ತಮನ್ನಾ ಬಿಂದಾಸ್ ಸ್ಟೆಪ್ಸ್‌ಗೆ ಫ್ಯಾನ್ಸ್ ಫಿದಾ: 'ಕಾವಾಲಾ' ಸಾಂಗ್ ಸೆನ್ಸೇಷನ್

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಚಿತ್ರದ 'ಕಾವಾಲಾ' ಸಾಂಗ್ ಸೂಪರ್ ಹಿಟ್ ಆಗಿದೆ. ಸೋಶಿಯಲ್ ಮೀಡಿಯಾ ತುಂಬೆಲ್ಲಾ ಇದೇ ಸಾಂಗ್ ಗುಂಗು ಶುರುವಾಗಿದೆ. ಮಕ್ಕಳು, ಯುವಕರು ಹುಕ್‌ ಸ್ಟೆಪ್ ಮಾಡಿ ಖುಷಿಪಡುತ್ತಿದ್ದಾರೆ. ಸಾಂಗ್‌ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾ ಬಿಂದಾಸ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ. ಸ್ಟೈಲಿಶ್ ಲುಕ್‌ನಲ್ಲಿ ಸಾಂಗ್‌ಗೆ ಖದರ್ ತಂದುಕೊಟ್ಟಿದ್ದಾರೆ.

ನೆಲ್ಸನ್ ದಿಲೀಪ್‌ ಕುಮಾರ್ ನಿರ್ದೇಶನದ 'ಜೈಲರ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ರಜನಿಕಾಂತ್ ಜೊತೆಗೆ ಕನ್ನಡ ನಟ ಶಿವರಾಜ್‌ಕುಮಾರ್, ಮೋಹನ್ ಲಾಲ್, ರಮ್ಯಾಕೃಷ್ಣ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ತಮನ್ನಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಕಾವಾಲಾ' ಸಾಂಗ್‌ನಲ್ಲಿ ಬೊಂಬಾಟ್ ಸ್ಟೆಪ್ಸ್ ಹಾಕಿ ಕಮಾಲ್ ಮಾಡಿದ್ದಾರೆ. ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಾಂಗ್ ಸಖತ್ ಕಿಕ್ ಕೊಡ್ತಿದೆ.

Fans grooving to Kaavaalaa kicks off a new Instagram reels trend

'ಅಪ್ಪು ಡ್ಯಾನ್ಸ್ ಡ್ಯಾನ್ಸ್', 'ರಾ ರಾ ರಕ್ಕಮ್ಮ', 'ಬುಟ್ಟಬೊಮ್ಮ' ರೀತಿಯ ಸೂಪರ್ ಹಿಟ್ ಸಾಂಗ್ಸ್‌ಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಅದರಲ್ಲೂ ಪ್ರತಿ ಸಾಂಗ್‌ನಲ್ಲೂ ಹುಕ್ ಸ್ಟೆಪ್ ಹೈಲೆಟ್ ಆಗಿ ಇನ್‌ಸ್ಟಾ ರೀಲ್ಸ್ ವೈರಲ್ ಆಗುತ್ತದೆ. ಸದ್ಯ 'ಜೈಲರ್' ಚಿತ್ರದ 'ಕಾವಾಲಾ' ಸಾಂಗ್‌ ಸಹ ಅದೇ ರೀತಿ ಸದ್ದು ಮಾಡ್ತಿದೆ. ಅನಿರುದ್ದ್ ರವಿಚಂದರ್ ಟ್ಯೂನ್ ಹಾಕಿರುವ ಸಾಂಗ್‌ನ ಶಿಲ್ಪಾ ರಾವ್ ಹಾಡಿದ್ದಾರೆ. ಅರುಣ್ ರಾಜ ಕಾಮರಾಜ್ ಲಿರಿಕ್ಸ್ ಇದೆ.

