Bad Manners Title Song: ಚರಣ್ ರ್ಯಾಪ್ ಝಲಕ್ಕು, ಉಷಾ ಉತ್ತುಪ್ ವಾಯ್ಸ್‌ ಕಿಕ್ಕು, ಚಿಂದಿ 'ರುದ್ರಾಭಿಷೇಕ'

ದುನಿಯಾ ಸೂರಿ- ಅಭಿಷೇಕ್ ಅಂಬರೀಶ್ ಕ್ರೇಜಿ ಕಾಂಬಿನೇಷನ್ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ರಿಲೀಸ್‌ಗೆ ರೆಡಿಯಾಗ್ತಿದೆ. ಸದ್ಯ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಮಾಡಿ ಸಿನಿಮಾ ಪ್ರಮೋಷನ್ ಸ್ಟಾರ್ಟ್ ಮಾಡಿದೆ ಚಿತ್ರತಂಡ. 'ನೌಟಂಕಿ ಬೇಡ ಹುಚ್ಚೆದ್ದ ಗೋಡ' ಅಂತ ಶುರುವಾಗುವ ಟೈಟಲ್ ಸಾಂಗ್ ಸಿಪ್ ಬೈ ಸಿಪ್ ಕಿಕ್‌ ಕೊಡುತ್ತಾ ಸಾಗುತ್ತದೆ.

ಚರಣ್ ರಾಜ್ ಟ್ಯೂನ್ ಹಾಕಿರೋ ಪೆಪ್ಪಿ ಸಾಂಗ್‌ಗೆ ರ್ಯಾಪ್ ಟಚ್ ಇದ್ದು ಧನಂಜಯ್ ರಾಜನ್ ಬೊಂಬಾಟ್ ಲಿರಿಕ್ಸ್ ಗೀಚಿದ್ದಾರೆ. ಬಾಲಿವುಡ್ ಖ್ಯಾತ ಗಾಯಕಿ ಉಷಾ ಉತ್ತುಪ್ ಹಾಗೂ ಆಕಾಶ್ ಜಾಕೋಬ್ ವಾಯ್ಸ್‌ನಲ್ಲಿ ಸಾಂಗ್ ಸಖತ್ ಮಜವಾಗಿದೆ. ಅದನ್ನು ಅಷ್ಟೇ ಸೊಗಸಾಗಿ ಸೂರಿ ಅಂಡ್ ಟೀಮ್ ಸೆರೆ ಹಿಡಿದಿರೋದು ಗೊತ್ತಾಗುತ್ತಿದೆ. ಚಿತ್ರದಲ್ಲಿ ಅಭಿ ರಗಡ್ ಪೊಲೀಸ್ ಆಫೀಸರ್ ರುದ್ರ ಆಗಿ ಕಾಣಿಸಿಕೊಂಡಿದ್ದಾರೆ. ರುದ್ರನ ಪಾತ್ರ ಪರಿಚಯಿಸುವ ಸಾಂಗ್ ಇದು.

Duniya Suri and Abishek Ambareeshs Bad Manners Title Song Lyrical Video Released

ಅಭಿಷೇಕ್- ರುದ್ರ ಎರಡನ್ನು ಸೇರಿಸಿ ಹಾಡಿನಲ್ಲಿ ರುದ್ರಾಭಿಷೇಕ ನಡೆಸಲಾಗಿದೆ. ಕೊಂಚ ಹಿಂದಿ, ಇಂಗ್ಲೀಷ್ ಪದಗಳನ್ನು ಹೆಚ್ಚೇ ಸೇರಿಸಿ ಸಾಲುಗಳನ್ನು ಪೋಣಿಸಲಾಗಿದೆ. ಉಷಾ ಉತ್ತುಪ್ ಹಸ್ಕಿ ವಾಯ್ಸ್‌ಗೆ ಹೇಳಿ ಮಾಡಿಸಿದಂತಿದೆ 'ಬ್ಯಾಡ್ ಮ್ಯಾನರ್ಸ್' ಟೈಟಲ್ ಸಾಂಗ್. ಬಿ. ಧನಂಜಯ್ ಮಾಸ್ಟರ್ ಸಾಂಗ್‌ಗೆ ಕೊರಿಯೋಗ್ರಫಿ ಮಾಡಿದ್ದಾರೆ. ಅಭಿಷೇಕ್ ಸಿಕ್ಕಾಪಟ್ಟೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಿದ್ದಾರೆ.

