Bad Manners: "ನೌಟಂಕಿ ಬೇಡ.. ಹುಚ್ಚೆದ್ದ ಗೋಡ": ಸೂರಿ-ಅಭಿ 'ರುದ್ರಾಭಿಷೇಕ'ಕ್ಕೆ ಮುಹೂರ್ತ ಫಿಕ್ಸ್

ದುನಿಯಾ ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಗಾನಬಜಾನಾ ಶುರುವಾಗುತ್ತಿದೆ. ಚಿತ್ರದ ಫಸ್ಟ್ ಸಾಂಗ್ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಸಾಂಗ್ ಶೂಟಿಂಗ್ ಹಂತದಲ್ಲೇ ಭಾರೀ ಸದ್ದು ಮಾಡಿತ್ತು. ಇದೀಗ ಸಾಂಗ್ ರಿಲೀಸ್ ಡಿಟೈಲ್ಸ್ ಸಿಕ್ಕಿದೆ. ಶೀಘ್ರದಲ್ಲೇ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಸಾಂಗ್ ರಿಲೀಸ್ ಮಾಡಿ ಪ್ರಮೋಷನ್ ಶುರು ಮಾಡ್ತಿದ್ದಾರೆ.

'ಪಾಪ್‌ಕಾರ್ನ್ ಮಂಕಿ ಟೈಗರ್' ನಂತರ ಸೂರಿ ನಿರ್ದೇಶನದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹಾಗಾಗಿ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಈ ಚಿತ್ರಕ್ಕೂ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ಇದು ಪಕ್ಕಾ ಸೂರಿ ಸ್ಟೈಲ್ ರಾ ರಗಡ್ ಸಿನಿಮಾ ಅನ್ನೋದು ಗೊತ್ತಾಗುತ್ತಿದೆ. ಅದಕ್ಕೆ ತಕ್ಕಂತೆ ಸಾಂಗ್ಸ್ ಡಿಸೈನ್ ಮಾಡಲಾಗಿದೆ. ಹೀರೊ ಇಂಟ್ರೊಡಕ್ಷನ್ ಸಾಂಗ್‌ ಮುಂದಿನ ವಾರ ರಿಲೀಸ್ ಆಗುತ್ತಿದೆ.

Duniya Suri and Abishek Ambareeshs Bad Manners first single release date out

"ನೌಟಂಕಿ ಬೇಡ.. ಹುಚ್ಚೆದ್ದ ಗೋಡ" ಎಂದು ಶುರುವಾಗುವ ಈ ಸಾಂಗ್‌ ಅನ್ನು ಕ್ಲಾಸ್ ಹಾಗೂ ಮಾಸ್ ಅಂಶಗಳನ್ನು ಮಿಕ್ಸ್ ಮಾಡಿ ಕಟ್ಟಿಕೊಡಲಾಗಿದೆ. ಅಭಿಷೇಕ್ ಅಂಬರೀಶ್‌ಗೆ ಅಷ್ಟಾಗಿ ಡ್ಯಾನ್ಸ್ ಬರೋಲ್ಲ. ಆದರೆ ಈ ಚಿತ್ರಕ್ಕಾಗಿ ಭರ್ಜರಿ ಸ್ಪೆಪ್ಸ್ ಹಾಕಿದ್ದಾರೆ. ರೆಡ್‌ ಥೀಮ್‌ನಲ್ಲಿ ಸ್ಮೋಕಿ ಎಫೆಕ್ಟ್‌ನಲ್ಲಿ ಕಲರ್‌ಫುಲ್ ಸೆಟ್‌ನಲ್ಲಿ ಸಾಂಗ್ ಸೆರೆಹಿಡಿಯಲಾಗಿದೆ. ರೆಡ್ ಕಲರ್ ಸೂಟ್ ಧರಿಸಿ ಕೈಯಲ್ಲಿ ಸಿಗಾರ್, ಗನ್ ಹಿಡಿದು ಅಭಿ ದರ್ಶನ ಕೊಟ್ಟಿದ್ದಾರೆ. ನಾಲ್ಕು ಸೆಟ್‌ಗಳನ್ನು ಹಾಡಿ ಈ ಸಾಂಗ್ ಶೂಟ್ ಮಾಡಿದ್ದಾರೆ. ಮಾ. 22ರಂದು ಬೆಳಗ್ಗೆ 11. 04ಕ್ಕೆ ಆನಂದ್ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಸಾಂಗ್ ರಿಲೀಸ್ ಆಗಲಿದೆ.

ಒಂದು ಕೋಟಿ ಖರ್ಚು ಮಾಡಿ 6 ದಿನಗಳ ಕಾಲ ಈ ಸಾಂಗ್ ಶೂಟಿಂಗ್ ಮಾಡಲಾಗಿದೆ. ಒಂದು ತಿಂಗಳ ಕಾಲ ಅಭಿಷೇಕ್ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ ಚಿತ್ರೀಕರಣದಲ್ಲಿ ಹೆಜ್ಜೆ ಹಾಕಿದ್ದಾರೆ. ಧನಂಜಯ್ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ರುದ್ರ ಎನ್ನುವ ರಗಡ್ ಪೊಲೀಸ್ ಆಫೀಸರ್ ರೋಲ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಅದಕ್ಕೆ ತಕ್ಕಂತೆ "ಟೋಟಲ್ ಧಮಾಕ ರುದ್ರಾಭಿಷೇಕ" ಎನ್ನುವ ಸಾಲುಗಳು ಹಾಡಿನಲ್ಲಿದೆ. ಈಗಾಗಲೇ ಚಿತ್ರದ ಸಣ್ಣ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಸಾಂಗ್ ಮೂಲಕ ಮತ್ತೆ ಸದ್ದು ಮಾಡೋಕೆ ಚಿತ್ರತಂಡ ಬರ್ತಿದೆ.

Duniya Suri and Abishek Ambareeshs Bad Manners first single release date out

ಸೂರಿ ನಿರ್ದೇಶನದ 'ಟಗರು', 'ಪಾಪ್‌ಕಾರ್ನ್‌ ಮಂಕಿ ಟೈಗರ್' ಸಿನಿಮಾಗಳಿಗೆ ಚರಣ್ ರಾಜ್ ಮ್ಯೂಸಿಕ್ ಮಾಡಿ ಗೆದ್ದಿದ್ದರು. ಇವರಿಬ್ಬರ ಹ್ಯಾಟ್ರಿಕ್ ಆಲ್ಬಮ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 160 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಏಪ್ರಿಲ್ 29ರಂದು ಅಭಿಷೇರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ನಡೀತಿದೆ. ಸುಧೀರ್ ಕೆ. ಎಂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

More from Filmibeat

English summary
Duniya Suri and Abishek Ambareesh's Bad Manners first single release date out. The songs of Bad Manners are composed by Charan Raj. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X