For Quick Alerts
  ALLOW NOTIFICATIONS  
  For Daily Alerts

  'ಜ್ವರ ಬಂದಿದ್ದರೂ ಕುಣಿಬೇಕು ಅನಿಸುತ್ತೆ': ಖರಾಬು ಹಾಡಿನ ಬಗ್ಗೆ ತಮಿಳು ಅಭಿಮಾನಿ ಮಾತು

  |

  ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿ ನಡೆಸಿದೆ. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಪೊಗರು ಸಿನಿಮಾ ರಿಲೀಸ್ ಆಗುತ್ತಿದೆ.

  ಅವತ್ತು Dhruva Sarja, ಇವತ್ತು Karunya Ram | Filmibeat Kannada

  ಕನ್ನಡದಲ್ಲಿ ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಪೊಗರು ಸಿನಿಮಾ ತೆಲುಗು ಮತ್ತು ತಮಿಳು ಪ್ರೇಕ್ಷಕರ ಗಮನ ಸಹ ಸೆಳೆದಿದೆ. ವಿಶೇಷವಾಗಿ ಖರಾಬು ಹಾಡಿನಿಂದ ಬೇರೆ ಭಾಷೆಯಲ್ಲೂ ಪೊಗರು ಸಿನಿಮಾ ಸದ್ದು ಮಾಡ್ತಿದೆ. ಸಿನಿಮಾ ಯಾವುದು? ಹೀರೋ ಯಾರು ಎನ್ನುವುದು ಗೊತ್ತಿಲ್ಲದವರು ಈ ಹಾಡಿನಿಂದ ಎಲ್ಲ ತಿಳಿಯುವಂತಾಗಿದೆ. ಈ ಹಾಡಿನಲ್ಲಿ ಧ್ರುವ ಸರ್ಜಾ ಅವರ ಪರ್ಫಾಮೆನ್ಸ್ ನೋಡಿ ಫಿದಾ ಆಗಿರುವ ಪರಭಾಷೆ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ಇದೀಗ, ತಮಿಳು ಅಭಿಮಾನಿಯೊಬ್ಬ ಖರಾಬು ಹಾಡಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಈ ವಿಡಿಯೋವನ್ನು ಖುದ್ದು ಧ್ರುವ ಸರ್ಜಾ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಖರಾಬು ಹಾಡಿನ ಬಗ್ಗೆ ಆ ತಮಿಳು ಅಭಿಮಾನಿ ಏನು ಹೇಳಿದ್ದಾರೆ. ಮುಂದೆ ಓದಿ....

  ಹಬ್ಬಕ್ಕೆ ಸಜ್ಜಾಗಿ ಧ್ರುವ ಫ್ಯಾನ್ಸ್: ಪೊಗರು ಬಿಡುಗಡೆ ದಿನಾಂಕ ಲಾಕ್?

  ಮಕ್ಕಳಿಗೆ ಉಸಿರು ಆಗ್ಬಿಟ್ಟಿದೆ

  ಮಕ್ಕಳಿಗೆ ಉಸಿರು ಆಗ್ಬಿಟ್ಟಿದೆ

  ''ಖರಾಬು ಹಾಡು ಈಗಿನ ಮಕ್ಕಳಿಗೆ ಉಸಿರು ಆಗ್ಬಿಟ್ಟಿದೆ. ನನ್ನ ಮಕ್ಕಳು ಮನೆಯಲ್ಲಿ ಬೆಳಗ್ಗೆ ಎದ್ದು ಕಾಫಿ, ತಿಂಡಿ ಮಾಡ್ತಾರೋ ಇಲ್ಲವೋ ಖರಾಬು ಹಾಡು ಅಂತು ಕೇಳೆ ಕೇಳ್ತಾರೆ. ಎಲ್ಲೇ ಹೋದ್ರು ಖರಾಬು ಹಾಡು ಹಾಡ್ತಾರೆ'' ಎಂದು ತಮಿಳು ವ್ಯಕ್ತಿಯೊಬ್ಬ ತಮ್ಮ ಮಕ್ಕಳ ಸಂತೋಷದ ಬಗ್ಗೆ ವಿವರಿಸಿದ್ದಾನೆ.

