For Quick Alerts
  ALLOW NOTIFICATIONS  
  For Daily Alerts

  ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಯುವ ಗಾಯಕ ನಿಧನ

  |

  ಪಂಜಾಬಿ ಖ್ಯಾತ ಗಾಯಕ ದಿಲ್ಜಾನ್ ಭೀಕರ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಮಾರ್ಚ್ 30ರಂದು ಬೆಳಗ್ಗೆ 2.30ರ ಸುಮಾರಿಗೆ ಅಮೃತಸರದಿಂದ 20 ಕಿ.ಮೀ ದೂರದಲ್ಲಿರುವ ಜಾಂಡಿಯಾಲಾ ಗುರು ಬಳಿ ನಡೆದ ಅಪಘಾತ ನಡೆದಿದ್ದು, ದಿಲ್ಜಾನ್ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಸ್ಥಳಿಯರು ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಕೊನೆಯುಸಿರೆಳೆದಿದ್ದಾರೆ.

  31 ವರ್ಷದ ಯುವ ಗಾಯಕ ದಿಲ್ಜಾನ್ ಸಿಂಗ್ ಚಲಾಯಿಸುತ್ತಿದ್ದ ಕಾರು ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಪೊಲೀಸ್ ಮಾಹಿತಿ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಸೇತುವೆಯ ಬಳಿ ನಿಲ್ಲಿಸಿದ್ದ ಟ್ರಕ್ ಗೆ ದಿಲ್ಜಾನ್ ಕಾರು ಡಿಕ್ಕಿ ಹೊಡೆದಿದೆ ಎಂದಿದ್ದಾರೆ.

  ಆಟೋರಿಕ್ಷಾದಲ್ಲಿ ಮೃತದೇಹವಾಗಿ ಪತ್ತೆಯಾದ ತಮಿಳು ಹಾಸ್ಯ ನಟ

  ದಿಲ್ಜಾನ್ ಹಠಾತ್ ನಿಧನದ ಸುದ್ದಿ ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಅಭಿಮಾನಿಗಳಿಗೆ ಶಾಕ್ ನೀಡಿದೆ. ನೆಚ್ಚಿನ ಗಾಯಕನ ನಿಧನಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

  ದಿಲ್ಜಾನ್ ಗೆ ಮದುವೆಯಾಗಿದ್ದು, ಪತ್ನಿ ಮತ್ತು ಮಕ್ಕಳು ಕೆನಡಾದಲ್ಲಿ ನೆಲೆಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಸಾಕಷ್ಟು ಪ್ರಸಿದ್ಧ ಗೀತಿಗಳನ್ನು ಹಾಡಿರುವ ದಿಲ್ಜಾನ್ 2012ರ ಬಳಿಕ ಭಾರಿ ಜನಪ್ರಿಯತೆ ಪಡೆದಿದ್ದರು.

  ಅಮೆರಿಕದಲ್ಲಿ ಒಂದು ದಿನ ಮುಂಚಿತವಾಗಿ ರಿಲೀಸಾಗ್ತಿದೆ ಯುವರತ್ನ ಸಿನಿಮಾ | Yuvarathnaa | Filmibeat Kannada

  ಪಂಜಾಬಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. 'ಇಂದು ಬೆಳಗ್ಗೆ ಪಂಜಾಬಿನ ಯುವ ಮತ್ತು ಭರವಸೆಯ ಗಾಯಕ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ಸುದ್ದಿ ಆಘಾತ ತಂದಿದೆ. ಈ ರೀತಿಯ ಯುವ ಜೀವವನ್ನು ಕಳೆದುಕೊಂಡಿರುವುದು ಅತ್ಯಂತ ದುಃಖಕರವಾಗಿದೆ. ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ದುಃಖ ಬರಿಸುವ ಶಕ್ತಿ ಕೊಡಲಿ' ಎಂದು ಹೇಳಿದ್ದಾರೆ.

  English summary
  Famous Punjabi singer Diljaan dies in road accident in Amitsar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X