ಆಪಲ್ ಐಫೋನ್ ಬಿಡುಗಡೆ ಸಂಭ್ರಮದಲ್ಲಿ ಹಿಂದಿ ಹಾಡು: ಥ್ರಿಲ್ ಆದ ಭಾರತೀಯರು

ಆಪನ್ ಐಫೋನ್‌ 13 ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಆನ್‌ಲೈನ್‌ನಲ್ಲಿ ನಡೆದ ಐಫೋನ್ 13 ಬಿಡುಗಡೆ ಕಾರ್ಯಕ್ರಮವನ್ನು ವಿಶ್ವದಾದ್ಯಂತ ಕೋಟ್ಯಂತರ ಮಂದಿ ನೋಡಿದರು.

ಆಪಲ್‌ನ ಲಾಂಚ್‌ ಇವೆಂಟ್‌ಗಳು ವಿಶ್ವದಲ್ಲಿಯೇ ಬಹುದೊಡ್ಡದಾಗಿ ಸದ್ದು ಮಾಡುತ್ತವೆ. ವಿಶ್ವದ ಜನಪ್ರಿಯ ಲಾಂಚ್ ಇವೆಂಟ್ ಎಂದು ಆಪಲ್‌ ಐಫೋನ್, ಐಪ್ಯಾಡ್ ಲಾಂಚ್‌ ಇವೆಂಟ್‌ಗಳು ಹೆಸರು ಪಡೆದುಕೊಂಡಿವೆ.

ನಿನ್ನೆ ನಡೆದ ವರ್ಚ್ಯುವಲ್ ಆಪಲ್‌ ಐಫೋನ್, ಐಪ್ಯಾಡ್ ಲಾಂಚ್‌ ಇವೆಂಟ್‌ನಲ್ಲಿ ಬಾಲಿವುಡ್ ಹಾಡೊಂದು ಸದ್ದು ಮಾಡಿದೆ. ಲಾಂಚ್‌ ಇವೆಂಟ್‌ನಲ್ಲಿ ಬಾಲಿವುಡ್‌ ಸಂಗೀತ ಕೇಳಿ ಭಾರತೀಯ ಸಿನಿಮಾ ಪ್ರೇಮಿಗಳು ಥ್ರಿಲ್ ಆಗಿದ್ದಾರೆ.

 Dum Maro Dum Song Used In Apple Iphone 13 launch Event

ಆಪಲ್‌ ಐಫೋನ್ 13 ಲಾಂಚ್ ವೇಳೆ ಐಫೋನ್ 13ನ ಜಾಹೀರಾತೊಂದನ್ನು ಆಪಲ್ ಬಿಡುಗಡೆ ಮಾಡಿದ್ದು, ಜಾಹೀರಾತಿನಲ್ಲಿ ಹಿನ್ನೆಲೆ ಸಂಗೀತವಾಗಿ ಹಳೆಯ ಬಾಲಿವುಡ್ ಹಾಡನ್ನು ಬಳಸಲಾಗಿದೆ. 1971 ರಲ್ಲಿ ಬಿಡುಗಡೆ ಆದ 'ಹರೇ ರಾಮ ಹರೇ ಕೃಷ್ಣ' ಸಿನಿಮಾದ 'ಧಮ್ ಮಾರೊ ಧಮ್' ಹಾಡಿನ ಸಂಗೀತವನ್ನು ಆಪಲ್‌ ತಮ್ಮ ಐಫೋನ್‌ನ ಜಾಹೀರಾತಿಗಾಗಿ ಬಳಸಿದೆ.

'ಧಮ್ ಮಾರೊ ಧಮ್' ಹಾಡು ಬಹಳ ಜನಪ್ರಿಯವಾಗಿತ್ತು, ಕೆಲವು ಬಾಲಿವುಡ್‌ ಸಿನಿಮಾಗಳಲ್ಲಿಯೂ ಈ ಹಾಡಿನ ರೀಮಿಕ್ಸ್ ಅನ್ನು ಬಳಸಲಾಗಿದೆ. ಹಾಡು ಬಿಡುಗಡೆ 40 ವರ್ಷವಾದರೂ ಹಾಡು ಇನ್ನೂ ಸಂಗೀತ ಪ್ರಿಯರನ್ನು ಸೆಳೆಯುತ್ತಿದೆ ಎಂಬುದಕ್ಕೆ ಆಪಲ್ ಸಂಸ್ಥೆಯು ಹಾಡಿನ ಸಂಗೀತವನ್ನು ಬಳಸಿಕೊಂಡಿರುವುದು ಸಾಕ್ಷಿ.

ಹಾಲಿವುಡ್‌ನವರು ಧಮ್ ಮಾರೊ ಧಮ್ ಹಾಡು ಬಳಸಿರುವುದು ಇದು ಮೊದಲೇನಲ್ಲ. ಈ ಮುಂಚೆ 'ವರ್ಕ್ ಆಲ್‌ ಡೇ' ಹೆಸರಿನ ಇಂಗ್ಲೀಷ್‌ ಹಾಡಿನಲ್ಲಿಯೂ 'ಧಮ್ ಮಾರೊ ಧಮ್‌' ಸಂಗೀತ ಮತ್ತು ಸಾಲುಗಳನ್ನು ಬಳಸಿಕೊಳ್ಳಲಾಗಿದೆ.

 Dum Maro Dum Song Used In Apple Iphone 13 launch Event

'ಧಮ್ ಮಾರೊ ಧಮ್' ಹಾಡಿನಲ್ಲಿ ನಟಿ ಜೀನತ್ ಅಮಾನ್ ಚಿಲ್ಲಮ್ ಎಳೆಯುತ್ತಾ, ತೂಗಾಡುತ್ತಾ ನಟಿಸಿದ್ದರು. ಇದೀಗ ತಾವು ನಟಿಸಿದ್ದ ಹಾಡನ್ನು ಆಪಲ್‌ ತನ್ನ ಜಾಹೀರಾತಿನಲ್ಲಿ ಬಳಸಿಕೊಂಡಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಈ ಹಿರಿಯ ನಟಿ, ''ಆ ಹಾಡಿಗೆ ಕಾಲವಿಲ್ಲ. ನಲವತ್ತು ವರ್ಷವಾದರೂ ಆ ಹಾಡು ಈಗಲೂ ಪ್ರತಿಧ್ವನಿಸುತ್ತಲೇ ಇದೆ'' ಎಂದಿದ್ದಾರೆ.

'ಧಮ್ ಮಾರೊ ಧಮ್' ಹಾಡು 'ಹರೇ ರಾಮ ಹರೇ ಕೃಷ್ಣ' ಸಿನಿಮಾದ್ದಾಗಿದೆ. ಸಿನಿಮಾದಲ್ಲಿ ದೇವ್ ಆನಂದ್, ಜೀನತ್ ಅಮಾನ್, ಮುಮ್ತಾಜ್ ನಟಿಸಿದ್ದರು. ಸಿನಿಮಾ ದೊಟ್ಟ ಹಿಟ್ ಆಗಿತ್ತು. ಸಿನಿಮಾಕ್ಕೆ ಸಂಗೀತ ನೀಡಿದ್ದಿದ್ದು ಆರ್.ಡಿ.ಬರ್ಮನ್. 'ಧಮ್ ಮಾರೊ ಧಮ್' ಹಾಡಿಗೆ ಸಾಹಿತ್ಯ ಬರೆದಿದ್ದು ಆನಂದ್ ಬಕ್ಷಿ.

More from Filmibeat

English summary
1971 Bollywood movie song Dum Maro Dum used in Apple Iphone 13 launch event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X