ಕತ್ತಲು ಕಳೆವ ಬೆಳಕಿನ ಹಬ್ಬಕ್ಕೆ ಕಲರ್ಸ್ ಕನ್ನಡ ಕಲಾವಿದರಿಂದ ಭರ್ಜರಿ ಸ್ವಾಗತ, 'ದೀಪಾವಳಿ ಹಾಡು' ಬಿಡುಗಡೆ

ದೀಪಾವಳಿ ಕತ್ತಲು ಕಳೆದು ಬೆಳಕನ್ನು ತರುವ ಹಬ್ಬ. ಇದು ಮನದಲ್ಲಿನ ಕತ್ತಲನ್ನು ಹೊರಹಾಕಿ ಬೆಳಕನ್ನು ತುಂಬಿ ಪಾಸಿಟಿವಿಟಿಯಿಂದ ಬದುಕುವುದನ್ನು ಕಲಿಸುತ್ತದೆ. ಹಲವು ಪುರಾಣಗಳಲ್ಲಿ ದೀಪಾವಳಿಗೆ ವಿವಿಧ ಕಾರಣಗಳಿದ್ದರೂ ಇದನ್ನು ಬೆಳಕಿನ ಹಬ್ಬ ಎಂದೇ ಆಚರಿಸಲಾಗುತ್ತದೆ. ಈ ದಿನವನ್ನು ನೆನಪಿಸುವ ಹಾಡುಗಳಿಗೂ ಅದರದ್ದೇ ಆದ ವಿಶಿಷ್ಟ ಮಹತ್ವವಿದೆ.

ಕನ್ನಡದಲ್ಲಿ ಸಿನಿಮಾ, ಭಕ್ತಿಗೀತೆ, ಜನಪದ ಗೀತೆಗಳಲ್ಲಿ ದೀಪಾವಳಿಯ ಕುರಿತು ಹಾಡುಗಳಿವೆ. ಸಿನಿಮಾದಲ್ಲಿ ಕೆಲವು ಹಾಡುಗಳು ಇರಬಹುದು. ಆದರೆ ಪ್ರತಿ ಬಾರಿಯೂ 'ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ', 'ದೀಪ ದೀಪ ಕಣ್ತುಂಬ ದೀಪಾ' 'ದೀಪದಿಂದ ದೀಪವ ಹಚ್ಚಬೇಕು ಮಾನವ' ಸೇರಿ ಕೆಲವೇ ಹಾಡುಗಳನ್ನು ನೆನಪಿಸಿಕೊಳ್ಳುತ್ತೇವೆ. ಪದೇ ಪದೇ ಕೇಳಿದರೂ ಇವುಗಳು ಮಾಧುರ್ಯ ಮರೆಯಲಾಗದು.

Diwali 2023: Colors Kannada Serial cast Celebrate Ddeepavali, Release Special Song

ಈಗ ಈ ನಮ್ಮ ದೀಪಾವಳಿಯನ್ನು ಮತ್ತೊಂದು ಹಾಡಿನಿಂದ ಸಂಭ್ರಮಿಸಿ ಎಂದು ಕಲರ್ಸ್ ಕನ್ನಡ ವಾಹಿನಿ ಹೊಸತಾದ ಹಾಡನ್ನು ಬರೆಸಿ, ಸಂಯೋಜಿಸಿ ನಾಡಿನ ಜನರಿಗಾಗಿ ಬಿಡುಗಡೆ ಮಾಡಿದೆ. ಕಲರ್ಸ್ ಕನ್ನಡ ಪ್ರಪ್ರಥಮ ಬಾರಿಗೆ ಇಂತಹ ಸಾಹಸಕ್ಕೆ ಕೈ ಹಾಕಿದೆ. ಜನರ ನೆಚ್ಚಿನ ಕಿರುತೆರೆ ತಾರೆಯರೆಲ್ಲಾ ಹಾಡಿಗಾಗಿ ಒಂದಾಗಿರುವುದು ಇದರ ವಿಶೇಷ.

ದೀಪಾವಳಿ ಹಾಡಿಗಾಗಿ ಒಂದಾದ ಸೀರಿಯಲ್ ತಾರೆಯರು

ಕಲರ್ಸ್ ಕನ್ನಡದ ಮೆಗಾ ಸೀರಿಯಲ್‌ಗಳು ಜನರ ಮನ ಕದ್ದಿವೆ. ತಮ್ಮ ಮನೆಯ ಸದಸ್ಯರಂತೆಯೇ ಅವರನ್ನು ಸ್ವೀಕರಿಸಿದ್ದಾರೆ. ಹೀಗಿರುವಾಗ ಎಲ್ಲಾ ತಾರೆಯರು ಒಂದೆ ಕಡೆ ಕಾಣಿಸಿಕೊಂಡರೆ ಇಷ್ಟವಾಗದೇ ಇರುವುದೆ?. ಈ ದೀಪಾವಳಿ ಹಾಡಿನಲ್ಲಿ ಕಲರ್ಸ್ ಕನ್ನಡದ ಸೀರಿಯಲ್ ನಟ ನಟಿಯರು ಜಗಮಗಿಸುತ್ತಿದ್ದಾರೆ. ನೋಡಲೂ ಚೆನ್ನ ಹಾಡಲೂ ಚೆನ್ನ ಅನ್ನುವಂತಿರುವ ಈ ದೀಪಾವಳಿ ಹಾಡು ಕಲರ್ಸ್ ಕನ್ನಡದ ವಿನೂತನ ಪ್ರಯತ್ನ.

Diwali 2023: Colors Kannada Serial cast Celebrate Ddeepavali, Release Special Song

ಈ ದೀಪಾವಳಿ ಹಾಡು ಕಿವಿಗೂ, ಕಣ್ಣಿಗೂ ಹಬ್ಬ. ದೀಪಾವಳಿ ಮತ್ತು ಸೀರಿಯಲ್‌ ಎರಡನ್ನೂ ಇಷ್ಟಪಡುವವರಿಗೆ ಈ ಹಾಡು ಕೂಡ ಇಷ್ಟವಾಗಲಿದೆ. ಝಗಮಗಿಸುವ ಸೆಟ್ಟಿನಲ್ಲಿ, ಸಕತ್ ಆಗಿ ರೆಡಿಯಾಗಿ ಹಬ್ಬದ ಘಮಾ ಹಂಚಲು ಬಂದಿರುವ ಈ ತಾರೆಯರನ್ನು ಈಗಾಗಲೇ ವೀಕ್ಷಕರು ಮೆಚ್ಚಿದ್ದಾರೆ.

ಹಾಡಿಗೆ ಅನೇಕರು ಕಾಂಮೆಂಟ್ ಮಾಡಿದ್ದಾರೆ. ವಾವ್, ಸೂಪ್, ಎಲ್ಲರನ್ನು ಒಂದೇ ಫ್ರೇಮ್‌ನಲ್ಲಿ ನೋಡಲು ಖುಷಿಯಾಗುತ್ತಿದೆ ಎಂದಿದ್ದಾರೆ. ಮತ್ತೆ ಕೆಲವರು ಹಾಡಿನ ಸಂಗೀತ ಮತ್ತು ಸಾಹಿತ್ಯ ಎರಡೂ ಚೆನ್ನಾಗಿದೆ, ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.

More from Filmibeat

English summary
Colors Kannada release special deepavali song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X