  ಬೇರೆ ಲೆವೆಲ್ ಹಾಡು ಇದು

  ಬೇರೆ ಲೆವೆಲ್ ಹಾಡು ಇದು

  ''ನನಗೆ ಕನ್ನಡದಲ್ಲಿ ಈ ಹಾಡು ಕೇಳಿದೆ. ಭಾಷೆ ಅರ್ಥ ಆಗಿಲ್ಲ. ಆದ್ರೆ, ಆ ಮ್ಯೂಸಿಕ್, ಹೀರೋ ಲುಕ್, ಕೂದಲು ಬಿಟ್ಕೊಂಡು ಬರೋ ಅವರ ಎಂಟ್ರಿ ನೋಡ್ತಿದ್ರೆ ವಾಹ್ ಚಿಂದಿ ಗುರು. ಈ ಮ್ಯೂಸಿಕ್, ಡ್ಯಾನ್ಸ್ ನೋಡ್ರಿದ್ರೆ ಜ್ವರ ಬಂದಿದ್ದರೂ ಎದ್ದು ಕುಣಿಬೇಕು ಅನಿಸುತ್ತೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಕೋಲೆ ಬಸವನಿಗೂ ಖರಾಬು ಗುಂಗು: ಧ್ರುವ ಸರ್ಜಾ ಖುಷ್

  ಸಿನಿಮಾ ನೋಡೋದೇ ಬೇಡ

  ಸಿನಿಮಾ ನೋಡೋದೇ ಬೇಡ

  ''ಸಿನಿಮಾ ನೋಡೋದೇ ಬೇಡ. ಈ ಹಾಡೊಂದು ಸಾಕು. ತಲೈವಾ ಬೇರೆ ಲೆವಲ್‌ನಲ್ಲಿದ್ದಾರೆ. ಖರಾಬು ಸಾಂಗ್ ಚಿಂದಿ'' ಎಂದು ಆ ಅಭಿಮಾನಿ ವಿಡಿಯೋದಲ್ಲಿ ಹೇಳಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಅಭಿಮಾನಿ ತಮಿಳಿನಲ್ಲಿ ಈ ಹಾಡನ್ನು ಇನ್ನು ಕೇಳಿಲ್ಲ. ಕನ್ನಡದಲ್ಲಿ ಮಾತ್ರ ಕೇಳಿರುವುದು, ಏಕಂದ್ರೆ, ತಮಿಳಿನಲ್ಲಿ ಈ ಹಾಡು ಬಂದ್ರೆ ಬೇರೆ ಲೆವೆಲ್ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

  ಚಂದನ್ ಶೆಟ್ಟಿ ಮ್ಯೂಸಿಕ್

  ಚಂದನ್ ಶೆಟ್ಟಿ ಮ್ಯೂಸಿಕ್

  ಅಂದ್ಹಾಗೆ, ಖರಾಬು ಹಾಡಿನ ಸಾಹತ್ಯ ರಚಿಸಿರುವುದು ಚಂದನ್ ಶೆಟ್ಟಿ, ಹಾಡಿರುವುದು ಚಂದನ್ ಶೆಟ್ಟಿ, ಜೊತೆಗೆ ಸಂಗೀತ ನೀಡಿರುವುದು ಸಹ ಚಂದನ್ ಶೆಟ್ಟಿ. ಇದರ ಜೊತೆಗೆ ಧ್ರುವ ಸರ್ಜಾ ಅವರ ಭರ್ಜರಿ ಡ್ಯಾನ್ಸ್ ಸೇರಿ ಈ ಹಾಡನ್ನು ಗಡಿಯಾಚೆಯೂ ಘರ್ಜಿಸುವಂತೆ ಮಾಡಿದೆ.

  English summary
  Kannada actor Dhruva Sarja Shares Video of Tamil Fan who enjoying Pogaru Karabuu Song. the music by Chandan shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X