ಪೊಗರು ಬರುವುದಕ್ಕೆ ಮುಂಚೆ ಸದ್ದು ಮಾಡ್ತಿದೆ ಪ್ರಮೋಷನಲ್ ಸಾಂಗ್

ಭರ್ಜರಿ ಸಿನಿಮಾದ ನಂತರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸುತ್ತಿರುವ ಬಹುನಿರೀಕ್ಷೆಯ ಚಿತ್ರ ಪೊಗರು. ನಂದಕಿಶೋರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಭರದಿಂದ ಚಿತ್ರೀಕರಣ ಮಾಡ್ತಿದೆ. ಫಸ್ಟ್ ಲುಕ್ ಪೋಸ್ಟರ್, ಟೀಸರ್ ಹಾಗೂ ಮೇಕಿಂಗ್ ಮೂಲಕ ಭಾರಿ ಹೈಪ್ ಹುಟ್ಟುಹಾಕಿರುವ ಪೊಗರು ಯಾವಾಗ ರಿಲೀಸ್ ಆಗುತ್ತೆ ಎಂಬುದರ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.

ಪೊಗರು ಚಿತ್ರದ ಟ್ರೈಲರ್ ಮತ್ತು ಹಾಡುಗಳು ಯಾವಾಗ ಬರುತ್ತೆ ಎಂದು ಕುತೂಹಲ ಮೂಡಿಸಿದೆ. ಹೀಗಿರುವಾಗ ಪೊಗರು ಚಿತ್ರದ ಪ್ರಮೋಷನಲ್ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡ್ತಿದೆ.

ಪೊಗರು ಆಲ್ ದಿ ಬೆಸ್ಟ್ ಎಂಬ ಹೆಸರಿನಲ್ಲಿ ಈ ಪ್ರಮೋಷನಲ್ ಹಾಡು ರಿಲೀಸ್ ಮಾಡಿದ್ದು, ಆನಂದ್ ಆಡಿಯೋ ಅವರು ಅಧಿಕೃತವಾಗಿ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಅಪ್ ಲೌಡ್ ಮಾಡಿದ್ದಾರೆ. ಇಲ್ಲಿಯವರೆಗೂ 2.6 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ.

Dhruva sarja pogaru promotional song

ಅಂದ್ಹಾಗೆ, ಈ ಹಾಡಿಗೆ ಸಾಹಿತ್ಯ ಬರೆದಿರುವುದು ಸತೀಶ್ ಮಾಚೇನಹಳ್ಳಿ. ಈ ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿ, ಹಾಡಿರುವುದು Loy Valentine Saldanha. ಸ್ವತಃ ಧ್ರುವ ಸರ್ಜಾ ಅವರೇ ಈ ಹಾಡನ್ನ ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದ್ದರು.

ಇನ್ನುಳಿದಂತೆ ನಂದಕಿಶೋರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಧ್ರುವ ಸರ್ಜಾ ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ.

More from Filmibeat

English summary
After bharjari movie Kannada actor Dhruva sarja acting in pogaru. now dhruva sarja fans released promotional song of pogaru.the movie directed by nandakishor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X