ಸಖತ್ ಸೌಂಡ್ ಮಾಡ್ತಿದೆ 'ಸಲಗ' ಪ್ರಮೋಷನಲ್ ಹಾಡು

ಟೈಟಲ್ ಸಾಂಗ್ ಹಾಗೂ ಸೂರಿ ಅಣ್ಣಾ.....ಹಾಡುಗಳಿಂದಲೇ ಸಲಗ ನಿರೀಕ್ಷೆಗೂ ಮೀರಿದ ಸಕ್ಸಸ್ ಕಂಡಿದೆ. ಈಗ ಪ್ರಮೋಷನಲ್ ಸಾಂಗ್ ರಿಲೀಸ್ ಮಾಡಿ ಪ್ರೇಕ್ಷಕರ ಥ್ರಿಲ್ ಹೆಚ್ಚಿಸಿದ್ದಾರೆ ದುನಿಯಾ ವಿಜಯ್.

ಚೊಚ್ಚಲ ಬಾರಿಗೆ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಿನಿಮಾ ಸಲಗ. ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿರುವ ಈ ಚಿತ್ರಕ್ಕೆ ಕೊರೊನಾ ವೈರಸ್ ಅಡ್ಡಿಯಾಗಿತ್ತು. ಈಗ ಕೋವಿಡ್ ಸೋಂಕಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಥಿಯೇಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ, ಸಲಗ ಚಿತ್ರವೂ ರಿಲೀಸ್ ದಿನಾಂಕ ಘೋಷಣೆ ಮಾಡಿ ಚಿತ್ರಮಂದಿರ ಬರುವ ಹಾದಿಯಲ್ಲಿದೆ.

ಈ ನಡುವೆ ಸಲಗ ಪ್ರಮೋಷನಲ್ ಹಾಡು ಬಿಡುಗಡೆಯಾಗಿದ್ದು, ಟಿಣಿಂಗ ಮಿಣಿಂಗ ಟಿಶ್ಯ್ಯ ಹಾಡು ಸಖತ್ ಸದ್ದು ಮಾಡ್ತಿದೆ. ಪಕ್ಕಾ ಲೋಕಲ್ ಸಾಹಿತ್ಯ ಹೊಂದಿರುವ ಈ ಹಾಡು ಮಾಸ್ ಪ್ರೇಕ್ಷಕರ ಹಾಟ್ ಫೆವರೀಟ್ ಎನಿಸಿಕೊಳ್ಳುತ್ತಿದೆ.

Duniya Vijay Starrer Salaga Movie Promotional Song Released

ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡನ್ನು ಗಿರಿಜಾ ಸಿದ್ಧಿ, ಗೀತಾ ಸಿದ್ಧಿ ಹಾಗೂ ಚೆನ್ನಕೇಶವ ಹಾಡಿದ್ದಾರೆ. ಇನ್ನು ಹಾಡಿನಲ್ಲಿ ದುನಿಯಾ ವಿಜಯ್ ಸಹ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ವಿಜಯ್ ವೃತ್ತಿ ಜೀವನದಲ್ಲಿ ಈ ಸಿನಿಮಾ ದೊಡ್ಡ ಬ್ರೇಕ್ ಕೊಡಲಿದೆ ಎಂದು ಫ್ಯಾನ್ಸ್ ಭವಿಷ್ಯ ಹೇಳುತ್ತಿದ್ದಾರೆ.

