For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಗಾಯಕ ಬಕಿಯಾ ನಿಧನ: ರೆಹಮಾನ್ ಸೇರಿ ಹಲವರ ಸಂತಾಪ

  |

  ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದಲ್ಲಿ ಹಲವು ಹಾಡುಗಳನ್ನು ಹಾಡಿದ್ದ ಜನಪ್ರಿಯ ಗಾಯಕ ಬಂಬಾ ಬಕಿಯಾ ಇಂದು ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 49 ವರ್ಷ ವಯಸ್ಸಾಗಿತ್ತು.

  ಈ ತಿಂಗಳಾಂತ್ಯಕ್ಕೆ ಬಿಡುಗಡೆ ಆಗಲಿರುವ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ 'ಪೊನ್ನಿ ನದಿ' ಹಾಡು ಹಾಡಿದ್ದವರು ಬಂಬಾ ಬಕಿಯಾ. ಈ ಹಾಡು ಸಾಕಷ್ಟು ವೈರಲ್ ಆಗಿತ್ತು. ಆದರೆ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಇರುವಾಗ ಬಂಬಾ ಬಕಿಯಾ ನಿಧನ ಹೊಂದಿದ್ದಾರೆ.

  'ರೋಬೊ 2.0' ಸಿನಿಮಾದ 'ಪುಳ್ಳಿನಂಗಾಲ್' ಹಾಡು ಭಾರಿ ಖ್ಯಾತಿಯನ್ನು ಬಂಬಾ ಬಕಿಯಾಗೆ ತಂದು ಕೊಟ್ಟಿತ್ತು. ಅದು ಮಾತ್ರವೇ ಅಲ್ಲದೆ ನಟ ವಿಜಯ್‌ರ 'ಬಿಗಿಲ್' ಸಿನಿಮಾಕ್ಕೂ ಹಾಡು ಹಾಡಿದ್ದರು ಬಕಿಯಾ. ಹಲವು ಜನಪದ ಹಾಡುಗಳನ್ನು ಸಹ ಬಕಿಯಾ ಹಾಡಿದ್ದಾರೆ.

  ಎ.ಆರ್.ರೆಹಮಾನ್ ಜೊತೆಗೆ ಸೋಲೊ ಆಲ್ಬಂಗಳಲ್ಲಿ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ್ದ ಬಂಬಾ ಬಾಕಿಯಾ, ಸ್ವತಃ ತಾವೂ ಸಹ ಸ್ವಂತ ಆಲ್ಬಂಗಳನ್ನು ಬಿಡುಗಡೆ ಮಾಡುವ ಆಸೆಯನ್ನು ಇತ್ತೀಚಿನ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದರು. ಸ್ವಂತ ಆಲ್ಬಂಗಳನ್ನು ಮಾಡಿದರೆ ತಮಗೆ ಇಷ್ಟವಾದ ರೀತಿಯಲ್ಲಿ ಹಾಡುಗಳನ್ನು ಜನರಿಗೆ ನೀಡಬಹುದು ಎಂಬುದು ಬಂಬಾ ಬಕಿಯಾ ಆಸೆಯಾಗಿತ್ತು.

  ಬಕಿಯಾ ಅಪ್ಪಟ ತಮಿಳು ಗಾಯಕರಾಗಿದ್ದರು. ಆದರೆ ಅವರ ವಿಶಿಷ್ಟ, ಆಳವಾದ ಧ್ವನಿ ಕಂಡು ಸೂಫಿ ಗಾಯಕ ಬಂಬಾ ಹೆಸರನ್ನು ಸ್ವತಃ ಎ.ಆರ್.ರೆಹಮಾನ್ ಅವರೇ ಬಕಿಯಾಗೆ ನೀಡಿದ್ದರು. ಆಗಿನಿಂದಲೂ ಅವರು ಬಂಬಾ ಬಕಿಯಾ ಎಂದೇ ಪ್ರಸಿದ್ಧರಾದರು. ಎ.ಆರ್.ರೆಹಮಾನ್‌ರಿಗಾಗಿ ಹಲವು ಹಾಡುಗಳನ್ನು ಹಾಡಿರುವ ಬಂಬಾ ಬಕಿಯಾ, ಎ.ಆರ್.ರೆಹಮಾನ್ ಅವರನ್ನು ತಮ್ಮ ಗುರುವೆಂದು ಸಹ ಕರೆಯುತ್ತಿದ್ದರು.

  Famous Tamil Singer Bamba Bakiya Died On September 02

  ''ಜನ ನನ್ನ ಹಾಡು ಕೇಳಿ ಕುಣಿಯುವುದಕ್ಕಿಂತಲೂ, ನನ್ನ ಹಾಡು ಕೇಳಿ ಕಣ್ಣೀರು ಹಾಕಿದರೆ ನನಗೆ ಹೆಚ್ಚು ಇಷ್ಟವಾಗುತ್ತದೆ. ನನಗೆ ಅಂಥಹಾ ಹಾಡುಗಳೇ ಹೆಚ್ಚು ಸಿಗಲೆಂದು ನಾನು ಆಶಿಸುತ್ತೇನೆ'' ಎಂದಿದ್ದರು. ಹಲವು ಫ್ಯಾತೋ ಹಾಡುಗಳನ್ನು ಹಾಡಿದ್ದರು ಸಹ ಬಂಬಾ ಬಕಿಯಾ. ಇನ್ನಷ್ಟು ಆ ರೀತಿಯ ಹಾಡುಗಳನ್ನು ಹಾಡಲು ಉತ್ಸುಕರಾಗಿದ್ದರು. ಆದರೆ ಆ ವೇಳೆಗೆ ಅವರನ್ನು ವಿಧಿ ಕರೆಸಿಕೊಂಡು ಬಿಟ್ಟಿದೆ.

  English summary
  Famous Tamil singer Bamba Bakiya died on September 02. He was only 49 years of age. he sung some very good songs in AR Rahaman compositions.
  Friday, September 2, 2022, 22:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X