ಜನವರಿ ಮೊದಲ ವಾರದಲ್ಲಿ ಸಲಗ ಚಿತ್ರದ ಟೈಟಲ್ ಹಾಡು ಬಿಡುಗಡೆ!

ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಸಲಗ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ. ಸದ್ಯ ಮೇಕಿಂಗ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡ್ತಿರುವ ಸಲಗ ಈಗ ಚಿತ್ರದ ಟೈಟಲ್ ಹಾಡು ರಿಲೀಸ್ ಮಾಡಲು ಮುಂದಾಗಿದೆ.

ಸೂರಿ ಅಣ್ಣಾ, ಮಳೆಯೆ ಮಳೆಯೇ ಹಾಗೂ ಸಂಜನಾ ಐ ಲವ್ ಯೂ ಹಾಡಿನ ಮೂಲಕ ಗಮನ ಸೆಳೆದಿರುವ ಸಲಗ ಈಗ ಶೀರ್ಷಿಕೆ ಗೀತೆ ಬಿಡುಗಡೆ ಮಾಡಲಿದೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಜನವರಿ ಮೊದಲ ವಾರದಲ್ಲಿ ಸಲಗ ಚಿತ್ರದ ಟೈಟಲ್ ಹಾಡು ಪ್ರೇಕ್ಷಕರ ಮುಂದೆ ಬರಲಿದೆ. ಚರಣ್ ರಾಜ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಸಂಚಿತ್ ಹೆಗ್ಡೆ ಹಾಗು Rap ಗಾಯಕ ಯೋಗಿ ಬಿ ದನಿಯಾಗಿದ್ದಾರೆ.

Duniya Vijays Salaga title track to be released in first week of January 2021

ದುನಿಯಾ ವಿಜಯ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ಸ್ವತಃ ವಿಜಿ ಅವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. ವಿಜಯ್ ಜೊತೆ ಡಾಲಿ ಖ್ಯಾತಿಯ ಧನಂಜಯ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಬಹಳ ದಿನಗಳಿಂದ ಕಾಯುತ್ತಿರುವ ಸಲಗ ಸಿನಿಮಾ ಫೆಬ್ರವರಿ ಮೂರನೇ ವಾರದಲ್ಲಿ ತೆರೆಗೆ ಬರಲು ಯೋಜಿಸಿದೆ ಎಂಬ ಮಾಹಿತಿ ಇದೆ. ಇನ್ನು ವಿಜಯ್‌ಗೆ ಜೋಡಿಯಾಗಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್, ತ್ರಿವೇಣಿ ರಾವ್ ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
Kannada actor Duniya Vijay's Salaga title track to be released in first week of January 2021.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X