ಮೋಡಿ ಮಾಡ್ತಿದೆ 'ಡಿಚ್ಕಿ ಡಿಸೈನ್' ಹಿಪ್ ಹಾಪ್ ಹಾಡು

ಹೊಸ ಚಿತ್ರತಂಡಗಳು ಹೊಸ ಪ್ರಯತ್ನಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿವೆ. ಈಗ ಅದೇ ರೀತಿ ಹೊಸ ಹುಡುಗರ ತಂಡ ಕಾಮಿಡಿ ಕ್ರೈಮ್ ಥ್ರಿಲ್ಲರ್ ಕಥೆಯೊಂದಿಗೆ ಗಮನ ಸೆಳೆಯಲು ಬರುತ್ತಿದೆ.

'ಡಿಚ್ಕಿ ಡಿಸೈನ್' ಎಂದು ಸಿನಿಮಾದ ಹೆಸರೇ ಇಷ್ಟೊಂದು ವಿಭಿನ್ನವಾಗಿ ಇದ್ದು, ಇನ್ನು ಸಿನಿಮಾ ಹೇಗೆ ಇರಬಹುದು ಎನ್ನುವ ಕುತೂಹಲ ಹುಟ್ಟಿಸುತ್ತದೆ. ಸದ್ಯಕ್ಕೆ, ಸಿನಿಮಾದ ಒಂದು ಹಾಡು ಬಿಡುಗಡೆಯಾಗಿದೆ.

'ಮಹದೇವ...' ಎನ್ನುವ ಈ ಹಾಡನ್ನು ಹಿಪ್ ಹಾಪ್ ಸ್ಟೈಲ್ ನಲ್ಲಿ ಮಾಡಲಾಗಿದೆಯಂತೆ. ಮೊದಲ ಸಿನಿಮಾದ ಹಾಡಿನಲ್ಲಿಯೇ ಬೇರೆ ರೀತಿಯ ಮ್ಯಾನರಿಸಂ ಮಾಡಿದ್ದಾರೆ ರಣ ಚಂದು. ಹಾಡಿನ ಮ್ಯೂಸಿಕ್ ಮತ್ತು ಸಾಹಿತ್ಯ ಮಜಾವಾಗಿದೆ.

dichki design kannada movie song released

ಸಿನಿಮಾದಲ್ಲಿ ಮೂರು ಹಾಡುಗಳು ಇದ್ದು, ಸದ್ಯಕ್ಕೆ ಈ ಹಾಡು ರಿಲೀಸ್ ಆಗಿದೆ. ಕಾರ್ತಿಕ್ ಚನ್ನುಜಿ ರಾವ್ ಸಾಹಿತ್ಯ ಹಾಗೂ ರೋಣದ ಬಕ್ಕೆಶ್ ಸಂಗೀತ ಹಾಡಿನಲ್ಲಿದೆ. ಡಿ ಬೀಟ್ಸ್ ನಲ್ಲಿ ಹಾಡು ಬಿಡುಗಡೆಯಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದು ಮುನ್ನುಗುತ್ತಿದೆ.

ರಣ ಚಂದು ಈ ಸಿನಿಮಾದ ನಟನೆಯ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅವರು 'ಕ್ರೇಜಿ ಬಾಯ್' ಸಿನಿಮಾದಲ್ಲಿ ಕೆಲಸ ಮಾಡಿದ್ದರು. ನಿಮಿಕಾ ರತ್ನಕರ್ ಸಿನಿಮಾದ ನಾಯಕಿಯಾಗಿದ್ದಾರೆ. ಇವರ ನಾಲ್ಕನೇ ಸಿನಿಮಾ ಇದಾಗಿದೆ.

ಗೋಲ್ಡನ್ ಲೆನ್ಸ್ ಸಿನಿಮಾಸ್ ಈ ಸಿನಿಮಾಗೆ ಬಂಡವಾಳ ಹಾಕಿದೆ. ಕಿಶೋರ್ ಮತ್ತು ಸಮರ್ತ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಜುಲೈ 19 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಹಾಡು ನೋಡಲು ಈ ಲಿಂಕ್ ಕ್ಲಿಕ್ಕಿಸಿ

More from Filmibeat

English summary
'Dichki Design kannada movie song released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X