ಆಗಸ್ಟ್ 5 ರಂದು ರಿಲೀಸ್ ಆಗಿರುವ ಸಲಗ ಪ್ರಮೋಷನಲ್ ಹಾಡು ಯೂಟ್ಯೂಬ್‌ನಲ್ಲಿ 1 ಮಿಲಿಯನ್ (10 ಲಕ್ಷ) ವೀಕ್ಷಣೆ ಕಂಡಿದೆ. ಹಾಡು ತುಂಬಾ ಹೊಸದಾಗಿದೆ, ಸಾಹಿತ್ಯ ವಿಶೇಷವಾಗಿದೆ ಎಂದು ಕಾಮೆಂಟ್ ಮೂಲಕ ಸಂಗೀತ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸಲಗ ಚಿತ್ರದ ಪ್ರಮೋಷನಲ್ ಹಾಡನ್ನು ಶಿವರಾಜ್ ಕುಮಾರ್ ಮೆಚ್ಚಿಕೊಂಡಿದ್ದು, ಶುಭಕೋರಿದ್ದಾರೆ.

ಸೂರಿ ಅಣ್ಣಾ.....ಸೂಪರ್ ಹಿಟ್

2020ರ ಜನವರಿ ತಿಂಗಳು ಬಿಡುಗಡೆಯಾಗಿದ್ದ ಸೂರಿ ಅಣ್ಣಾ ಹಾಡು ಸೂಪರ್ ಹಿಟ್ ಆಗಿತ್ತು. ದುನಿಯಾ ವಿಜಯ್ ಮತ್ತು ತಂಡ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಆಂಟೋನಿ ದಾಸನ್ ಹಾಡಿದ್ದರು. ಯೂಟ್ಯೂಬ್‌ನಲ್ಲಿ ಈ ಹಾಡು 7.2 ಮಿಲಿಯನ್ ವೀಕ್ಷಣೆ ಕಂಡಿದೆ. ಯಾವ ಪಾರ್ಟಿ, ಪಬ್‌ನಲ್ಲೂ ಈ ಹಾಡು ಟ್ರೆಂಡ್ ಆಗಿದೆ.

Duniya Vijay Starrer Salaga Movie Promotional Song Released

'ಸಲಗ' ಟೈಟಲ್ ಹಾಡು ಹಿಟ್

ಸೂರಿ ಅಣ್ಣಾ ಹಾಡಿನ ನಂತರ ಬಂದ ಟೈಟಲ್ ಹಾಡು ಸಹ ಹಿಟ್ ಆಗಿದೆ. ನಾಗಾರ್ಜುನ ಶರ್ಮಾ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಯೋಗಿ ಬಿ, ಶರತ್, ಚರಣ್ ರಾಜ್ ಹಾಗೂ ಸಂಚಿತ್ ಹೆಗ್ಡೆ ಹಾಡಿದ್ದರು.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 20 ರಂದು ಸಲಗ ಸಿನಿಮಾ ರಿಲೀಸ್ ಆಗುತ್ತಿದೆ. ಜುಲೈ 19 ರಿಂದ ಕರ್ನಾಟಕದಲ್ಲಿ ಚಿತ್ರಮಂದಿರಗಳಿಗೆ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಸದ್ಯಕ್ಕೆ ಶೇಕಡಾ 50ರಷ್ಟು ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಸಲಗ ರಿಲೀಸ್ ವೇಳೆ 100 ಪರ್ಸೆಂಟ್ ಅನುಮತಿ ಸಿಗಬಹುದು ಎಂಬ ನಿರೀಕ್ಷೆ ಇದೆ.

ದುನಿಯಾ ವಿಜಯ್ ನಟಿಸಿರುವ ನಿರ್ದೇಶಿಸಿರುವ ಈ ಚಿತ್ರವನ್ನು ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. 'ಡಾಲಿ' ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜನಾ ಆನಂದ್ ನಾಯಕಿ. ಚರಣ್ ರಾಜ್ ಸಂಗೀತ ನಿರ್ದೇಶನದ ಹಾಡುಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ.

'ಸಲಗ' ಸಿನಿಮಾ ಬಿಟ್ಟರೆ, ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3', 'ವಿಕ್ರಾಂತ್ ರೋಣ' ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿವೆ. ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಬಿಡುಗಡೆಯಾಗಬೇಕಿದೆ.

More from Filmibeat

English summary
Kannada actor-director Duniya Vijay starrer Salaga movie promotional song released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X