For Quick Alerts
  ALLOW NOTIFICATIONS  
  For Daily Alerts

  ಹೊಸ ಹಾಡಿನೊಂದಿಗೆ ಬಂದ ಡಿಂಕ್ ಚಕ್ ಪೂಜಾ: ನೆಟ್ಟಿಗರಿಂದ ಸಖತ್ ಟ್ರೋಲ್

  |

  ಯೂಟ್ಯೂಬ್ ಸೆನ್ಸೇಷನ್ ಸ್ಟಾರ್ ಡಿಂಕ್ ಚಕ್ ಪೂಜಾ ಸದ್ದು ಸುದ್ದಿ ಇಲ್ಲದೆ ಅನೇಕ ದಿನಗಳಾಗಿತ್ತು. ಯೂಟ್ಯೂಬ್ ನಲ್ಲಿ ಆಕೆಯದ್ದು ಯಾವುದೆ ಹಾಡು ಕೂಡ ಇರಲಿಲ್ಲ. ಆದ್ರೀಗ ಪೂಜಾ ಈಸ್ ಬ್ಯಾಕ್....ಹೌದು, ಡಿಂಕ್ ಚಕ್ ಪೂಜಾ ಮತ್ತೆ ಬಂದಿದ್ದಾರೆ. ಕಳೆದ ಕೆಲದಿನಗಳಿಂದ ಸೈಲೆಂಟ್ ಆಗಿದ್ದ ಯೂಟ್ಯೂಬ್ ಸಿಂಗರ್ ಹೊಸ ಹಾಡಿನೊಂದಿಗೆ ರೀ-ಎಂಟ್ರಿ ಕೊಟ್ಟಿದ್ದಾರೆ.

  ನವೀನ್ ಕೃಷ್ಣರ್ ಬರೆದು ಹಾಡಿರುವ ವಿಶೇಷ ಕೊರೊನ ಗೀತೆ | Naveen Krishna | Song | Beatcorona

  ಸದ್ಯ ವಿಶ್ವದಾದ್ಯಂತ ಹೆಚ್ಚಿರುವ ಕೊರೊನಾ ವೈರಸ್ ಹಾವಳಿಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪೂಜಾ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಕೊರೊನಾ ಬಗ್ಗೆ ಹೊಸ ಹಾಡು ಮಾಡಿ ರಿಲೀಸ್ ಮಾಡಿದ್ದಾರೆ. ಈ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಜೊತೆಗೆ ಪೂಜಾ ಸಖತ್ ಟ್ರೋಲ್ ಆಗುತ್ತಿದ್ದಾರೆ..

  ಕೊರೊನಾ ಹಾಡಿನ ಮೂಲಕ ಬಂದ ಪೂಜಾ

  ಕೊರೊನಾ ಹಾಡಿನ ಮೂಲಕ ಬಂದ ಪೂಜಾ

  ಇಡೀ ದೇಶವೆ ಕೊರೊನಾ ವೈರಸ್ ನಿಂದ ಲಾಕ್ ಡೌನ್ ನಲ್ಲಿ ಇರುವ ವೇಳೆ ಪೂಜಾ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೋಗಾ ನಾ ಕೊರೊನಾ ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡಿನಲ್ಲಿ ವೈದ್ಯರ ಸಲಹೆ, ಪರೀಕ್ಷೆ ಹಾಗೂ ಕೊರನಾ ಬಾರದಂತೆ ನೋಡಿಕೊಳ್ಳಲು ಏನೆಲ್ಲ ಮಾಡಬೇಕೆಂದು ತಿಳಿಸಿದ್ದಾರೆ.

  ಪೂಜಾ ಸಿಗ್ನೇಚರ್ ಸ್ಟೆಪ್ ವೈರಲ್

  ಪೂಜಾ ತಮ್ಮ ಸಿಗ್ನೇಚರ್ ಸ್ಟೈಲ್ ನಲ್ಲಿ ವಾಪಸ್ ಆಗಿದ್ದು ನೋಡಿ ನೆಟ್ಟಿಗರು ತರಹೇವಾರಿ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಈ ಹಾಡಿನಲ್ಲಿ ಮಾಮುಲಿಯಂತೆ ಪೂಜಾ ಗಾಗಾಲ್ ಹಾಕಿ ಸ್ಟೆಪ್ ಹಾಕಿದ್ದಾರೆ. ಪೂಜಾ ಜೊತೆಗೆ ಸ್ಟ್ಯಾಫ್ ಮಾಸ್ಕ್ ಹಾಕಿಕೊಂಡು ಸ್ಟೆಪ್ ಹಾಕಿದ್ದಾರೆ.

  ಮಿಲಿಯನ್ ಗಟ್ಟಲೆ ಜನ ಪೂಜಾ ಸೋಂಕಿಗೆ ಒಳಗಾದಿದ್ದಾರೆ

  "ಕೊರೊನ ಜನರನ್ನು ಕೊಲ್ಲುತ್ತಿದೆ ಎಂದು ನೀವು ಭಾವಿಸಿದ್ದೀರಾ. 2.4 ಮಿಲಿಯನ್ ಜನ ಪೂಜಾ ಸೋಂಕಿಗೆ ಒಳಗಾಗಿದ್ದಾರೆ" ಎಂದು ಪೂಜಾ ಅವ ಫೋಟೋ ಹಾಕಿ ಟ್ರೋಲ್ ಮಾಡಲಾಗಿದೆ.

  ಎರಡು ವೈರಸ್ ನೊಂದಿಗೆ ಹೋರಾಡಬೇಕಿದೆ

  "ಪಿ‍ಎಂ ನರೇಂದ್ರ ಮೋದಿ ಕೂಡ ಈಗ ಈ ಎರಡೂ ವಿಷಯಗಳೊಂದಿಗೆ ಎಲ್ಲರೂ ವೈರಸ್ ನೊಂದಿಗೆ ಹೋರಾಡಬೇಕೆಂದು ಬಯಸುತ್ತಾರೆ. ಒಂದು ಕೊರೊನಾ ಮತ್ತು ಡಿಂಕ್ ಚಕ್ ಪೂಜಾ" ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

  ಕೊರೊನಾ ವೈರಸ್ ಸ್ಯಾನಿಟೈಸರ್ ಕುಡಿಯುತ್ತೆ

  "ಡಿಂಕ್ ಚಾಕ್ ಪೂಜಾ ಹಾಡನ್ನು ಕೇಳಿದ ನಂತರ ಕೊರೊನಾ ವೈರಸ್ ಸ್ಯಾನಿಟೈಸರ್ ಕುಡಿಯುತ್ತೆ". "ಈ ಹಾಡನ್ನು ಕೇಳಿದ ನಂತರ ಕೊರೊನಾ ವೈರಸ್ ತನ್ನನ್ನೆ ತಾನೆ ಆತ್ಮಹತ್ಯೆ ಮಾಡಿಕೊಳ್ಳುತ್ತೆ" ಹೀಗೆ ಸಾಕಷ್ಟು ಟ್ರೋಲ್ ಗಳು ಹರಿದಾಡುತ್ತಿದೆ. ಆದರ ಟ್ರೋಲ್ ಗಳ ಬಗ್ಗೆ ಡಿಂಕ್ ಚಕ್ ಪೂಜಾ ಯಾವುದು ತಲೆಕೆಡಿಸಿಕೊಂಡವರಲ್ಲ.

  English summary
  Youtube Sensation Dhinchak Pooja release new song about coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X