ತಾತನಿಗೆ ಧನ್ಯಾ ರಾಮ್‌ಕುಮಾರ್ ಟ್ರಿಬ್ಯೂಟ್; ಕಿಶನ್ ಜೊತೆ ಡ್ಯುಯೆಟ್

ಡಾ. ರಾಜ್‌ಕುಮಾರ್ 96ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ. ಸಿನಿಮಾ ತಾರೆಯರು, ರಾಜಕೀಯ ಮುಖಂಡರು, ಅಭಿಮಾನಿಗಳು ಸೋಶಿಯಲ್ ಮೀಡಿಯಾ ಪೋಸ್ಟ್‌ ಮಾಡಿ ಮುತ್ತುರಾಜನ ನೆನಪು ಮಾಡಿಕೊಳ್ಳುತ್ತಿದ್ದಾರೆ.

ಮೊಮ್ಮಗಳ ಧನ್ಯಾ ರಾಮ್‌ಕುಮಾರ್ ತಾತನಿಗೆ ವಿಭಿನ್ನವಾಗಿ ಟ್ರಿಬ್ಯೂಟ್ ನೀಡಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಜೊತೆ ಅಣ್ಣಾವ್ರ ಸೂಪರ್ ಹಿಟ್ ಗೀತೆಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇತ್ತೀಚಿಗೆ ನಟಿಯರ ಜೊತೆ ಕಿಶನ್ ಬಿಳಗಲಿ ಡ್ಯಾನ್ಸ್ ವೀಡಿಯೋಗಳು ಬಹಳ ಸದ್ದು ಮಾಡುತ್ತಿವೆ. ಆ ಲಿಸ್ಟ್‌ಗೆ ಇದು ಸೇರಿಕೊಂಡಿದೆ.

Dhanya Ramkumar and kishen bilagali dance tribute to Dr rajkumar birth anniversary

ಕನ್ನಡ ಬಿಗ್‌ಬಾಸ್ ಸೀಸನ್ 7ರಲ್ಲಿ ಕಿಶನ್ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿದ್ದರು. ಮೂಲತಃ ಡ್ಯಾನ್ಸರ್ ಆಗಿರುವ ಕಿಶನ್ ಬಿಂದಾಸ್ ಡ್ಯಾನ್ಸ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಚಿಕ್ಕಮಗಳೂರಿನ ಕಿಶನ್ 'ಡ್ಯಾನ್ಸ್ ದಿವಾನೆ' ಹಿಂದಿ ರಿಯಾಲಿಟಿ ಶೋ ವಿನ್ನರ್ ಸಹ ಆಗಿದ್ದರು. ಇದೀಗ ನಟಿ ಧನ್ಯಾ ರಾಮ್‌ಕುಮಾರ್ ಜೊತೆ 'ರಾಜ ನನ್ನ ರಾಜ' ಚಿತ್ರದ ಸೂಪರ್ ಹಿಟ್ ಗೀತೆಗೆ ಹೆಜ್ಜೆ ಹಾಕಿದ್ದಾರೆ.

ಬಹಳ ಸೊಗಸಾಗಿ ಡ್ಯಾನ್ಸ್ ವೀಡಿಯೋ ಚಿತ್ರೀಕರಣ ಮಾಡಲಾಗಿದೆ. ರೆಟ್ರೋ ಲುಕ್‌ನಲ್ಲಿ ಇಬ್ಬರೂ ಮಿಂಚಿದ್ದಾರೆ. ಧನ್ಯಾ ಸೀರೆಯಲ್ಲಿ ಕಂಗೊಳಿಸಿದರೆ ಕಿಶನ್ ಬೆಲ್‌ಬಾಟಂ ಪ್ಯಾಂಟ್, ಪೋಲ್ಕಾ ಡಾಟ್ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೈಟ್ ಮೋಡ್, ಅಂಬಾಸಿಡರ್ ಕಾರ್, ಫೈರ್ ಕ್ಯಾಂಪ್ ಒಟ್ಟಾರೆ ಹಳೇ ಸಿನಿಮಾ ಹಾಡನ್ನೇ ಕಣ್ಮುಂದೆ ತರುವಂತೆ ಡ್ಯಾನ್ಸ್ ವಿಡಿಯೋ ಮೂಡಿಬಂದಿದೆ.

