twitter
    For Quick Alerts
    ALLOW NOTIFICATIONS  
    For Daily Alerts

    ಹಾಡಿನ ಮೂಲಕ ಪುನೀತ್‌ಗೆ ಯೋಗರಾಜ ಭಟ್ ಅಂತಿಮ ನಮನ!

    |

    ಸಿನಿಮಾರಂಗದ ಸಾಕಷ್ಟು ಮಂದಿ ಕೂಡ ಪುನೀತ್ ರಾಜಕುಮಾರ್ ಅವರ ಜೊತೆಗೆ ನಿಕಟವಾದ ಬಂಧವನ್ನು ಹೊಂದಿದ್ದಾರೆ. ಒಮ್ಮೆ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾದರೆ ಸಾಕು ಭೇಟಿಯನ್ನು ಎಂದಿಗೂ ಮರೆಯುವುದಿಲ್ಲ. ಅದು ಸದಾ ಜೀವಂತವಾಗಿ ನೆನಪಿನಲ್ಲಿ ಉಳಿಸಿ ಕೊಳ್ಳುವಂತಹಷ್ಟು ಮಧುರವಾಗಿರುತ್ತಿತ್ತು. ವಿಚಾರವನ್ನು ಈಗಾಗಲೇ ಎಷ್ಟೋ ಕಲಾವಿದರು ಹಂಚಿಕೊಂಡಿದ್ದಾರೆ. ಇಂತಹ ಅಮೂಲ್ಯ ರತ್ನ ಇನ್ನೊಂದು ಸಿಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅದರಲ್ಲೂ ಅವರೊಟ್ಟಿಗೆ ಕೆಲಸ ಮಾಡಿದವರಿಗೆ ಅಪ್ಪು ಅವರು ಇನ್ನಿಲ್ಲ ಎನ್ನುವ ಸುದ್ದಿಯನ್ನು ಅರಗಿಸಿಕೊಳ್ಳುವುದು ಸಾಧ್ಯವೇ ಇಲ್ಲ.

    ಪುನೀತ್ ರಾಜಕುಮಾರ್ ಜೊತೆಗೆ ನಿರ್ದೇಶಕ ಯೋಗರಾಜ ಭಟ್ ಸಿನಿಮಾ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅಂದರೆ ಅವರಿಗೂ ಎಲ್ಲಿಲ್ಲದ ಪ್ರೀತಿ. ಈ ಇಲ್ಲವಾದ ನೋವಿನ ಸಂಗತಿ ಎಲ್ಲರಂತೆಯೇ ಅವರಿಗೂ ಕೂಡ ಶಾಕ್‌ ಕೊಟ್ಟಿದೆ. ಇವರ ಕಾಂಬಿನೇಷನ್‌ನ ಪರಮಾತ್ಮ ಸಿನಿಮಾ ಹಿಟ್‌ ಲಿಸ್ಟ್‌ ಸೇರಿತ್ತು. ಈಗ ಅದೇ ಚಿತ್ರದ ಹಾಡಿನ ಸಾಹಿತ್ಯ ಬದಲಿಸಿ ಯೋಗರಾಜ್‌ಭಟ್‌ ಅಪ್ಪುಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಅಪ್ಪು ಇನ್ನಿಲ್ಲ ಎಂದಾದಾಗ ವಿಕಟಕವಿ ಯೋಗರಾಜ್ ಭಟ್ ತಮ್ಮ ಕವಿ ಮನಸ್ಸಿನಿಂದ ನಾಲ್ಕು ಸಾಲುಗಳನ್ನು ಬರೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    "ಜೊತೆಗಿರದ ಜೀವ ಎಂದಿಗೂ ಜೀವಂತ, ನಿಮ್ಮನ್ನು ಕೊನೆಯ ಬಾರಿ ಇವತ್ತು ಬಳಿ ನಿಂತು ನೋಡಿ, ಭುಜ ತಟ್ಟಿದಾಗ ನನಗೆ ಅನಿಸಿದ್ದು ಇಷ್ಟೆ-

