For Quick Alerts
  ALLOW NOTIFICATIONS  
  For Daily Alerts

  ವಿ. ಹರಿಕೃಷ್ಣಗೆ ವಿಶೇಷ ಮನವಿ: ದರ್ಶನ್ ಅಭಿಮಾನಿಗಳ ಆಸೆ ಈಡೇರುತ್ತಾ?

  |

  'ಕ್ರಾಂತಿ' ಸಿನಿಮಾ ಅಪ್‌ಡೇಟ್‌ಗಾಗಿ ದರ್ಶನ್ ಅಭಿಮಾನಿಗಳು ಕಾಯ್ತಿದ್ದಾರೆ. ಕಾದು ಕಾದು ಸುಸ್ತಾಗಿರುವ ಅಭಿಮಾನಿಗಳು ಇದೀಗ ನಿರ್ದೇಶಕ ವಿ. ಹರಿಕೃಷ್ಣ ಎದುರು ವಿಶೇಷ ಮನವಿ ಇಟ್ಟಿದ್ದಾರೆ. ಅ ಮನವಿಗೆ ನಿರ್ದೇಶಕರು ಸ್ಪಂದಿಸುತ್ತಾರಾ ಅನ್ನುವ ಪ್ರಶ್ನೆ ಈಗ ಮೂಡಿದೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಕ್ರಾಂತಿ'. ಸೂಪರ್ ಹಿಟ್ 'ಯಜಮಾನ' ಕಾಂಬಿನೇಷನ್‌ನಲ್ಲೇ ಈ ಸಿನಿಮಾ ಕೂಡ ಸಿದ್ಧವಾಗ್ತಿದೆ. ಕಮರ್ಷಿಯಲ್ ಅಂಶಗಳ ಜೊತೆಗೆ ಒಂದೊಳ್ಳೆ ಸಂದೇಶವನ್ನು ಹೊತ್ತು ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪೋಸ್ಟ್‌ ಪ್ರೊಡಕ್ಷನ್ ವರ್ಕ್ ನಡೀತಿದೆ. ಬರೀ 'ಕ್ರಾಂತಿ' ಪೋಸ್ಟರ್‌ಗಳನ್ನು ನೋಡಿ ನೋಡಿ ಬೇಸರಗೊಂಡಿರುವ ಅಭಿಮಾನಿಗಳು ಈಗ ನಿರ್ದೇಶಕರ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

  ನಟ ದರ್ಶನ್‌ಗೆ ಮುತ್ತಿಟ್ಟ ವೈರಲ್ ಹುಡುಗ ನವಾಜ್!ನಟ ದರ್ಶನ್‌ಗೆ ಮುತ್ತಿಟ್ಟ ವೈರಲ್ ಹುಡುಗ ನವಾಜ್!

  'ಕ್ರಾಂತಿ' ಟೀಸರ್ ಕೂಡ ಅಭಿಮಾನಿಗಳಿಗೆ ಅಷ್ಟಾಗಿ ಇಷ್ಟವಾಗಲಿಲ್ಲ. ಹೊಸ ಟೀಸರ್‌ಗಾಗಿ ಕಾಯುತ್ತಲೇ ಇದ್ದಾರೆ. ಇನ್ನು ರಾಜ್ಯೋತ್ಸವದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡುವ ಸಾಧ್ಯತೆಯಿದೆ. ಈ ಗ್ಯಾಪ್‌ನಲ್ಲೇ ಸಿನಿಮಾ ಸಾಂಗೊಂದನ್ನು ರಿಲೀಸ್ ಮಾಡಿ ಎಂದು ಸೋಶಿಯಲ್ ಮೀಡಿಯಾ ಮುಖಾಂತರ ನಿರ್ದೇಶಕರಲ್ಲಿ ಬೇಡಿಕೆ ಇಟ್ಟಿದ್ದಾರೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ 'ಕ್ರಾಂತಿ' ಚಿತ್ರವನ್ನು ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದು, ದೇಶ ವಿದೇಶದಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ.

   ಗಣೇಶ ಹಬ್ಬಕ್ಕೆ ಕುಣಿಯಲು ಸಾಂಗ್ ಬೇಕು

  ಗಣೇಶ ಹಬ್ಬಕ್ಕೆ ಕುಣಿಯಲು ಸಾಂಗ್ ಬೇಕು

  ವಿ.ಹರಿಕೃಷ್ಣ ನಿರ್ದೇಶನದಲ್ಲಿ 'ಕ್ರಾಂತಿ' ಸಿನಿಮಾ ನಿರ್ಮಾಣವಾಗಿದೆ. ಒಂದು ಪೋಸ್ಟರ್‌ಗಳು, ಟೀಸರ್ ಬಿಟ್ರೆ ಬೇರೆ ಯಾವುದೇ ಸಿನಿಮಾ ಝಲಕ್ ಇನ್ನು ರಿಲೀಸ್ ಆಗಿಲ್ಲ. ರಾಜ್ಯೋತ್ಸವ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಈ ತಿಂಗಳ ಕೊನೆಗೆ ಗಣೇಶ ಹಬ್ಬ ಬರ್ತಿದೆ. ಹಾಗಾಗಿ ಹಬ್ಬಕ್ಕೆ ಕುಣಿದು ಕುಪ್ಪಳಿಸಲು 'ಕ್ರಾಂತಿ' ಚಿತ್ರದ ಸಾಂಗ್ ರಿಲೀಸ್ ಮಾಡಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