ಸಕ್ಕರೆ ಫಿಲ್ಮ್ಸ್ ಸ್ಟುಡಿಯೋ ಈ ವಿಡಿಯೋ ಶೂಟ್ ಮಾಡಿದ್ದು ಶೈರ್ ಸ್ಟುಡಿಯೋ ಪ್ರೀ ವೆಡ್ಡಿಂಗ್ ಲೊಕೇಶನ್‌ನಲ್ಲಿ ಚಿತ್ರೀಕರಣ ನಡೆದಿದೆ. ಚಂದನ್ ಗೌಡ ಕಿಶನ್ ಹಾಗೂ ಧನ್ಯಾ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಖುದ್ದು ಕಿಶನ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದಂತೆ ಕಾಣುತ್ತಿದೆ. ಇನ್ನು ಈ ಡ್ಯಾನ್ಸ್ ವೀಡಿಯೋಗೆ ತರಹೇವಾರಿ ಕಾಮೆಂಟ್‌ಗಳು ಬರುತ್ತಿವೆ. ಕೆಲವರು ಮೆಚ್ಚಿಕೊಂಡಿದ್ದರು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಸದಾ ನಟಿಯರ ಜೊತೆ ಡ್ಯಾನ್ಸ್ ವೀಡಿಯೋ ಮಾಡುವ ಕಿಶನ್‌ಗೆ ಕೆಲವರು ಮಾಡ್ರನ್ ಕ್ರೇಜಿಸ್ಟಾರ್ ಎಂದೇ ಕರೆಯುತ್ತಾರೆ. ಇನ್ನು ಪೂರ್ಣಿಮಾ ಹಾಗೂ ರಾಮ್‌ಕುಮಾರ್ ಪುತ್ರಿ ಧನ್ಯಾ ರಾಮ್‌ ಕುಮಾರ್ ಈಗಾಗಲೇ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಳ್ಳೆ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ತಾತನ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಟ್ರಿಬ್ಯೂಟ್ ನೀಡುವ ಪ್ರಯತ್ನ ಮಾಡಿದ್ದು ಕಿಶನ್ ಸಾಥ್ ಕೊಟ್ಟಿದ್ದಾರೆ. ರೊಮ್ಯಾಂಟಿಕ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ.

ಡಾ. ರಾಜ್‌ಕುಮಾರ್ ಹಾಗೂ ಆರತಿ ನಟನೆಯ 'ರಾಜ ನನ್ನ ರಾಜ' ಸಿನಿಮಾ 1976ರಲ್ಲಿ ತೆರೆಕಂಡಿತ್ತು. ಜಾವೆದ್ ಅಕ್ತರ್ ಜೊತೆ ಸೇರಿ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಈ ಚಿತ್ರಕ್ಕೆ ಕಥೆ ಬರೆದಿದ್ದರು. ಚಿ. ಉದಯ ಶಂಕರ್ ಚಿತ್ರಕಥೆ ಹಾಗೂ ಹಾಡುಗಳ ಸಾಹಿತ್ಯ ರಚಿಸಿದ್ದರು. 25 ವಾರಗಳ ಪ್ರದರ್ಶನ ಕಂಡು 'ರಾಜ ನನ್ನ ರಾಜ' ಸಿನಿಮಾ ದಾಖಲೆ ಬರೆದಿತ್ತು.

ಜೆ. ಕೆ ವೆಂಕಟೇಶ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಗಿಟಾರ್ ವಾದಕರಾಗಿ ಕೆಲಸ ಮಾಡಿದ್ದರು. ಚಿತ್ರದ 5 ಹಾಡುಗಳು ಹಿಟ್ ಆಗಿತ್ತು. ಅದರಲ್ಲಿ 'ನಿನದೇ ನೆನಪು' ಮರೆಯಲಾಗದ ಗೀತೆ ಎಂದರೆ ತಪ್ಪಾಗಲ್ಲ.

More from Filmibeat

English summary
Dhanya Ramkumar pays tribute to grandfather Dr Rajkumar on his birthday;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X