'ಪರಿಮಳಾ ಡಿಸೋಜಾ'ಗಾಗಿ ಮತ್ತೊಂದು ಅಮ್ಮನ ಹಾಡಿಗೆ ಧ್ವನಿ ನೀಡಿದ ಜೋಗಿ ಪ್ರೇಮ್

By ಫಿಲ್ಮಿಬೀಟ್ ಡೆಸ್ಕ್

ಜೋಗಿ ಪ್ರೇಮ್ ಕೇವಲ ನಿರ್ದೇಶಕ ಅಷ್ಟೇ ಅಲ್ಲ. ನಟನೆಯಲ್ಲೂ ಪ್ರಯೋಗ ಮಾಡಿದ್ದಾರೆ. ಆದರೆ, ನಿರ್ದೇಶನದ ಜೊತೆಗೆ ಅವರಿಗೆ ಯಶಸ್ಸು ಅಂತ ಸಿಕ್ಕಿದ್ದು ಗಾಯನದಲ್ಲಿ. ಜೋಗಿ ಪ್ರೇಮ್ ಅಮ್ಮನ ಕುರಿತಾದ ಹಾಡು ಹಾಡಿದ್ದಾರೆ ಅಂದ್ರೆ ಮುಗೀತು. ಆ ಹಾಡು ಸಂಗೀತ ಪ್ರಿಯರ ಮನಸ್ಸು ಗೆದ್ದ ಹಾಗೆಯೇ.

ಜೋಗಿ ಈಗ ಮತ್ತೊಂದು ಅಮ್ಮ ಹಾಡನ್ನು ಹಾಡಿದ್ದಾರೆ. ಈ ಪ್ರಪಂಚದಲ್ಲಿ ಅಮ್ಮಿನಿಗೆ ಮಿಗಿಲಾದ ಮತ್ತೊಂದು ಜೀವವಿಲ್ಲ. ಅಮ್ಮ ಜೊತೆಗಿದ್ದರೆ ಅದೇನೋ ಧೈರ್ಯ. ಅದೇನೋ ಖುಷಿ. ಪ್ರಪಂಚದ ಮೇಲಿರುವ ಇಂತಹ ಅದ್ಭುತ ವ್ಯಕ್ತಿತ್ವದ ಬಗ್ಗೆ ಪ್ರೇಮ ಕವಿ ಕೆ ಕಲ್ಯಾಣ್ "ಅಮ್ಮ ಎಂಬ ಹೆಸರೆ ಆತ್ಮ ಬಲ.." ಎಂದು ಸಾಹಿತ್ಯ ರಚಿಸಿದ್ದಾರೆ. 'ಪರಿಮಳಾ ಡಿಸೋಜಾ' ಅನ್ನೋ ಸಿನಿಮಾಗಾಗಿ ಈ ಹಾಡು ರೆಡಿಯಾಗಿದ್ದು, ಈ ಹಾಡನ್ನು ಜೋಗಿ ಪ್ರೇಮ್ ಹಾಡಿದ್ದಾರೆ.

Director Prem Sung Another Mother Song For Parimala Dsouza Movie

ಇತ್ತೀಚೆಗೆ ಇದೇ ಹಾಡಿನ ಲಿರಿಕಲ್ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ. ಕೆ.ಕಲ್ಯಾಣ್, ಹಿರಿಯ ನಟಿ ಭವ್ಯಾ, ಜಂಕಾರ್ ಮ್ಯೂಸಿಕ್ ಭರತ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಹಾಡನ್ನು ರಿಲೀಸ್ ಮಾಡಿದ್ದಾರೆ.

"ನಮ್ಮ ಚಿತ್ರಕ್ಕಾಗಿ ಕೆ.ಕಲ್ಯಾಣ್ ಅಮ್ಮನ ಬಗ್ಗೆ ಒಳ್ಳೆಯ ಹಾಡು ಬರೆದಿದ್ದಾರೆ. ಅಷ್ಟೇ ಅದ್ಭುತವಾಗಿ ಜೋಗಿ ಪ್ರೇಮ್ ಹಾಡಿದ್ದಾರೆ. ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ. ಮರ್ಡರ್ ಮಿಸ್ಟರಿ ಜೊತೆಗೆ ಆಕ್ಷನ್, ಸೆಂಟಿಮೆಂಟ್ ಎಲ್ಲಾ ಅಂಶಗಳಿರುವ 'ಪರಿಮಳ ಡಿಸೋಜಾ' ತೆರೆಗೆ ಬರಲು ಸಿದ್ದವಾಗಿದೆ." ಎಂದು ನಿರ್ದೇಶಕ ಡಾ||ಗಿರಿಧರ್ ಹೆಚ್ ಟಿ. ಮಾಹಿತಿ ನೀಡಿದ್ದಾರೆ.

Director Prem Sung Another Mother Song For Parimala Dsouza Movie

"ತಾಯಿ ಬಗ್ಗೆ ಹಾಡು ಬರೆಯಬೇಕೆಂದರೆ ಏನೋ ಒಂಥರ ಖುಷಿ. ಈ ಹಾಡನ್ನು ಅತೀ ಶೀಘ್ರವಾಗಿ ಬರೆಯಬೇಕಿತ್ತು. ಆಗ ನಿರ್ಮಾಪಕರು ನನ್ನ ಅತ್ತಿಗೆಯ ಮೂಲಕ ಬೇಗ ಬರೆದುಕೊಡಲು ಹೇಳಿಸಿದರು. ಆಗಲೇ ನನಗೆ ನಿರ್ಮಾಪಕರು ನಮಗೆ ಬಳಗ ಎಂದು ತಿಳಿಯಿತು. ಅಮ್ಮನ ಹಾಡನ್ನು ಪ್ರೇಮ್ ಅವರು ಅಷ್ಟೇ ಅದ್ಭುತವಾಗಿ ಹಾಡಿದ್ದಾರೆ" ಎಂದು ಪ್ರೇಮಕವಿ ಕಲ್ಯಾಣ್ ಖುಷಿ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ "ನಿರ್ದೇಶಕರು ಹೇಳಿದ ಕಥೆ ತುಂಬಾನೇ ಇಷ್ಟ ಆಯ್ತು. ಈ ಸಿನಿಮಾದಲ್ಲಿ ನಾನು ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ." ಎಂದು ಹಿರಿಯ ನಟಿ ಭವ್ಯಾ ಮಾಹಿತಿ ನೀಡಿದ್ದಾರೆ.

More from Filmibeat

English summary
Director Prem Sung Another Mother Song For Parimala D'souza Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X