For Quick Alerts
  ALLOW NOTIFICATIONS  
  For Daily Alerts

  ಜೂನಿಯರ್ ಚಿರು ಜೊತೆ ಖರಾಬು ಹಾಡು ವೀಕ್ಷಿಸಿದ ಧ್ರುವ ಸರ್ಜಾ

  |

  ಧ್ರುವ ಸರ್ಜಾ ನಟನೆಯಲ್ಲಿ ಮೂಡಿ ಬಂದಿದ್ದ ಪೊಗರು ಸಿನಿಮಾ ರಾಜ್ಯಾದ್ಯಂತ ತೆರೆಕಂಡು ಅದ್ಭುತ ಪ್ರದರ್ಶನ ಕಾಣುತ್ತಿದೆ. ರಾಬರ್ಟ್ ಅಬ್ಬರ ನಡುವೆಯೂ ಹಲವು ಥಿಯೇಟರ್‌ನಲ್ಲಿ ಪೊಗರು ಶೋ ಕಾಣ್ತಿದೆ.

  ಪೊಗರು ಸಿನಿಮಾದ ಖರಾಬು ಹಾಡು ಯಾವ ಮಟ್ಟಿಗೆ ಹಿಟ್ ಆಗಿತ್ತು ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಸಣ್ಣ ಮಕ್ಕಳಿಂದ ಹಿಡಿದು, ಮುದುಕರವರೆಗೂ ಖರಾಬು ಹಾಡನ್ನು ಎಂಜಾಯ್ ಮಾಡದವರಿಲ್ಲ.

  ಫೋಟೋ ವೈರಲ್: ರೊಮ್ಯಾಂಟಿಕ್ ಮೂಡ್ ನಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿ ಫೋಟೋ ವೈರಲ್: ರೊಮ್ಯಾಂಟಿಕ್ ಮೂಡ್ ನಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿ

  ಇದೀಗ, ಖರಾಬು ಹಾಡನ್ನು ಜೂನಿಯರ್ ಚಿರು ವೀಕ್ಷಿಸುತ್ತಿರುವ ಝಲಕ್ ಹೊರಬಿದ್ದಿದೆ. ಧ್ರುವ ಸರ್ಜಾ ಮನೆಯಲ್ಲಿ ಕುಳಿತು ತನ್ನ ಅಣ್ಣನ ಮಗನ ಜೊತೆ ಖರಾಬು ಹಾಡನ್ನು ನೋಡಿ ಖುಷಿಪಡುತ್ತಿದ್ದಾರೆ.

  ಧ್ರುವ ಸರ್ಜಾರ ತೊಡೆಯ ಮೇಲೆ ಕುಳಿತು ನಗು ಬೀರುತ್ತಿರುವ ಮಗು ವಿಡಿಯೋ ಹೃದಯ ಮುಟ್ಟವಂತಿದೆ. ಅಣ್ಣನ ಮೇಲಿನ ಪ್ರೀತಿ ಮತ್ತು ಅಭಿಮಾನದ ಪ್ರತೀಕ ಜೂನಿಯರ್ ಚಿರು ವಿಚಾರದಲ್ಲಿ ನೋಡಬಹುದು. ಧ್ರುವ ಸರ್ಜಾ ಅವರ ಈ ವಿಡಿಯೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಅಂದ್ಹಾಗೆ, ನಂದಕಿಶೋರ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಹೆಚ್ಚು ಬಲ ತುಂಬಿರುವುದು ಚಂದನ್ ಶೆಟ್ಟಿ ಸಂಗೀತ ಹಾಗೂ ಖುದ್ದು ಚಂದನ್ ಅವರೇ ಸಾಹಿತ್ಯ ರಚಿಸಿದ್ದಾರೆ.

  English summary
  Kannada actor Dhruva Sarja Watch His Karabuu song with Chiru Son.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X