For Quick Alerts
  ALLOW NOTIFICATIONS  
  For Daily Alerts

  ಮತದಾನ, ಡೆಮಾಕ್ರೆಸಿ ಬಗ್ಗೆ ಉಪ್ಪಿ ಸ್ಟೈಲ್ ಸಾಂಗ್

  By Mahesh
  |
  ಭಾನುವಾರ (ಮೇ.5) ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಪತ್ನಿ ಪ್ರಿಯಾಂಕಾ ಅವರ ಜೊತೆಗೆ ಬಂದು ಮತದಾನ ಮಾಡಿದ್ದಾರೆ. ಚುನಾವಣಾ ಆಯೋಗದ ಅನಧಿಕೃತ ರಾಯಭಾರಿಯಂತೆ ಕಳೆದ ಹಲವು ದಿನಗಳಿಂದ ಮತದಾನದ ಮಹತ್ವದ ಬಗ್ಗೆ ಉಪ್ಪಿ ಸಾರಿದ್ದಾರೆ. ಮತದಾನ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ. ಎಲ್ಲರೂ ಮತದಾನ ಮಾಡಲೇಬೇಕು. ನಿಮ್ಮ ವೋಟ್ ವೇಸ್ಟ್ ಮಾಡಬೇಡಿ. ಒಂದು ಪಕ್ಷಕ್ಕೆ ಮೆಜಾರಿಟಿ ಸಿಗಬೇಕು ಎಂಬ ಆಸೆಯಿದೆ ಎಂದು ಉಪೇಂದ್ರ ಹೇಳಿದ್ದಾರೆ.

  ಈ ಹಿಂದೆ 2004ರಲ್ಲೇ ಉಪೇಂದ್ರ ಅವರು ಓಂಕಾರ ಚಿತ್ರದಲ್ಲಿ ಓತ್ಲಾ ಓತ್ಲಾ ಹಾಡಿನಲ್ಲಿ ಮತದಾನ, ಪ್ರಜಾಪ್ರಭುತ್ವ, ರಾಜಕೀಯ ನಾಯಕರ ಆಟಾಟೋಪದ ಬಗ್ಗೆ ಓಪನ್ ಓಪನ್ ಆಗಿ ಹಾಡಿ ಕುಣಿದಿದ್ದರು. ಉಪ್ಪಿ ಜೊತೆ ದುರ್ಗಾಶೆಟ್ಟಿ ಸ್ಟೆಪ್ ಹಾಕಿದ್ದರು. ವೋಟ್ ಮಾಡದೆ ಸೋಮಾರಿಗಳಾಗಿ ಕುಳಿತಿರುವ ಮತದಾರ ಪ್ರಭುಗಳಿಗೆ ಈ ಹಾಡು ಅರ್ಪಣೆ....

  ಓಂಕಾರ: ಓತ್ಲಾ ಓತ್ಲಾ
  ಸಂಗೀತ: ಗುರುಕಿರಣ್
  ಗಾಯಕರು: ಶಮಿತಾ ಮಲ್ನಾಡ್ ಹಾಗೂ ಉಪೇಂದ್ರ

  ಶಮಿತಾ ಮಲ್ನಾಡ್: ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ
  ಯೇ ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ

  ಉಪೇಂದ್ರ: ಓತ್ಲಾ ಓತ್ಲಾ ಓತ್ಲಾ ಓಟಿಲ್ಲಿ ಒತ್ತ್ಲಾ
  ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
  ಓತ್ಲಾ ಓತ್ಲಾ ಓಟಿಲ್ಲಿ ಒತ್ತಲಾ
  ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
  ಸ್ಟಾರ್ಸೆಲ್ಲಾ ಬೆಗ್ಗರ್ಸು ಆದ್ರಲ್ಲಾ
  ತಿರ್ಪೋಕಿ ಪೊರ್ಕೀನು ಸ್ಟಾರಲಾ
  ಈ ಮ್ಯಾಜಿಕ್ ಐದ್ ವರ್ಷಕೊಂದ್ಸಲ

  ಸಂಗಡಿಗರು: ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
  ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ
  ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
  ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ
  ನಂಗಾ ನಾಚ್ ಓಟ್ ಫಾರ್ ನಂಗಾ ನಾಚ್ ಓಟ್ ಫಾರ್ ನಂಗಾ ನಾಚ್

