For Quick Alerts
  ALLOW NOTIFICATIONS  
  For Daily Alerts

  30 ಕೋಟಿ ವೀವ್ಸ್ ಸಾಧಿಸಿ ಹೊಸ ದಾಖಲೆ ಬರೆದ 'ಖರಾಬು' ಸಾಂಗ್

  |

  ಧ್ರುವ ಸರ್ಜಾ ನಟನೆಯ 'ಪೊಗರು' ಚಿತ್ರದ 'ಖರಾಬು' ಸಾಂಗ್ ಹೊಸ ದಾಖಲೆ ಬರೆದಿದೆ. ಎರಡೂವರೆ ವರ್ಷದ ಹಿಂದೆ ಈ ಸಾಂಗ್ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿತ್ತು. ಇದೀಗ ಬರೋಬ್ಬರಿ 30 ಕೋಟಿ ವೀವ್ಸ್ ಪಡೆದು ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

  ನಂದ ಕಿಶೋರ್ ನಿರ್ದೇಶನದ 'ಪೊಗರು' ಸಿನಿಮಾ ರಿಲೀಸ್ ಕಾರಣಾಂತರಗಳಿಂದ ತಡವಾಗಿತ್ತು. ಕೊರೋನಾ ಹಾವಳಿ ಕಮ್ಮಿ ಆದ ಮೇಲೆ ಬಿಡುಗಡೆಯಾಗಿದ್ದ ಅತಿ ದೊಡ್ಡ ಕನ್ನಡ ಸಿನಿಮಾ ಇದಾಗಿತ್ತು. ಭರ್ಜರಿ ಓಪನಿಂಗ್ ಪಡೆದುಕೊಂಡರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೋಡಿಯಾಗಿ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮಿಂಚಿದ್ದರು. ಚಂದನ್ ಶೆಟ್ಟಿ ಟ್ಯೂನ್ ಹಾಕಿ, ಲಿರಿಕ್ಸ್ ಬರೆದು 'ಬಾಸು ಖರಾಬು' ಎಂದು ಹಾಡಿದ್ದರು.

  ವಿದ್ಯಾಭರಣ್ ವಿರುದ್ಧ ನಟಿ ಆಡಿಯೋ ವೈರಲ್! ಮದುವೆ ಕ್ಯಾನ್ಸಲ್?ವಿದ್ಯಾಭರಣ್ ವಿರುದ್ಧ ನಟಿ ಆಡಿಯೋ ವೈರಲ್! ಮದುವೆ ಕ್ಯಾನ್ಸಲ್?

  'ಪೊಗರು' ಆಲ್ಬಮ್‌ ಸೂಪರ್ ಹಿಟ್ ಆಗಿತ್ತು. ಎಲ್ಲಾ ಸಾಂಗ್‌ಗೂ ಒಂದು ತೂಕವಾದರೆ 'ಖರಾಬು' ಸಾಂಗ್ ಮತ್ತೊಂದು ತೂಕ ಎನ್ನುವಂತೆ ಸದ್ದು ಮಾಡಿತ್ತು. ಚಿತ್ರದಲ್ಲಿ ನಾಯಕಿ ಗೀತಾಳನ್ನು ಪೊಗರು ಶಿವ ಕಾಡುವ ಹಾಡಿದು. ಧ್ರುವ ಸರ್ಜಾ ಜಬರ್ದಸ್ತ್‌ ಡ್ಯಾನ್ಸ್ ಮಾಡಿದ್ದಾರೆ.

