»   » ಕನಕ ಚಿತ್ರದ ಎಣ್ಣೆ ಹಾಡಿಗೆ ಫಿದಾ ಆದ ಕನ್ನಡ ಪ್ರೇಕ್ಷಕರು

ಕನಕ ಚಿತ್ರದ ಎಣ್ಣೆ ಹಾಡಿಗೆ ಫಿದಾ ಆದ ಕನ್ನಡ ಪ್ರೇಕ್ಷಕರು

Posted By:
Subscribe to Filmibeat Kannada

ದುನಿಯಾ ವಿಜಯ್ ಅಭಿನಯದ ಕನಕ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರುವುದಕ್ಕೆ ಸಿದ್ದವಾಗಿದೆ. ಸಿನಿಮಾ ಪ್ರಚಾರ ಕೆಲಸವನ್ನ ಶುರು ಮಾಡಿರುವ ನಿರ್ದೇಶಕ ಆರ್ ಚಂದ್ರು ಕನಕ ಚಿತ್ರದ ಪ್ರಮೋಷನ್ ಸಾಂಗ್ ಒಂದನ್ನ ಇತ್ತೀಚಿಗಷ್ಟೇ ಬಿಡುಗಡೆ ಮಾಡಿದ್ದರು.

ಸಂಗೀತ ನಿರ್ದೇಶಕ ನವೀನ್ ಸಜ್ಜು ಟ್ಯೂನ್ ಹಾಕಿ ಡ್ಯಾನ್ಸ್ ಮಾಡಿರುವ 'ಎಣ್ಣೆ ನಮ್ದು ಊಟ ನಿಮ್ದು' ಅನ್ನೋ ಹಾಡು ಈಗ ಎಲ್ಲೆಡೆ ವೈರಲ್ ಆಗಿದೆ. ಹೊಸ ವರ್ಷದ ಹಿನ್ನಲೆಯಲ್ಲಿ ಬಿಡುಗಡೆ ಆಗಿದ್ದ ಈ ಸಾಂಗ್ ಪಾರ್ಟಿಗಳಲ್ಲಿ ಕೇಳಿ ಬರುತ್ತಿದೆ. ಕಲರ್ ಫುಲ್ ಸೆಟ್ ನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದ್ದು ಮಕ್ಕಳನ್ನ ಹೆಚ್ಚಾಗಿ ಇಂಪ್ರೆಸ್ ಮಾಡುತ್ತಿದೆ ಪಾರ್ಟಿ ಸಾಂಗ್.

Duniya Vijay starrer 'Kanaka' movie party song goes viral

ವರ್ಷದ ಆರಂಭದಲ್ಲೇ ಸ್ಟಾರ್ ಚಿತ್ರಗಳ ಸಂಭ್ರಮ

ಎಣ್ಣೆ ಹಾಡಿಗೆ ಮಕ್ಕಳು ಹೆಜ್ಜೆ ಹಾಕಿರುವ ವಿಡಿಯೋಗಳು ಫೇಸ್ ಬುಕ್ ನಲ್ಲಿ ವೈರಲ್ ಆಗುತ್ತಿದೆ. (ಜನವರಿ 26) ಗಣರಾಜ್ಯೋತ್ಸವಕ್ಕೆ ಕನಕ ಸಿನಿಮಾವನ್ನ ರಿಲೀಸ್ ಮಾಡಲು ನಿರ್ದೇಶಕ, ನಿರ್ಮಾಪಕ ಆರ್ ಚಂದ್ರ ತಯಾರಿ ನಡೆಸಿದ್ದಾರೆ. ದುನಿಯಾ ವಿಜಯ್ ಜೊತೆಯಲ್ಲಿ ಇದೇ ಮೊದಲ ಬಾರಿಗೆ ಹರಿಪ್ರಿಯಾ ಹಾಗೂ ಮಾನ್ವಿತಾ ಹರೀಶ್ ನಾಯಕಿಯರಾಗಿ ಅಭಿನಯಿಸಿದ್ದಾರೆ.

ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ 'ಕನಕ'ನ ಎಣ್ಣೆ ಹಾಡು

Duniya Vijay starrer 'Kanaka' movie party song goes viral

ಆರ್ ಚಂದ್ರು ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದ್ದು ಕನಕ ಅಣ್ಣಾವ್ರ ಅಭಿಮಾನಿ ಅನ್ನೋ ಟ್ಯಾಗ್ ಲೈನ್ ಅನ್ನು ಸಿನಿಮಾಗೆ ಇಡಲಾಗಿದೆ. ಚಿತ್ರೀಕರಣದ ಹಂತದಲ್ಲೇ ಕುತೂಹಲ ಮೂಡಿಸಿದ್ದ ಕನಕ ಚಿತ್ರ ಇದೇ ತಿಂಗಳು ಬಿಡುಗಡೆ ಆಗುತ್ತಿದ್ದು ಕನಕ ದುನಿಯಾ ವಿಜಿ ಅವರ ಸಿನಿಮಾ ಜರ್ನಿಯಲ್ಲಿ ವಿಶೇಷ ಚಿತ್ರವಾಗಲಿದ್ಯಂತೆ.

English summary
Duniya Vijay starrer 'Kanaka' movie song goes viral. Promotion Song 'Enne namdu uata nimdu' is a favorite of audiences, music director Naveen Sajju sings the song. R Chandru directed the Kanaka movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X