  ಉಪೇಂದ್ರ: ಕತ್ತ್ಲೇಲ್ ಒಂಟಿ ಸುಂದರಿ ನಡೆದರೆ ರಾಂ ರಾಜ್ಯ
  ಅರೆ ಬೆತ್ತಲೆ ನಾಟಿ ಚೋಕ್ರಿ ಕುಣಿದರೆ ನಂ ರಾಜ್ಯ
  ಹೊಡಿ ಕಂಟ್ರಿ ಸಾರಾಯ್
  ತಗ ವೀರೇಷ* ರಾಯ್*
  ಒಂದ್ ಓಟಿಗೆ ಐನೂರ್ ರುಪಾಯಿ
  ಓಟು ಹಾಕೋವರೆಗು ಇವು ನಿನ್ ಮನೆ ನಾಯಿ
  ಗೆದ್ದ್ ಮೇಲೆ ನಿಂಗ್ ಬದನೆಕಾಯ್

  ಶಮಿತ: ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ
  ಯೇ ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ

  ಉಪೇಂದ್ರ: ಓತ್ಲಾ ಓತ್ಲಾ ಓತ್ಲಾ ಓಟಿಲ್ಲಿ ಒತ್ತ್ಲಾ
  ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
  ಓತ್ಲಾ ಓತ್ಲಾ ಓಟಿಲ್ಲಿ ಒತ್ತಲಾ
  ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
  ಸ್ಟಾರ್ಸೆಲ್ಲಾ ಬೆಗ್ಗರ್ಸು ಆದ್ರಲ್ಲಾ
  ತಿರ್ಪೋಕಿ ಪೊರ್ಕೀನು ಸ್ಟಾರಲಾ
  ಈ ಮ್ಯಾಜಿಕ್ ಐದ್ ವರ್ಷಕೊಂದ್ಸಲ

  ಸಂಗಡಿಗರು: ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
  ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ
  ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
  ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ

  ದೇಸಾ ಕಾಯೊ ವೇಸಾ
  ನೋಡು ಮಾತು ಎಷ್ಟು ನೈಸಾ
  ಪೈಸಾ ದೇ ದೇ ಪೈಸಾ
  ಪೈಸಾ ದೇ ದೇ ಪೈಸಾ
  ನಂಗಾ ನಾಚ್ ದೇಖೊ ನಂಗಾ ನಾಚ್
  ಮುಂಡಾ ಮೋಛ್ ದೇಸಾ ಮುಂಡಾ ಮೋಛ್

  ಉಪೇಂದ್ರ: ವಂಶದ ಟೋಪಿ ಇದ್ದರೆ ಬಚ್ಚಾನು ಬಚ್ಚನ್ನೇ ಹಾ
  ಕರ್ಮದಾ ಪೀಪಿ ಇದ್ದರೆ ಲುಚ್ಚಾನು ಸಾಚಾನೇ
  ವೋಟಿಗ್ ಒಂದು ಜಾತಿ ತಪ್ಪಿಗ್ ಒಂದು ಗೋಟಿ
  ಯಾರ್ ಗೆದ್ದ್ರು ದೇಶ ಲೂಟಿ
  ನೆಗೆದ್ ಬಿದ್ದ್ರೆ ಪತಿ ಸತಿಗೆ ಸಿಂಪತಿ
  ಗೆಲ್ಸೋನೆ ಕಪಿನಿಪತಿ

  ಶಮಿತ: ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ
  ಯೇ ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ

  ಉಪೇಂದ್ರ: ಓತ್ಲಾ ಓತ್ಲಾ ಓತ್ಲಾ ಓಟಿಲ್ಲಿ ಒತ್ತ್ಲಾ
  ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
  ಓತ್ಲಾ ಓತ್ಲಾ ಓಟಿಲ್ಲಿ ಒತ್ತಲಾ
  ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
  ಸ್ಟಾರ್ಸೆಲ್ಲಾ ಬೆಗ್ಗರ್ಸು ಆದ್ರಲ್ಲಾ
  ತಿರ್ಪೋಕಿ ಪೊರ್ಕೀನು ಸ್ಟಾರಲಾ
  ಈ ಮ್ಯಾಜಿಕ್ ಐದ್ ವರ್ಷಕೊಂದ್ಸಲ

  ಸಂಗಡಿಗರು: ಕಕ್ಕು ಕಕ್ಕು ಕಕ್ಕು ಕಕ್ಕು ಕಕ್ಕ್ಲ ಮಗ
  ಐದು ವರ್ಷ ನುಂಗಿದ್ದ್ನೆಲ್ಲ ಕಕ್ಕಲ ಮಗ
  ಕಕ್ಕು ಕಕ್ಕು ಕಕ್ಕು ಕಕ್ಕು ಕಕ್ಕ್ಲ ಮಗ

  English summary
  Real Star Upendra Starrer Kannada movie Omkara Song Othla Othala lyrics. A Peppy song number having political satire lyrics has Upendra and Durga Shetty dancing to the tune of Music director Guru Kiran, Sung by Upendra and Shamitha Malnad

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X