For Quick Alerts
  ALLOW NOTIFICATIONS  
  For Daily Alerts

  ರಕ್ತದಾನ ಮಾಡಿ ಟ್ರೋಲ್ ಆದ ಸೋನು ನಿಗಮ್; ಕತ್ತೆಗಳೆಂದ ಗಾಯಕ

  |

  ದೇಶದಲ್ಲಿ ಕೊರೊನಾ ಎರಡನೇ ಅಲೆ ಭೀಕರವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಸಾಯುತ್ತಿದ್ದಾರೆ. ಕೊರೊನಾ ಅಟ್ಟಹಾಸಕ್ಕೆ ಇಡೀ ದೇಶ ತತ್ತರಿಸಿ ಹೋಗಿದೆ. ಸೋಂಕಿತರು ಆಕ್ಸಿಜನ್, ಬೆಡ್, ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಅನೇಕರು ಮುಂದೆ ಬಂದು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.

  ಅನೇಕ ಸೆಲೆಬ್ರಿಟಿಗಳು ನೆರವಿಗೆ ಧಾವಿಸಿದ್ದಾರೆ. ಖ್ಯಾತ ಗಾಯಕ ಸೋನು ನಿಗಮ್ ಕೂಡ ನೆರವಿಗೆ ನಿಂತಿದ್ದಾರೆ. ಇತ್ತೀಚಿಗೆ ಸೋನು ನಿಗಮ್ ಮುಂಬೈನಲ್ಲಿ ರಕ್ತದಾನ ಶಿಬಿರ ಉದ್ಘಾಟನೆ ಮಾಡಿ ರಕ್ತದಾನ ಮಾಡಿದ್ದಾರೆ. ಜೊತೆಗೆ ಬಿಎಂಸಿ ಮತ್ತು ಅಂಬುಲೆನ್ಸ್ ಗಳಿಗೆ ಆಕ್ಸಿಜನ್ ನೀಡಿದ್ದಾರೆ.

  ಸಲ್ಮಾನ್ ಖಾನ್ ಸಹೋದರಿ ಅರ್ಪಿತಾಗೆ ಕೊರೊನಾ ಪಾಸಿಟಿವ್ಸಲ್ಮಾನ್ ಖಾನ್ ಸಹೋದರಿ ಅರ್ಪಿತಾಗೆ ಕೊರೊನಾ ಪಾಸಿಟಿವ್

  ರಕ್ತದಾನ ಮಾಡುತ್ತಿರುವ ಫೋಟೋವನ್ನು ಸೋನು ನಿಗಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ರಕ್ತದಾನ ಮಾಡುವಾಗ ಮಾಸ್ಕ್ ಧರಿಸಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ. ಕೊರೊನಾ ಜಾಗೃತಿ ಮೂಡಿಸುವ ನೀವೆ ಮಾಸ್ಕ್ ಧರಿಸಿಲ್ಲವಲ್ಲಾ ಎಂದು ಕಾಲೆಳೆಯುತ್ತಿದ್ದಾರೆ.

  ಕಷ್ಟದ ಸಮಯದಲ್ಲಿ ನೆರವಿಗೆ ನಿಂತ ಸಮಯದಲ್ಲೂ ಟ್ರೋಲ್ ಮಾಡಿದವರಿಗೆ ಸೋನು ನಿಗಮ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಡಿದೆದ್ದಿರುವ ಸೋನು ನಿಗಮ್ ಟ್ರೋಲಿಗರನ್ನು ಕತ್ತೆಗಳು, ಗೂಬೆಗಳೆಂದು ಬೈದಿದ್ದಾರೆ.

  ಇನ್ಸ್ಟಾಗ್ರಾಮ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸೋನು, 'ಇಲ್ಲಿರುವ ಐನ್ ಸ್ಟೈನ್ ಗಳಿಗೆ ನಿಮ್ಮದೆ ಭಾಷೆಯಲ್ಲಿ ಉತ್ತರ ನೀಡಬೇಕು. ಕತ್ತೆಗಳಾ, ಗೂಬೆಗಳ.. ರಕ್ತದಾನ ಮಾಡುವಾಗ ಯಾರಿಗೂ ಮಾಸ್ಕ್ ಧರಿಸಲು ಅವಕಾಶವಿಲ್ಲ. ಎಡಪಂಥೀಯರೇ ಇನ್ನು ಎಷ್ಟು ಕೆಳಗೆ ಬೀಳಿಸುತ್ತೀರಾ?' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  Famous Singer Sonu Nigam hits back at trolls criticising him for not wearing mask
  ಕನ್ನಡ ಚಿತ್ರರಂಗದ ಹಿರಿಯ ನಟ ರಾಜಾರಾಮ್ ಇನ್ನಿಲ್ಲ | Filmibeat Kannada

  ಸೋನು ನಿಗಮ್ ಕಾಮೆಂಟ್ ಮಾಡಿರುವ ಈ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಕಾಮೆಂಟ್ ಸೋನು ನಿಗಮ್ ಇನ್ಸ್ಟಾಗ್ರಾಮ್ ನಿಂದ ಕಣ್ಮರೆಯಾಗಿದೆ. ಸೋನು ನಿಗಮ್ ಅಗತ್ಯ ಇರೋರಿಗೆ ಆಕ್ಸಿಜನ್ ಮತ್ತು ಬೆಡ್ ವ್ಯವಸ್ಥೆ ಮಾಡಿಸುತ್ತಿದ್ದಾರೆ.

  English summary
  Famous Singer Sonu Nigam hits back at trolls criticising him for not wearing mask while donating blood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X