For Quick Alerts
  ALLOW NOTIFICATIONS  
  For Daily Alerts

  ಜನವರಿ ಮೊದಲ ವಾರದಲ್ಲಿ ಸಲಗ ಚಿತ್ರದ ಟೈಟಲ್ ಹಾಡು ಬಿಡುಗಡೆ!

  |

  ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಸಲಗ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ. ಸದ್ಯ ಮೇಕಿಂಗ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡ್ತಿರುವ ಸಲಗ ಈಗ ಚಿತ್ರದ ಟೈಟಲ್ ಹಾಡು ರಿಲೀಸ್ ಮಾಡಲು ಮುಂದಾಗಿದೆ.

  ಸೂರಿ ಅಣ್ಣಾ, ಮಳೆಯೆ ಮಳೆಯೇ ಹಾಗೂ ಸಂಜನಾ ಐ ಲವ್ ಯೂ ಹಾಡಿನ ಮೂಲಕ ಗಮನ ಸೆಳೆದಿರುವ ಸಲಗ ಈಗ ಶೀರ್ಷಿಕೆ ಗೀತೆ ಬಿಡುಗಡೆ ಮಾಡಲಿದೆ.

  'ಸಲಗ' ಬಳಿಕ ಮತ್ತೊಂದು ಸಿನಿಮಾಗೆ ವಿಜಯ್ ನಿರ್ದೇಶನ: ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ ವಿಜಿ'ಸಲಗ' ಬಳಿಕ ಮತ್ತೊಂದು ಸಿನಿಮಾಗೆ ವಿಜಯ್ ನಿರ್ದೇಶನ: ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ ವಿಜಿ

  ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಜನವರಿ ಮೊದಲ ವಾರದಲ್ಲಿ ಸಲಗ ಚಿತ್ರದ ಟೈಟಲ್ ಹಾಡು ಪ್ರೇಕ್ಷಕರ ಮುಂದೆ ಬರಲಿದೆ. ಚರಣ್ ರಾಜ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಸಂಚಿತ್ ಹೆಗ್ಡೆ ಹಾಗು Rap ಗಾಯಕ ಯೋಗಿ ಬಿ ದನಿಯಾಗಿದ್ದಾರೆ.

  ದುನಿಯಾ ವಿಜಯ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ಸ್ವತಃ ವಿಜಿ ಅವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. ವಿಜಯ್ ಜೊತೆ ಡಾಲಿ ಖ್ಯಾತಿಯ ಧನಂಜಯ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

  ಚಿತ್ರಮಂದಿರ ತೆರೆದರೂ ದೊಡ್ಡ ಬಜೆಟ್ ಚಿತ್ರಗಳು ಬಿಡುಗಡೆ ಆಗಲ್ಲ, ಕಾರಣ ಇಲ್ಲಿದೆ!ಚಿತ್ರಮಂದಿರ ತೆರೆದರೂ ದೊಡ್ಡ ಬಜೆಟ್ ಚಿತ್ರಗಳು ಬಿಡುಗಡೆ ಆಗಲ್ಲ, ಕಾರಣ ಇಲ್ಲಿದೆ!

  ಬಹಳ ದಿನಗಳಿಂದ ಕಾಯುತ್ತಿರುವ ಸಲಗ ಸಿನಿಮಾ ಫೆಬ್ರವರಿ ಮೂರನೇ ವಾರದಲ್ಲಿ ತೆರೆಗೆ ಬರಲು ಯೋಜಿಸಿದೆ ಎಂಬ ಮಾಹಿತಿ ಇದೆ. ಇನ್ನು ವಿಜಯ್‌ಗೆ ಜೋಡಿಯಾಗಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದು, ಅಚ್ಯುತ್ ಕುಮಾರ್, ತ್ರಿವೇಣಿ ರಾವ್ ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

  English summary
  Kannada actor Duniya Vijay's Salaga title track to be released in first week of January 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X