ಇನ್‌ಸ್ಟಾಗ್ರಾಮ್‌ನಲ್ಲಿ 'ಕಾವಾಲಾ' ಸಾಂಗ್‌ ಹುಕ್‌ ಸ್ಟೆಪ್ಸ್ ರೀಲ್ಸ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಪುಟಾಣಿ ಮಕ್ಕಳು ಕೂಡ ತಮನ್ನಾ ರೀತಿ ಹೆಜ್ಜೆ ಹಾಕಿರುವ ವಿಡಿಯೋಗಳು ಹರಿದಾಡ್ತಿದೆ. ಅಂತಹ ವಿಡಿಯೋಗಳನ್ನು ನೋಡಿ ತಮನ್ನಾ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕಲರ್‌ಫುಲ್ ಸೆಟ್‌ನಲ್ಲಿ ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸಾಂಗ್ ಶೂಟ್ ಮಾಡಿದ್ದಾರೆ. ಒಂದಷ್ಟು ಡ್ಯಾನ್ಸರ್ಸ್ ರಜನಿ- ತಮನ್ನಾ ಡ್ಯಾನ್ಸ್‌ಗೆ ಸಾಥ್ ಕೊಟ್ಟಿದ್ದಾರೆ.

Fans grooving to Kaavaalaa kicks off a new Instagram reels trend

ಅನಿರುದ್ದ್ ರವಿಚಂದ್ರನ್ ತಮ್ಮ ವಿಭಿನ್ನ ಸಾಂಗ್ಸ್ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚೆಗೆ ದಳಪತಿ ವಿಜಯ್ ಹುಟ್ಟುಹಬ್ಬಕ್ಕೆ 'ಲಿಯೋ' ಚಿತ್ರದ 'ನಾ ರೆಡಿ' ರಿಲೀಸ್ ಆಗಿತ್ತು. ಇದಕ್ಕೂ ಅನಿರುದ್ಧ್ ಟ್ಯೂನ್ ಹಾಕಿದ್ದರು. ಆದರೆ ಅದಕ್ಕಿಂತ 'ಕಾವಾಲಾ' ಸಾಂಗ್‌ ಸಖತ್ ಸದ್ದು ಮಾಡ್ತಿದೆ. ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ 'ಜೈಲರ್' ಸಿನಿಮಾ ಅದ್ಧೂರಿಯಾಗಿ ಮೂಡಿ ಬರ್ತಿದೆ.

ಆಗಸ್ಟ್ 10ಕ್ಕೆ 'ಜೈಲರ್' ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಚಿತ್ರಕ್ಕಿದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ನಟಿಸಿರೋದು ಬಹಳ ಕುತೂಹಲ ಮೂಡಿಸಿದೆ. ನೆಲ್ಸನ್ ನಿರ್ದೇಶನದ 'ಬೀಸ್ಟ್' ಸಿನಿಮಾ ಕಳೆದ ವರ್ಷ ಹೀನಾಯವಾಗಿ ಸೋತಿತ್ತು. ಆದರೂ ಕೂಡ ರಜನಿಕಾಂತ್ ಸಿನಿಮಾ ಎನ್ನುವ ಕಾರಣಕ್ಕೆ 'ಜೈಲರ್' ನಿರೀಕ್ಷೆ ಹುಟ್ಟು ಹಾಕಿದೆ.

ಇತ್ತೀಚೆಗೆ 'ಜೀ ಕರ್ದಾ' ಹಾಗೂ 'ಲಸ್ಟ್ ಸ್ಟೋರಿಸ್-2' ವೆಬ್ ಸೀರಿಸ್‌ಗಳಿಂದ ತಮನ್ನಾ ಭಾರೀ ಸುದ್ದಿ ಆಗಿದ್ದರು. ವೆಬ್ ಸೀರಿಸ್‌ಗಳಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿ ಎಲ್ಲರ ಹುಬ್ಬೇರಿಸಿದ್ದರು. ಸದ್ಯ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿರುವ ಮಿಲ್ಕಿ ಬ್ಯೂಟಿ ಆತನೊಟ್ಟಿಗೆ ಲಿಪ್‌ಲಾಕ್ ಸಹ ಮಾಡಿದ್ದರು. ತಮನ್ನಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದಕ್ಕೆ ಟ್ರೋಲ್ ಕೂಡ ಎದುರಿಸಬೇಕಾಯಿತು. ಸದ್ಯ 'ಜೈಲರ್' ಚಿತ್ರದ ಹಾಡಿಗೆ ಕುಣಿದು ಮತ್ತೆ ಗಮನ ಸೆಳೆಯುತ್ತಿದ್ದಾರೆ.

More from Filmibeat

English summary
Fans grooving to Kaavaalaa kicks off a new Instagram reels trend. tamanna bhatia Dance with Rajinikanth for this melody track. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X