ಚರಣ್ ರಾಜ್ ಒಂದಕ್ಕಿಂತ ಒಂದು ವಿಭಿನ್ನ ಟ್ಯೂನ್‌ಗಳಿಂದ ಪದೇ ಪದೇ ಸದ್ದು ಮಾಡ್ತಿರ್ತಾರೆ. ಇಲ್ಲೂ ಅಂಥದ್ದೇ ಪ್ರಯತ್ನ ಮಾಡಿದ್ದಾರೆ. ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಂಪೋಸ್ ಮಾಡಿರೋ ಸಾಂಗ್‌ಗೆ ರ್ಯಾಪ್ ಟಚ್ ಕೊಟ್ಟು ಕಿಕ್ ಏರಿಸಿದ್ದಾರೆ. ಸಾಂಗ್ ಕೇಳಿದವರೆಲ್ಲಾ ರಿಪೀಟ್ ಮೋಡ್‌ನಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಮೂರ್ನಾಲ್ಕು ಸೆಟ್‌ಗಳನ್ನು ಹಾಕಿ ಸಿಕ್ಕಾಪಟ್ಟೆ ಸ್ಪೆಷಲ್ ಆಗಿ ಸಾಂಗ್ ಶೂಟ್ ಮಾಡಲಾಗಿದೆ. ರೆಡ್‌ ಥೀಮ್‌ನಲ್ಲಿ ಬ್ಯಾಕ್‌ಗ್ರೌಂಡ್ ಆಗಿ ಅಭಿ ಕಾಸ್ಟ್ಯೂಮ್ ಡಿಸೈನ್ ಮಾಡಲಾಗಿದೆ.

Duniya Suri and Abishek Ambareeshs Bad Manners Title Song Lyrical Video Released

ಅಂದಾಜು ಒಂದು ಕೋಟಿ ವೆಚ್ಚದಲ್ಲಿ ಒಂದು ವಾರ ಸಾಂಗ್ ಶೂಟ್ ಮಾಡಲಾಗಿದೆ. 'ಏಕ್ ದೋ ತೀನ್ ಚಾರ್ ಹೀ ಈಸ್ ದಿ ನ್ಯೂ ರೆಬಲ್ ಸ್ಟಾರ್', 'ಚೂರು ಬ್ಯಾಡ್ ಚೂರು ಮ್ಯಾಡ್' ಅನ್ನುವ ಸಾಲುಗಳು ಇಂಟ್ರೆಸ್ಟಿಂಗ್ ಆಗಿದೆ. ಪಬ್ ಸೆಟಪ್ ರೀತಿಯಲ್ಲಿ ಸೆಟ್ ಹಾಕಿ ಸಾಂಗ್ ಸೆರೆ ಹಿಡಿದಿದ್ದಾರೆ. ಒಂದಷ್ಟು ಡ್ಯಾನ್ಸರ್ಸ್ ಅಭಿ ಡ್ಯಾನ್ಸ್‌ಗೆ ಸಾಥ್ ಕೊಟ್ಟಿದ್ದಾರೆ. ಮೇಕಿಂಗ್ ಝಲಕ್ ಮಿಕ್ಸ್ ಮಾಡಿ 'ಬ್ಯಾಡ್ ಮ್ಯಾನರ್ಸ್' ಟೈಟಲ್ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಮಾಡಿದ್ದಾರೆ.

ಅಭಿಷೇಕ್ ನಟಿಸಿದ ಮೊದಲ ಸಿನಿಮಾ 'ಅಮರ್' ಅಷ್ಟಾಗಿ ಸದ್ದು ಮಾಡಲಿಲ್ಲ. ಬಹಳ ಗ್ಯಾಪ್‌ ತಗೊಂಡು 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮೂಲಕ ಅಭಿ ವಾಪಸ್ ಬರ್ತಿದ್ದಾರೆ. ಸೂರಿ ಆಕ್ಷನ್ ಕಟ್ ಹೇಳಿರುವುದರಿಂದ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಇನ್ನು ಅಮರ್ ಚಿತ್ರದಲ್ಲಿ ಅಭಿಗೆ ಹೀರೊ ಇಂಟ್ರೊಡಕ್ಷನ್ ಸಾಂಗ್ ಸಿಗಲಿಲ್ಲ. ಆದರೆ 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ಆ ಕೊರತೆ ನೀಗಿದಂತೆ ಆಗಿದೆ.

Duniya Suri and Abishek Ambareeshs Bad Manners Title Song Lyrical Video Released

ಯಂಗ್ ರೆಬಲ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಏಪ್ರಿಲ್ 29ರಂದು 'ಬ್ಯಾಡ್ ಮ್ಯಾನರ್ಸ್' ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದಾರೆ. ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್, ಮಿತ್ರಾ, ಮೋಹನ್ ಜುನೇಜಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸೂರಿ ಸ್ಟೈಲ್ ರಾಮ್ ಮೇಕಿಂಗ್, ಅಭಿ ರೆಬಲ್ ಖದರ್ ಚಿತ್ರದಲ್ಲಿ ಹೈಲೆಟ್ ಆಗಿ ಇರಲಿದೆ. ಮಾಸ್ತಿ ಹಾಗೂ ಅಮ್ರಿ ಡೈಲಾಗ್ಸ್ ಈ ಕಾಪ್ ಡ್ರಾಮಾಗೆ ಮತ್ತಷ್ಟು ಖದರ್ ತಂದು ಕೊಡಲಿದೆ.

More from Filmibeat

English summary
Duniya Suri and Abishek Ambareesh's Bad Manners Title Song Lyrical Video Released. the peppy song composed by Charan Raj and sung by Usha Uthup and Akash Jacob. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X