ಕಾಶ್ಮೀರದಲ್ಲಿ ಹಾಡು ಚಿತ್ರೀಕರಣ ಮಾಡಿದ ನಿರ್ದೇಶಕ ಪ್ರೇಮ್

'ಜೋಗಿ' ಪ್ರೇಮ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಏಕ್ ಲವ್ ಯಾ ಚಿತ್ರೀಕರಣಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಕೊರೊನಾ ಲಾಕ್‌ಡೌನ್‌ ಮುಗಿದ ಮೇಲೆ ಊಟಿಯಲ್ಲಿ ಸಾಂಗ್ ಶೂಟ್ ಮಾಡಿದ್ದ ಚಿತ್ರತಂಡ ನಂತರ ಬ್ರೇಕ್ ನೀಡಿತ್ತು.

ಆಮೇಲೆ ಲೋಕೆಶನ್ ನೋಡಲು ಡೈರೆಕ್ಟರ್ ಪ್ರೇಮ್ ಕಾಶ್ಮೀರ, ಲಡಾಕ್, ಗುಜರಾತ್‌, ರಾಜಸ್ಥಾನಕ್ಕೆ ಹೋಗಿ ಬಂದಿದ್ದರು. ಇದೀಗ, ಕಾಶ್ಮೀರದಲ್ಲಿ ಏಕ್ ಲವ್ ಯಾ ಸಿನಿಮಾ ಶೂಟಿಂಗ್ ಶುರು ಮಾಡಿದ್ದಾರೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿರುವ ಪ್ರೇಮ್ ''ನಾವು ಈ ಹಾಡನ್ನು ವಿದೇಶದಲ್ಲಿ ಶೂಟ್ ಮಾಡಲು ಪ್ಲಾನ್ ಮಾಡಿದ್ವಿ. ಆದ್ರೆ, ನಮ್ಮ ಕಾಶ್ಮೀರದ ಮುಂದೆ ಬೇರೆ ಯಾವುದು ಇಲ್ಲ ಅನಿಸಿದೆ. ಇಲ್ಲಿನ ಜನರ ಸಹಾಯದಿಂದ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಿದ್ದೇವೆ'' ಎಂದು ಸಂತಸ ಹಂಚಿಕೊಂಡಿದ್ದಾರೆ.

Ek Love Ya Movie Song Shooting in Jammu Kashmir

ಈ ವೇಳೆ ಜಮ್ಮು ಕಾಶ್ಮೀರದ ಪೊಲೀಸರಿಗೆ, ಸೈನಿಕರಿಗೆ ವಿಶೇಷವಾದ ಧನ್ಯವಾದ ತಿಳಿಸಿದ್ದಾರೆ. ಕಾಶ್ಮೀರದಿಂದ ಮುಂದಕ್ಕೆ ಲೆಹ್ ಲಡಾಕ್, ಗುಜರಾತ್ ಮತ್ತು ರಾಜಸ್ಥಾನಕ್ಕೆ ತೆರಳಿದ್ದೇವೆ ಎಂದು ಸಹ ಮಾಹಿತಿ ನೀಡಿದ್ದಾರೆ.

ಕಾಶ್ಮೀರದಲ್ಲಿ ನಡೆದ ಚಿತ್ರೀಕರಣದಲ್ಲಿ ನಾಯಕ ನಟ ರಾಣಾ (ರಕ್ಷಿತಾ ಪ್ರೇಮ್ ಸಹೋದರ), ನಾಯಕಿ ರೇಶ್ಮಾ (ಚೊಚ್ಚಲ ಸಿನಿಮಾ) ಸೇರಿದಂತೆ ತಾಂತ್ರಿಕ ವರ್ಗ ಭಾಗಿಯಾಗಿತ್ತು.

ಇನ್ನುಳಿದಂತೆ ರಚಿತಾ ರಾಮ್ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಹೋದರನ ಚಿತ್ರಕ್ಕೆ ಖುದ್ದೇ ರಕ್ಷಿತಾ ಅವರೇ ಬಂಡವಾಳ ಹಾಕಿದ್ದಾರೆ. ಮೆಹನ್ ಸಿಂಹ ಅವರ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶಕ ಒಳಗೊಂಡಿದೆ.

Recommended Video

ಪ್ರೇಮ್, ರಚಿತಾ ರಾಮ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರಾಣಾ | Filmibeat Kannada

More from Filmibeat

English summary
Kannada Director prem shooting 'Ek Love Ya' movie song at Jammu Kashmir. The movie starrer Rana brother of Rakshit prem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X