For Quick Alerts
  ALLOW NOTIFICATIONS  
  For Daily Alerts

  ತಾರಕಾಸುರನಿಗೆ ಭರ್ಜರಿ ಚೇತನ್ ಸಾಥ್

  By Pavithra
  |

  ಟೈಟಲ್ ನಿಂದಲೇ ಕುತೂಹಲವನ್ನು ಮೂಡಿಸಿದ ಚಿತ್ರ 'ತಾರಕಾಸುರ'. ಸಿನಿಮಾ ಚಿತ್ರೀಕರಣ ಹಂತದಲ್ಲಿ ಇರುವಾಗಲೇ ಡಬ್ಬಿಂಗ್ ಹಕ್ಕು ಮಾರಾಟವಾಗಿರುವ ಸಿನಿಮಾ. 'ರಥಾವರ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಹಲವಾರು ವಿಚಾರಗಳಿಂದ ಸುದ್ದಿ ಆಗಿರುವ ತಾರಕಾಸುರ ಚಿತ್ರತಂಡದಿಂದ ಮತ್ತೊಂದು ವಿಚಾರ ಹೊರಬಿದ್ದಿದೆ.

  ಸ್ಟಾರ್ ನಟರಿಗೆ ಲಿರಿಕ್ ಬರೆದು ಬಾಕ್ಸ್ ಆಫೀಸ್ ನಲ್ಲಿ ಆ ಹಾಡು ಹಿಟ್ ಆಗುವಂತೆ ಮಾಡಿರುವ ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಬಹದ್ದೂರ್ ಚೇತನ್ ತಾರಕಾಸುರ ಚಿತ್ರಕ್ಕೆ ಹಾಡನ್ನ ಬರೆದಿದ್ದಾರೆ. ವಿಶೇಷ ಅಂದರೆ ಇತ್ತೀಚಿಗಷ್ಟೇ 'ಕನಕ' ಸಿನಿಮಾದ "ಎಣ್ಣೆ ನಮ್ಸು ಊಟ ನಿಮ್ದು" ಹಾಡನ್ನ ಹಾಡಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ಗಾಯಕ ನವೀನ್ ಸಜ್ಜು ಚೇತನ್ ಬರೆದ ಸಾಹಿತ್ಯಕ್ಕೆ ಧ್ವನಿ ಆಗಿದ್ದಾರೆ.

  ಜರ್ಮನ್ ಯುವಕನ ಕನ್ನಡ ಪ್ರೇಮಕ್ಕೆ ತಲೆ ಬಾಗಿದ ಅಣ್ಣಾವ್ರ ಮಗ ಪುನೀತ್ಜರ್ಮನ್ ಯುವಕನ ಕನ್ನಡ ಪ್ರೇಮಕ್ಕೆ ತಲೆ ಬಾಗಿದ ಅಣ್ಣಾವ್ರ ಮಗ ಪುನೀತ್

  ತಾರಕಾಸುರ ಸಿನಿಮಾ ಮೂಲ ವೈಭವ್ ಕನ್ನಡ ಸಿನಿಮಾರಂಗಕ್ಕೆ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ' ಕಾರ್ಯದರ್ಶಿ ನರಸಿಂಹಲು ಚಿತ್ರ ನಿರ್ಮಾಣ ಮಾಡುವುದರ ಜೊತೆಗೆ ತಮ್ಮ ಮಗನನ್ನ ಚಿತ್ರರಂಗಕ್ಕೆ ಹೀರೋ ಆಗಿ ಪರಿಚಯಿಸುತ್ತಿದ್ದಾರೆ.

  ಚಂದನವನದ ಕೆಂಡಸಂಪಿಗೆ ಮಾನ್ವಿತಾ ಹರೀಶ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಧರ್ಮ ವಿಶ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು ಕುಮಾರ್ ಗೌಡ ಕ್ಯಾಮೆರಾ ವರ್ಕ್ ಸಿನಿಮಾಗಿದೆ. ಚಿತ್ರದಲ್ಲಿ ಖಳನಟನಾಗಿ ಡ್ಯಾನಿ ಸಫಾನಿ ಅಭಿನಯಿಸಿರುವುದು ಚಿತ್ರಕ್ಕೆ ಮತ್ತೊಂದು ವಿಶೇಷ.

  ಸದ್ಯ ಚಿತ್ರೀಕರಣ ಮುಗಿಸಿರುವ ನಿರ್ದೇಶಕರು ಚುನಾವಣೆಯ ನಂತರ ಸಿನಿಮಾವನ್ನ ತೆರೆಗೆ ತರುವ ಆಲೋಚನೆಯಲ್ಲಿದ್ದಾರೆ. ಚಿತ್ರದ ಹಾಡುಗಳನ್ನ ಇನ್ನು ಕೆಲವೇ ದಿನಗಳಲ್ಲಿ ಪ್ರೇಕ್ಷಕರಿಗೆ ಕೇಳಿಸುವಂತಹ ಪ್ರಯತ್ನ ಮಾಡಲಿದೆ ಸಿನಿಮಾತಂಡ.

  'ಟಗರು' ಗೆದ್ದ ಖುಷಿಯಲ್ಲಿ ಬಂತು 'ಬದುಕಿನ ಬಣ್ಣವೇ..' ಹಾಡು'ಟಗರು' ಗೆದ್ದ ಖುಷಿಯಲ್ಲಿ ಬಂತು 'ಬದುಕಿನ ಬಣ್ಣವೇ..' ಹಾಡು

  English summary
  Kannada Director Chetan wrote the song for Tarakasura film. Vibhav playing lead role in Tarakasura movie, Ratahavara movie fame director chandrashekar bandiyappa directing the film

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X