ ಪ್ರೇಕ್ಷಕರ ಮನ ಗೆದ್ದಿದ್ದ ಹೊಯ್ಸಳ ಚಿತ್ರತಂಡ ಇದೀಗ ಲವ್ ಟ್ರ್ಯಾಕ್ ಬಿಡುಗಡೆ ಮಾಡಲು ಮುಂದಾಗಿದೆ. ಹೌದು, ಇದೇ ಮಾರ್ಚ್ 8ರಂದು ಮಹಿಳಾ ದಿನಾಚರಣೆಯ ವಿಶೇಷ ದಿನದಂದು 'ಅರೇ.. ಇದು ಎಂಥ ಭಾವನೆ' ಎಂಬ ಹಾಡನ್ನು ಮಧ್ಯಾಹ್ನ 12.34ಕ್ಕೆ ಬಿಡುಗಡೆ ಮಾಡುವುದಾಗಿ ಕೆಆರ್‌ಜಿ ಸ್ಟುಡಿಯೊಸ್ ತಿಳಿಸಿದೆ. ಈ ಹಾಡಿಗೆ ಯೋಗರಾಜ್ ಭಟ್ ಲಿರಿಕ್ಸ್ ಬರೆದಿದ್ದು, ಹರಿಚರಣ್ ಹಾಡಿದ್ದಾರೆ ಹಾಗೂ ಅಜನೀಶ್ ಬಿ ಲೋಕನಾಥ್ ಸಂಗೀತ ನಿರ್ದೇಶನ ನೀಡಿದ್ದಾರೆ.

ಹೊಯ್ಸಳ ಚಿತ್ರದಲ್ಲಿ ಡಾಲಿ ಧನಂಜಯ್‌ಗೆ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಬಡವ ರಾಸ್ಕಲ್ ಚಿತ್ರದ ಉಡುಪಿ ಹೋಟೆಲು ಹಾಡಿನ ಬಳಿಕ ಮತ್ತೊಮ್ಮೆ ಈ ಜೋಡಿ ಲವ್ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದೆ.

More from Filmibeat

English summary
Dhananjay starrer Hoysala second single releasing on 8th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X