  30 ಕೋಟಿ ವೀವ್ಸ್ ಪಡೆದ ಸಾಂಗ್

  30 ಕೋಟಿ ವೀವ್ಸ್ ಪಡೆದ ಸಾಂಗ್

  ಬಿಂದಾಸ್ ಟ್ಯೂನ್‌ಗೆ ಕ್ಯಾಚಿ ಲಿರಿಕ್ಸ್ ಬರೆದು ಚಂದನ್ ಶೆಟ್ಟಿ ಹಾಡಿದ್ದರು. ಧ್ರುವ ಸರ್ಜಾ ಇಡೀ ಸಿನಿಮಾ ಸಿಕ್ಕಾಪಟ್ಟೆ ರಗಡ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದರು. ಬಹಳ ಒರಟನಾದ ಶಿವನಿಗೆ ಟೀಚರ್ ಗೀತಾ ಪಾಠ ಹೇಳುವ ಸಾಹಸ ಮಾಡುತ್ತಾಳೆ. ಆಗ ಆಕೆಯನ್ನು ಕೆಣಕುತ್ತಾ, ಶಿವ ಬುದ್ಧಿ ಕಲಿಸಲು ಹಾಡುವ ಹಾಡಿದು. ಮಕ್ಕಳಿಗೆ ಈ ಡ್ಯಾನ್ಸ್ ನಂಬರ್ ಬಹಳ ಇಷ್ಟವಾಗಿತ್ತು. ಸದ್ಯ ಸಾಂಗ್ 30 ಕೋಟಿಗೂ ಅಧಿಕ ವೀವ್ಸ್ ಸಾಧಿಸಿದೆ.

  ಧ್ರುವ ಸರ್ಜಾ 4ನೇ ಸಿನಿಮಾ

  ಧ್ರುವ ಸರ್ಜಾ 4ನೇ ಸಿನಿಮಾ

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 4ನೇ ಸಿನಿಮಾ 'ಪೊಗರು'. ಧ್ರುವ ನಟನೆಯ ಎಲ್ಲಾ ಸಿನಿಮಾಗಳು ತಡವಾಗಿ ರಿಲೀಸ್ ಆಗುತ್ತಾ ಬಂದಿದೆ. ಆ ಸಾಲಿಗೆ ಈ ಸಿನಿಮಾ ಕೂಡ ಸೇರಿಕೊಂಡಿತ್ತು. ಕೊರೊನಾ ಹಾವಳಿಯಿಂದ ಸಿನಿಮಾ ರಿಲೀಸ್ ಮತ್ತಷ್ಟು ತಡವಾಗಿತ್ತು. ಸಾಂಗ್ಸ್‌ಗೆ ಚಂದನ್ ಶೆಟ್ಟಿ ಟ್ಯೂನ್ ಹಾಕಿದ್ರು ವಿ. ಹರಿಕೃಷ್ಣ ರೀ ರೆಕಾರ್ಡಿಂಗ್ ಮಾಡಿದ್ದರು.

  ಧ್ರುವ ಸಿನಿಮಾಗಳ ಆಲ್ಬಮ್ ಹಿಟ್

  ಧ್ರುವ ಸಿನಿಮಾಗಳ ಆಲ್ಬಮ್ ಹಿಟ್

  'ಅದ್ಧೂರಿ', 'ಬಹದ್ದೂರ್', 'ಭರ್ಜರಿ', 'ಪೊಗರು' ಹೀಗೆ ಧ್ರುವ ಸರ್ಜಾ ನಟನೆಯ ಎಲ್ಲಾ ಸಿನಿಮಾಗಳ ಆಲ್ಬಮ್ ಕೂಡ ಹಿಟ್ ಆಗಿದೆ. ಒಂದಕ್ಕಿಂತ ಒಂದು ಸಾಂಗ್ ಅಭಿಮಾನಿಗಳ ಮನಗೆದ್ದಿದೆ. ಆದರೆ ಆ ಲಿಸ್ಟ್‌ನಲ್ಲಿ 'ಖರಾಬು' ಸಾಂಗ್ ನಂಬರ್‌ ವನ್ ಪ್ಲೇಸ್‌ನಲ್ಲಿದೆ. ಇದು ಆಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೆ ಖುಷಿ ತಂದಿದೆ.

  'ಮಾರ್ಟಿನ್' ಆಗಿ ಬರ್ತಿದ್ದಾರೆ ಧ್ರುವ

  'ಮಾರ್ಟಿನ್' ಆಗಿ ಬರ್ತಿದ್ದಾರೆ ಧ್ರುವ

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 5ನೇ ಸಿನಿಮಾ 'ಮಾರ್ಟಿನ್'. ಎ.ಪಿ ಅರ್ಜುನ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ಉದಯ್ ಮೆಹ್ತಾ ಬಹುಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವರ್ಷವೇ ಸಿನಿಮಾ ತೆರೆಗೆ ಬರಬೇಕಿತ್ತು. ಶೂಟಿಂಗ್ ತಡವಾದ ಕಾರಣ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿದೆ.

  English summary
  Dhruva Sarja Starrer Pogaru Movie Karabuu Song crossed 300 Million Views on Youtube. This song has been penned and composed by Big Boss winner, Chandan Shetty. know more.
  Friday, November 25, 2022, 14:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X