    Director Yograj Bhat Tribute Puneeth Rajkumar With A Song

    ಸಾವಲ್ಲ ಇದು ನಿಮ್ಮ ಹುಟ್ಟು. ದೇಹ ಹೋಗ ಬಹುದು ಸ್ನೇಹ ಹೋದೀತೆ? ಸತತವಾಗಿ ಈ ನಾಡಿಗೆ ನಿತ್ಯ ನೂತನವಾಗಿ ನೆನಪಾಗುತ್ತಾ, ಇನ್ನಷ್ಟು ನಳನಳಿಸುವ ಕನ್ನಡ ಚೈತನ್ಯವಾಗಿ ಶಾಶ್ವತವಾಗಿ ಬಾಳುತ್ತೀರಿ ನೀವು. ಕುಟುಂಬಕ್ಕೆ ಸಕಲ ಕನ್ನಡಿಗರ ಶ್ರೀರಕ್ಷೆ ಇದೆ. ಆಪ್ತವಾಗಿ ತಮ್ಮ ಅಭಿಮಾನಿಯಾಗಿ ಇನ್ನೇನು ಅನ್ನಲಿ? ನಮನ ಹೋಗಿ ಬನ್ನಿ.

    ಈ ಸಾಲುಗಳನ್ನು ಬರೆಯುವುದರ ಮೂಲಕ ಯೋಗರಾಜಭಟ್ ತಮ್ಮ ಮನಸ್ಸಿನ ಆಳದ ನೋವನ್ನ ವ್ಯಕ್ತಪಡಿಸಿದರು. ಇದೀಗ ಹಾಡೊಂದನ್ನು ಬರೆಯುವುದರ ಮೂಲಕ ಪುನೀತ್‌ ರಾಜಕುಮಾರ್‌ ಅವರಿಗೆ ಯೋಗರಾಜಭಟ್ ತಮ್ಮ ಅಂತಿಮ ನಮನ ಸಲ್ಲಿಸಿದ್ದಾರೆ. ಪರಮಾತ್ಮ ಸಿನಿಮಾದ ಹೆಸರು ಪೂರ್ತಿ ಹೇಳಲೆ ಹಾಡಿನ ಸಾಹಿತ್ಯವನ್ನು ಬದಲಿಸಿ. "ಉಸಿರು ಪೂರ್ತಿ ಹೋದರು, ಹೆಸರು ಪೂರ್ತಿ ನೆನಪಿದೆ" ಎಂದು ಶುರುವಾಗುವ ಈ ಸಾಹಿತ್ಯ ಅಪ್ಪು ನಮ್ಮೊಂದಿಗೆ ಸದಾ ಅಜರಾಮರ ಎನ್ನುವುದನ್ನು ಹೇಳುತ್ತೆ.

    "ಉಸಿರು ಪೂರ್ತಿ ಹೋದರು, ಹೆಸರು ಪೂರ್ತಿ ನೆನಪಿದೆ"!

    "ಉಸಿರು ಪೂರ್ತಿ ಹೋದರು ಹೆಸರು ಪೂರ್ತಿ ನೆನಪಿದೆ... ನೀನು ಇರದೇ ಹೋದರು ನಿನ್ನ ನಗೆಯ ಬೆಳಕಿದೆ... ಮನೆಯ ಮುದ್ದು ಕುಸಿಗೆ ನಾಡ ನಮನ... ಖಂಡಿತ ಮರಣವಿದಲ್ಲ ಜನಿಸಿದೆ ನೀನಿಂದು... ನಮ್ಮೊಲವಿನ ಪರಮಾತ್ಮ ಶಾಶ್ವತ ನೀನೆಂದು... ಉಸಿರು ಮಾತ್ರ ಹೋಗಿದೆ ಹೆಸರು ಪೂರ್ತಿ ನೆನಪಿದೆ.. ಬಾಳ ಪಯಣ ಮುಗಿದರೂ ಸ್ಮೃತಿಯ ಪಯಣ ಮುಗಿವುದೇ.. ಬೆಳ್ಳಿ ಪರದೆ ಚುಕ್ಕಿಗೆ ನಲ್ಮೆ ನಮನ.

    ಈ ರೀತಿಯ ಸಾಹಿತ್ಯವನ್ನು ಯೋಗರಾಜ್ ಭಟ್ ಬರೆದಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಮೂಲಕ ಇದು ಖಂಡಿತ ಮರಣವಲ್ಲ ನೀನಿಂದು ಜನಿಸಿದೆ ಎಂದು ಯೋಗರಾಜಭಟ್ ಈ ಮೂಲಕ ಎಲ್ಲರ ಮನಸ್ಸಲ್ಲೂ ಶಾಶ್ವತವಾಗಿ ಅಪ್ಪು ನೆಲೆಸುತ್ತಾರೆ ಅನ್ನೋದನ್ನು ಸಾರಿ ಹೇಳಿದ್ದಾರೆ.

    English summary
    Director Yograj Bhat Tribute To Puneeth Rajkumar With A Song
    Saturday, October 30, 2021, 20:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X