ಧೀರೆನ್‌ಗೆ ಮುತ್ತಿನ ಮಳೆ ಸುರಿಸಿದ 'ಟಗರು ಪುಟ್ಟಿ' ಮಾನ್ವಿತಾ: ಸಖತ್ ಹಾಟ್ ಗುರು!

ಈ ಮೊದಲು ಬಾಲಿವುಡ್‌ ಸಿನಿಮಾಗಳಲ್ಲಿ ಮಾತ್ರವೇ ಕಾಣ ಸಿಗುತ್ತಿದ್ದ ಲಿಪ್‌ ಲಾಕ್ ದೃಶ್ಯಗಳು ಈಗ ಎಲ್ಲ ಚಿತ್ರರಂಗದಲ್ಲೂ ಮಾಮೂಲಾಗಿದೆ. ಅದರ ಚುಂಬನದ ಬಗ್ಗೆ ಕನ್ನಡ ಚಿತ್ರರಂಗ ಇತ್ತೀಚಿನ ವರೆಗೆ ತುಸು ಮಡಿವಂತಿಕೆಯಿಂದಲೇ ಇತ್ತು. ಆದರೆ ಈಗಿನ ಹೊಸ ನಟ-ನಟಿಯರು ಆ ಮಡಿವಂತಿಕೆ ಬಿಟ್ಟಿದ್ದಾರೆ.

'ಶಿವ 143' ಹೆಸರಿನ ಕನ್ನಡ ಸಿನಿಮಾದ ಹಾಡೊಂದು ನಿನ್ನೆ ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆ ಆಗಿದ್ದು, ಹಾಡಿನಲ್ಲಿ ಮುತ್ತುಗಳಿವೆಯೋ, ಮುತ್ತುಗಳ ನಡುವೆ ಹಾಡಿದೆಯೋ ಗೊತ್ತಾಗದಷ್ಟು ಹಸಿ-ಹಸಿ ಚುಂಬನದ ದೃಶ್ಯಗಳು ಅದರಲ್ಲಿವೆ.

Recommended Video

ಮಾನ್ವೀತಾ ಅವರನ್ನು ಇಷ್ಟು ಬೋಲ್ಡಾಗಿ ನೋಡಿರಲು ಸಾಧ್ಯವೇ ಇಲ್ಲಾ!

'ಟಗರು ಪುಟ್ಟಿ' ಮಾನ್ವಿತಾ ಈ ಸಿನಿಮಾ ನಾಯಕಿಯಾಗಿದ್ದು, ಹಿರಿಯ ನಟ ರಾಮ್‌ ಕುಮಾರ್ ಪುತ್ರ ಧೀರೆನ್‌ ಈ ಸಿನಿಮಾದ ನಾಯಕ. 'ಮಳೆ ಹನಿಯೇ ಮಳೆ ಹನಿಯೇ ಧರೆ ಯಾಕೊ ಬೆವರಿ ನಿಂತಂತೆ' ಎಂದು ಶುರು ಆಗುವ ಈ ಹಾಡು ನೋಡುವ ವೀಕ್ಷಕನಿಗೂ ಮೈಯೆಲ್ಲ ಬಿಸಿ ಹರಿ ಬೆವರು ಹನಿಗಟ್ಟುತ್ತದೆ ಅಷ್ಟು ಹಾಟ್ ಆಗಿದೆ ಈ ಹಾಡು.

Dheeren Ramkumar, Manvitha Kamaths New Video Song Of Shiva 143 Movie Getting Viral

ನಟಿ ಮಾನ್ವಿತಾ ಅಂತೂ ಮೈ ಚಳಿಯನ್ನು ಸಂಪೂರ್ಣವಾಗಿ ಬದಿಗಿಟ್ಟು ಹೊಸ ಹುಡುಗ ಧೀರೆನ್‌ನ ತುಟಿಗೆ ತುಟಿಯೊತ್ತಿದ್ದಾರೆ. ಕೇವಲ ಚುಂಬುನದ ದೃಶ್ಯಗಳು ಮಾತ್ರವೇ ಅಲ್ಲದೆ ಹಾಡಿನಲ್ಲಿ ಸಾಕಷ್ಟು ಗ್ಲಾಮರಸ್ ಅಂಶಗಳನ್ನೂ ಸೇರಿಸಲಾಗಿದೆ. ಒಟ್ಟಿನಲ್ಲಿ ಹಾಡನ್ನು ಒಬ್ಬೊಬ್ಬರೇ ಕುಳಿತು ನೋಡುವಂತೆ ಮಾಡಲಾಗಿದೆ!

ಅಂದಹಾಗೆ ಧೀರೆನ್ ರಾಮ್‌ ಕುಮಾರ್, ಡಾ ರಾಜ್‌ಕುಮಾರ್ ಅವರ ಮೊಮ್ಮಗ. ರಾಜ್‌ಕುಮಾರ್ ಪುತ್ರಿ ಪೂರ್ಣಿಮಾ ಹಾಗೂ ನಟ ರಾಮ್‌ ಕುಮಾರ್ ಪುತ್ರ. 'ಶಿವ 143' ಧೀರೆನ್‌ರ ಮೊದಲ ಸಿನಿಮಾ. ಮೊದಲ ಸಿನಿಮಾದಲ್ಲಿಯೇ ಗ್ಲಾಮರಸ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಧೀರೆನ್.

'ಶಿವ 143' ಸಿನಿಮಾವನ್ನು ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದು, ಈಗ ಬಿಡುಗಡೆ ಆಗಿರುವ ಹಾಡಿಗೆ ಕೊರಿಯಾಗ್ರಫಿಯನ್ನೂ ಅವರೇ ಮಾಡಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಗ್ಲಾಮರಸ್ ಆಗಿ ಹಾಡನ್ನು ಚಿತ್ರಿಸಿದ್ದಾರೆ ಅನಿಲ್. 3:45 ನಿಮಿಷದ ಹಾಡಿನಲ್ಲಿ 30ಕ್ಕೂ ಹೆಚ್ಚು ಚುಂಬನದ ದೃಶ್ಯಗಳನ್ನು ಹೆಣೆದಿದ್ದಾರೆ.

'ಶಿವ 143' ಸಿನಿಮಾವು ತೆಲುಗಿನ 'ಆರ್‌ಎಕ್ಸ್ 143' ಸಿನಿಮಾದ ರೀಮೇಕ್ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಜಯಣ್ಣ-ಬೋಗೇಂದ್ರ ಹಾಗೂ ಡಾ ಸೂರಿ ಬಂಡವಾಳ ಹೂಡಿದ್ದಾರೆ. ಅನಿಲ್ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ. ಈಗ ಬಿಡುಗಡೆ ಆಗಿರುವ 'ಮಳೆ ಹನಿಯೇ' ಹಾಡನ್ನು ನಿಹಾಲ್ ಮತ್ತು ಪೃಥ್ವಿ ಹಾಡಿದ್ದಾರೆ.

More from Filmibeat

English summary
Dheeren Ramkumar and Manvitha Kamath's new video song of movie Shiva 143 is getting viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X