For Quick Alerts
  ALLOW NOTIFICATIONS  
  For Daily Alerts

  ಗಾಳಿಪಟ 2: ಎಗ್ಸಾಮ್‌ನಲ್ಲಿ ಫೇಲ್, ಗಾಳಿಪಟ ಬಿಟ್ಟ ಗಣೇಶ್, ದಿಗಂತ್, ಪವನ್

  |

  ಯೋಗರಾಜ್‌ ಭಟ್‌ ತಂಡ ಮತ್ತೆ ಜಾದು ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಈ ಬಾರಿ ಗಣೇಶ್, ದಿಗಂತ್, ಪವನ್ ಕುಮಾರ್ ಜೊತೆ ಭಟ್ರು ಮತ್ತೆ ಗಾಳಿಪಟ ಹಿಡಿದಿದ್ದಾರೆ. ಮತ್ತೆ ಮುಗಿಲೆತ್ತರಕ್ಕೆ ಗಾಳಿಪಟ ಹಾರಿಸುವುದಕ್ಕೆ ಇಡೀ ತಂಡ ಸಜ್ಜಾಗಿ ನಿಂತಿದೆ. ಈಗಾಗಲೇ 'ಗಾಳಿಪಟ' ಸಿನಿಮಾ ಮಾಡಿ ಗೆದ್ದಿರೋ ತಂಡ ಮತ್ತೆ ಪ್ರೇಕ್ಷಕರ ಮುಂದೆ ಥಿಯೇಟರ್‌ನಲ್ಲಿ ಗಾಳಿಪಟ ಹಾರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅದುವೇ 'ಗಾಳಿಪಟ 2'.

  Recommended Video

  Gaalipata 2 | ಗಣೇಶ್ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತ ಸಿಕ್ಕಿದ್ದು ಇದೆ ಮೊದಲು

  14 ವರ್ಷಗಳ ಹಿಂದೆ ಯೋಗರಾಜ್‌ ಭಟ್, ಗಣೇಶ್, ದಿಗಂತ್ ಹಾಗೂ ರಾಜೇಶ್ ಕೃಷ್ಣನ್ ಗಾಳಿಪಟ ಹಾರಿಸಿದ್ದರು. 'ಮುಂಗಾರು ಮಳೆ' ಯಶಸ್ಸಿನ ಬೆನ್ನಲ್ಲೇ ಈ ತಂಡ ಮತ್ತೊಂದು ಬ್ಲಾಕ್‌ ಬಸ್ಟರ್ ಹಿಟ್ ಸಿನಿಮಾ ಕೊಟ್ಟಿತ್ತು. ಈಗ ಒಂದೂವರೆ ದಶಕದ ಬಳಿಕ ಮತ್ತೆ ಗಾಳಿಪಟ ಹಿಡಿದು ಬಂದಿದೆ ಚಿತ್ರತಂಡ. ಸದ್ಯಕ್ಕೆ ಚಿತ್ರತಂಡ ಹಾಡೊಂದನ್ನು ಹೊರಬಿಟ್ಟಿದ್ದು ಸಿನಿಮಾ ಬಗ್ಗೆ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

  ಗೋಲ್ಡನ್ ಸ್ಟಾರ್ ಜನ್ಮದಿನಕ್ಕೆ ಯೋಗರಾಜ್ ಭಟ್ಟರ ಶುಭ ಹಾರೈಕೆ: 'ತಪ್ಪು ಕನ್ನಡ' ಬಳಕೆಗೆ ಆಕ್ಷೇಪಗೋಲ್ಡನ್ ಸ್ಟಾರ್ ಜನ್ಮದಿನಕ್ಕೆ ಯೋಗರಾಜ್ ಭಟ್ಟರ ಶುಭ ಹಾರೈಕೆ: 'ತಪ್ಪು ಕನ್ನಡ' ಬಳಕೆಗೆ ಆಕ್ಷೇಪ

  ಎಗ್ಸಾಮ್‌ನಲ್ಲಿ ಫೇಲ್ ಆದವರು ಗಾಳಿಪಟ ಹಾರಿಸಿದ್ರು

  'ಗಾಳಿಪಟ 2' ಸ್ಯಾಂಡಲ್‌ವುಡ್‌ನ ಮತ್ತೊಂದು ನಿರೀಕ್ಷಿತ ಸಿನಿಮಾ. ಯೋಗರಾಜ್ ಭಟ್ ನಿರ್ದೇಶನ. ಗಣೇಶ್, ದಿಗಂತ್, ಪವನ್ ನಟನೆ ಈ ಸಿನಿಮಾದ ಹೈಲೈಟ್. ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿದ ಭಟ್ರು ಸಿನಿಮಾ ಬಿಡುಗಡೆ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಇದರ ಮೊದಲ ಹಂತದಲ್ಲಿ ಲಿರಿಕಲ್ ಸಾಂಗ್ ಒಂದನ್ನು ಬಿಡುಗಡೆ ಮಾಡಲಾಗಿದೆ.

