ಬಳ್ಳಾರಿಯಲ್ಲಿ ದೊಡ್ಮನೆ ಹುಡುಗನ ದರ್ಬಾರ್ ಆರಂಭ!
ಬಳ್ಳಾರಿಯಲ್ಲಿನ ಭರ್ಜರಿ ಡಾನ್ಸ್‌ಗೆ ವೇದಿಕೆ ರೆಡಿಯಾಗಿದೆ. ಬುಧವಾರ ಇಡೀ ದಿನ 10 ಸಾವಿರ ಬಳ್ಳಾರಿಯ ಜನರೊಂದಿಗೆ ಪವರ್ ಸ್ಟಾರ್ ಹೆಜ್ಜೆ ಹಾಕುತ್ತಿದ್ದಾರೆ. ಸೂರಿ ನಿರ್ದೇಶನದ ದೊಡ್ಮನೆ ಹುಡುಗ ಸಿನಿಮಾ ರಾಜ್ಯದ ನಾಲ್ಕು ಕಡೆ ಅಭಿಮಾನಿಗಳಿಗೆ ಪವರ್ ಸ್ಟಾರ್ ಜೊತೆ ಡಾನ್ಸ್ ನಲ್ಲಿ ಕಾಣಿಸಿಕೊಳ್ಳುವ ಪ್ಲಾನ್ ಮಾಡಿದೆ.
ಯೋಗರಾಜ ಭಟ್ಟರು ಬರೆದಿರುವ ದೊಡ್ಮನೆ ಹುಡುಗ ಹಾಡಿಗೆ ವಿ ಹರಿಕೃಷ್ಣ ಸಂಗೀತವಿದೆ 'ಕನ್ನಡ ತಾಯಿಗೆ ನನ್ನ ನಿಯತ್ತು, ಅಭಿಮಾನಿಗಳೇ ನಮ್ಮ ಮನೆ ದೇವರು, ನಿಮ್ಮಿಂದಾನೇ ನಮ್ಮೆದೆ ಉಸಿರು ಎಂಬ ನಮ್ಮೆದೆ ಉಸಿರು' ಎನ್ನುವ ಕನ್ನಡ ಪ್ರೀತಿಯ ಹಾಡಿಗೆ ಪುನೀತ್ ರಾಜ್ ಕುಮಾರ್ ಜೊತೆ ರಾಜ್ಯಾದ್ಯಂತ ಕನ್ನಡಿಗರು ಹೆಜ್ಜೆ ಹಾಕುತ್ತಿದ್ದಾರೆ. [ಪುನೀತ್ ಜೊತೆ ಡ್ಯಾನ್ಸ್ ಮಾಡಲು ಅಭಿಮಾನಿಗಳಿಗೆ ಇಲ್ಲಿದೆ ಅವಕಾಶ]

ಬಳ್ಳಾರಿಯಿಂದ ಬುಧವಾರ ಶುರುವಾಗಿರೋ ಡಾನ್ಸ್ ಧಮಾಕಾ ಬೆಂಗಳೂರಿನ ಮಲ್ಲೇಶ್ವರಂ ಕ್ರೀಡಾಂಗಣದಲ್ಲಿ ಕೊನೆಯಾಗಲಿದೆ. ಇನ್ನು ಈ ಡಾನ್ಸ್‌ಗೆ ಬಳ್ಳಾರಿಯ 10 ಸಾವಿರ ಜನರ ಜೊತೆಗೆ ಚಿತ್ರತಂಡದ 200 ಡಾನ್ಸರ್ಸ್ ಪವರ್ ಸ್ಟಾರ್‌ಗೆ ಸಾಥ್ ಕೊಡಲಿದ್ದಾರೆ.
ಹರ್ಷ ಕೊರಿಯೋಗ್ರಫಿಯ ಹಾಡಿನ ಬಜೆಟ್ಟೇ 1.75 ಕೋಟಿ ಅಂದರೆ ಯೋಚಿಸಿ ಹೇಗಿರಬಹದು ಡಾನ್ಸ್‌ನ ಅದ್ಧೂರಿತನ. ಚಿತ್ರತಂಡದ 180 ತಂತ್ರಜ್ಞರು ಈ ಹಾಡಿಗಾಗಿ ಕೆಲಸ ಮಾಡುತ್ತಿದ್ದು, 500 ಪೊಲೀಸರು ಹಾಡಿನ ಶೂಟಿಂಗ್ಗೆ ರಕ್ಷಣೆ ಒದಗಿಸಿದ್ದಾರೆ. [ಕೋಟಿ ರೂಪಾಯಿ ವೆಚ್ಚದಲ್ಲಿ 'ದೊಡ್ಮನೆ ಹುಡುಗ' ಸಾಂಗ್ ಶೂಟ್]

ಹೊಸಪೇಟೆ, ಹುಬ್ಬಳ್ಳಿ, ಚಿತ್ರದುರ್ಗ, ಬೆಂಗಳೂರು ಈ ನಾಲ್ಕು ಜಿಲ್ಲೆಗಳಲ್ಲಿ ಜೂನ್ 22ರಿಂದ ಜೂನ್ 28ರವರೆಗೂ ಪುನೀತ್ ರಾಜ್ ಕುಮಾರ್ ಮತ್ತು ಟೀಂ ಪ್ರವಾಸ ಮಾಡಲಿದೆ.
ಪವರ್ ಸ್ಟಾರ್ ಜೊತೆ ಹೆಜ್ಜೆ ಹಾಕೋಕೆ ಅಭಿಮಾನಿಗಳೂ ಕೂಡ ಉತ್ಸುಕರಾಗಿದ್ದು, ಈಗ ಬಳ್ಳಾರಿ ದುರ್ಗಮ್ಮ ದೇವಿ ಮೈದಾನದಲ್ಲಿ ಹೆಚ್ಚುತ್ತಿರುವ ದೊಡ್ಮನೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. [ದೊಡ್ಮನೆ ಹುಡುಗ ಚಿತ್ರದಲ್ಲಿ ಸುಮಲತಾ-ಅಂಬಿ ಜೋಡಿ]



Click it and Unblock the Notifications











