»   » ಲವ್ಲಿ ಸ್ಟಾರ್ ಪ್ರೇಮ್ ನಿಮ್ಮ ಮನೆಗೂ ಬರ್ಬಹುದು
ಲವ್ಲಿ ಸ್ಟಾರ್ ಪ್ರೇಮ್ ನಿಮ್ಮ ಮನೆಗೂ ಬರ್ಬಹುದು
Posted By:
Subscribe to Filmibeat Kannada
'ಫೇರ್ ಅಂಡ್ ಲವ್ಲಿ' ಸಿನಿಮಾ ಸಣ್ಣ ಸದ್ದೂ ಮಾಡದೇ ಶೂಟಿಂಗ್ ಮುಗಿಸಿದೆ. ಈಗ ಆಡಿಯೋ ರಿಲೀಸ್ ಗೆ ತಯಾರಿ ಮಾಡ್ಕೋತಿದೆ. ಲವ್ಲಿ ಸ್ಟಾರ್ ಪ್ರೇಮ್, ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್ ಜೋಡಿಯಾಗಿರೋ ಸಿನಿಮಾದ ಆಡಿಯೋ ರಿಲೀಸ್ ವಿನೂತನವಾಗಿರಲಿದೆ.
ಆಡಿಯೋ ರಿಲೀಸ್ ಗಳು ಸಹಜವಾಗಿ ಗಾಂಧಿನಗರದ ಯಾವುದೋ ಸ್ಟಾರ್ ಹೊಟೆಲ್ ಗಳಲ್ಲಿ ನಡೆಯುತ್ತೆ. ಇಲ್ಲದಿದ್ರೆ ಇತ್ತೀಚೆಗೆ ಪವರ್ ಸ್ಟಾರ್ ಆಡಿಯೋ ರಿಲೀಸ್ ತರಹ ಬಳ್ಳಾರಿ ಅಥವಾ ಹುಬ್ಬಳ್ಳಿಯಂತಹಾ ದೂರದ ಜಿಲ್ಲೆಗಳಲ್ಲೋ, ದೊಡ್ಡ ಸಂಖ್ಯೆಯಲ್ಲಿ ಜನ ಸೇರಿಸಿ ಆಡಿಯೋ ರಿಲೀಸ್ ಮಾಡ್ತಾರೆ. ಆದರೆ ಫೇರ್ ಅಂಡ್ ಲವ್ಲಿ ಚಿತ್ರದ ಹಾಡುಗಳನ್ನ ತೊಗೊಂಡು ಪ್ರೇಮ್ ಮತ್ತು ಶ್ವೇತಾ ನಿಮ್ಮ ಮನೆಗೇ ಬರ್ತಾರೆ. [ಫೇರ್ ಅಂಡ್ ಲವ್ಲಿ ಸ್ಟಾರ್ ಪ್ರೇಮ್ ಈಗ 'ದಳಪತಿ']
Still from Fair and Lovely
ನೀವು ಹೋಗ್ತಿರೋ ವಿಜಯನಗರ ಬಸ್ ಹತ್ತಿ ಬಸ್ ನಲ್ಲಿರೋ ನಿಮಗೆ ಹಾಡು ಕೇಳಿಸಿ ಬಸ್ ನಲ್ಲಿರೋರಿಗೆಲ್ಲ ಆಡಿಯೋ ಸಿಡಿಗಳನ್ನ ಕೊಟ್ಟು ನಮ್ಮ ಸಿನಿಮಾವನ್ನ ಪ್ರೋತ್ಸಾಹಿಸಿ ಅಂತ ಹೇಳ್ತಾರೆ. ಹೀಗೂ ಆಡಿಯೋ ರಿಲೀಸ್ ಮಾಡ್ತಾರಾ ಅಂದ್ರೆ, ಹೌದು ಖಂಡಿತಾ ಹೌದು.
ನಾಳೆ ಅಂದ್ರೆ ಜುಲೈ 9ಕ್ಕೆ 'ಫೇರ್ ಅಂಡ್ ಲವ್ಲಿ' ನಿರ್ದೇಶಕ ರಘುರಾಮ್ ಅವರ ಹುಟ್ಟುಹಬ್ಬವಿದೆ. ಹುಟ್ಟುಹಬ್ಬದ ದಿನ ಪ್ರೇಮ್-ಶ್ವೇತಾ ನಿಮ್ಮ ಮನೆಗೆ ನೀವಿರೋ ಬಸ್ ಗೆ ಸರ್ ಪ್ರೈಸ್ ಎಂಟ್ರಿ ಕೊಡಬಹುದು. ಅಂದಹಾಗೆ ಈ ಚಿತ್ರಕ್ಕೆ ಸಂಗೀತ ವಿ. ಹರಿಕೃಷ್ಣ, ಕ್ಯಾಮೆರಾ ಜಗದೀಶ್ ವಾಲಿ. ವಿವರಗಳು ಕೆಳಕಂಡಂತಿವೆ ನೋಡಿ.
Post by Fair & Lovely.
English summary
Please Wait while comments are loading...