  'ಗಾಳಿಪಟ' ಸಿನಿಮಾದಲ್ಲಿ ವಿ. ಹೃರಿಕೃಷ್ಣ ಟ್ಯೂನ್ ಹಾಕಿದ್ದರು. ಸಿನಿಮಾ ಪ್ರತಿಯೊಂದು ಹಾಡು ಕೂಡ ಸೂಪರ್ ಹಿಟ್ ಆಗಿತ್ತು. 'ಗಾಳಿಪಟ 2'ಗೆ ಅರ್ಜುನ್ ಜನ್ಯ ಟ್ಯೂನ್‌ ಹಾಕಿದ್ದಾರೆ. ಸದ್ಯಕ್ಕೆ ಎಗ್ಸಾಮ್ ಸಾಂಗ್ ಒಂದನ್ನು ಬಿಡುಗಡೆ ಮಾಡಿದ್ದು, ಹುಡುಗರಿಗೆ ಕಿಕ್ ಕೊಡುತ್ತಿದೆ.

  ಭಟ್‌ರ ಸಾಹಿತ್ಯ, ವಿಜಯ್ ಪ್ರಕಾಶ್ ಧ್ವನಿ

  'ಗಾಳಿಪಟ 2' ಸಿನಿಮಾದ ಮೊದಲ ಹಾಡಿಗೆ ಯೋಗ್‌ರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. " ಪರೀಕ್ಷೆನಾ ಬಡಿಯಾ, ಕ್ವೆಷ್ಚನ್ ಪೇಪರ್‌ಗೆ ಎಂಟ್ ಹತ್ ನಾಗರಹಾವು ಕಡಿಯಾ." ಅಂತ ಸಾಹಿತ್ಯ ಬರೆದಿದ್ದಾರೆ. ಯೋಗರಾಜ್ ಭಟ್‌ರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಟ್ಯೂನ್ ಹಾಗೂ ವಿಜಯ್ ಪ್ರಕಾಶ್ ಧ್ವನಿಯಿದೆ. ಈ ಲಿರಿಕಲ್ ಸಾಂಗ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ.

  Exam Song from Ganesh Starrer Gaalipata 2 Lyrical Video Released

  'ಗಾಳಿಪಟ' ಮೊದಲ ಭಾಗದಲ್ಲಿದ್ದ ಕೆಲವು ಪಾತ್ರಗಳು ಪಾರ್ಟ್ 2 ನಲ್ಲೂ ಮುಂದುವರೆಸಲಾಗಿದೆ. ಗಣೇಶ್, ದಿಗಂತ್ ಹಾಗೂ ಹಿರಿಯ ನಟ ಅನಂತ್ ನಾಗ್ ಸೀಕ್ವೆಲ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಪವನ್ ಕುಮಾರ್ 'ಗಾಳಿಪಟ 2'ಗೆ ಎಂಟ್ರಿ ಕೊಟ್ಟಿದ್ದಾರೆ. ದಿವಂಗತ ಬುಲೆಟ್ ಪ್ರಕಾಶ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಮಳೆಗಾಲದಲ್ಲಿ ಗಾಳಿಪಟ ಹಾರಿಸಲು ಸಜ್ಜಾದ ಭಟ್‌ರು

  ಯೋಗರಾಜ್‌ ಭಟ್ ನಿರ್ದೇಶನದ 'ಗಾಳಿಪಟ 2' ಚಿತ್ರ ಹಲವು ಕಾರಣಕ್ಕೆ ಕುತೂಹಲ ಕೆರಳಿಸಿದೆ. 'ಗಾಳಿಪಟ' ಸೀಕ್ವೆಲ್‌ನಲ್ಲಿ ಸ್ಟೋರಿ ಹೇಗಿರುತ್ತೆ? ರೊಮ್ಯಾಂಟಿಕ್ ಸ್ಟೋರಿನಾ? ಕಾಮಿಡಿ ಸ್ಟೋರಿನಾ? ಅನ್ನುವ ಕೌತಕವಿದೆ. ಇದರೊಂದಿಗೆ ಸಿನಿಮಾದ ಮೂವರು ನಾಯಕಿಯರು ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ.

  'ಗಾಳಿಪಟ 2'ನಲ್ಲಿ ನಾಯಕಿಯರಾಗಿ ನಿಶ್ವಿಕಾ ನಾಯ್ಡು, ಶರ್ಮಿಳಾ ಮಾಂಡ್ರೆ ಹಾಗೂ ಸಂಯುಕ್ತಾ ಮೆನನ್ ಜೊತೆ ವೈಭವಿ ಶಾಂಡಿಲ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದ್ದು, ಗಣೇಶ್, ಯೋಗರಾಜ್‌ ಭಟ್ ಕಾಂಬಿನೇಷನ್ ಸಿನಿಮಾ ಆಗಿರುವುದರಿಂದ ಪ್ರೇಕ್ಷಕರಲ್ಲಿ ಕುತೂಹಲ ದುಪ್ಪಟ್ಟಾಗಿದೆ.

  English summary
  Exam Song from Ganesh Starrer Gaalipata 2 Lyrical Video Released. Know More
  Friday, April 22, 2022, 10:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X