  ನಟ ದರ್ಶನ್‌ಗೆ ಅವಮಾನ: ಕೊನೆಗೂ ಕ್ಷಮೆ ಕೇಳಿದ ಮೈಸೂರಿನ ಯುವಕನಟ ದರ್ಶನ್‌ಗೆ ಅವಮಾನ: ಕೊನೆಗೂ ಕ್ಷಮೆ ಕೇಳಿದ ಮೈಸೂರಿನ ಯುವಕ

   ಹೇಗಿರುತ್ತೆ 'ಕ್ರಾಂತಿ' ಸಿನಿಮಾ ಸಾಂಗ್ಸ್?

  ಹೇಗಿರುತ್ತೆ 'ಕ್ರಾಂತಿ' ಸಿನಿಮಾ ಸಾಂಗ್ಸ್?

  ದರ್ಶನ್ ಸಿನಿಮಾ ಸಾಂಗ್ಸ್ ಯಾವಾಗಲೂ ಸೂಪರ್ ಹಿಟ್ ಆಗ್ತಾವೆ. ಅದರಲ್ಲೂ ವಿ.ಹರಿಕೃಷ್ಣ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಎಲ್ಲಾ ಆಲ್ಬಮ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡಿದೆ. 'ಕ್ರಾಂತಿ' ಸಾಂಗ್ಸ್‌ ಬಗ್ಗೆ ಕೂಡ ಭಾರೀ ನಿರೀಕ್ಷೆ ಇದೆ. ಕಾರಣ ಇದು ವಿ. ಹರಿಕೃಷ್ಣ ಸ್ವತಃ ನಿರ್ದೇಶನದ ಮಾಡಿರುವ ಚಿತ್ರ. ಈ ಹಿಂದೆ 'ಯಜಮಾನ' ಚಿತ್ರಕ್ಕೂ ಹರಿ ಟ್ಯೂನ್‌ಗಳು ಸೂಪರ್ ಹಿಟ್ ಆಗಿತ್ತು. ಬೇರೆ ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುವುದನ್ನೇ ಬಿಟ್ಟು ಹಗಳಿರುಳು 'ಕ್ರಾಂತಿ'ಗಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಸಿನಿಮಾ ಸಾಂಗ್ಸ್‌ ಭಾರಿ ಕುತೂಹಲ ಕೆರಳಿಸಿದೆ.

   ಘಟಾನುಘಟಿಗಳ 'ಕ್ರಾಂತಿ'

  ಘಟಾನುಘಟಿಗಳ 'ಕ್ರಾಂತಿ'

  'ಕ್ರಾಂತಿ' ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಕ್ರೇಜಿಸ್ಟಾರ್ ವಿ.ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರುರಂತಹ ಪ್ರತಿಭಾನ್ವಿತ ಕಲಾವಿದರು ಬಣ್ಣ ಹಚ್ಚಿದ್ದಾರೆ. ಇನ್ನು ಶಶಿಧರ ಅಡಪ ಕಲಾ ನಿರ್ದೇಶನ, ಕರುಣಾಕರ ಛಾಯಾಗ್ರಹಣ, ರಾಮ್‌-ಲಕ್ಷ್ಮಣ್ ಹಾಗೂ ವಿನೋದ್ ಮಾಸ್ಟರ್‌ ಸಾಹಸ ಸಂಯೋಜನೆ ಚಿತ್ರಕ್ಕಿದೆ.

   ಅಕ್ಷರ 'ಕ್ರಾಂತಿ'ಯ ಕಥೆ

  ಅಕ್ಷರ 'ಕ್ರಾಂತಿ'ಯ ಕಥೆ

  ಸಿನಿಮಾ ಕಥೆ ಬಗ್ಗೆ ಈವರೆಗೆ ಚಿತ್ರತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಅಕ್ಷರ 'ಕ್ರಾಂತಿ'ಯ ಕಥೆ ಅಂತ ಮಾತ್ರ ಹೇಳಿದ್ದಾರೆ. ಕನ್ನಡ ಸರ್ಕಾರಿ ಶಾಲೆಗಳ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆಯಂತೆ. ಇನ್ನು ಎನ್‌ಆರ್‌ಐ ಪಾತ್ರದಲ್ಲಿ ದರ್ಶನ್ ನಟಿಸಿದ್ದಾರೆ ಅಂತಲೂ ಹೇಳಲಾಗ್ತಿದೆ. ಹಾಗಾಗಿ ಸಿನಿಮಾ ಕಥೆ ಹೇಗಿರುತ್ತೆ ಅನ್ನುವ ಕುತೂಹಲ ಸಿನಿರಸಿಕರಲ್ಲಿದೆ.

  English summary
  Fans Have A Special Request For Kranti Movie Director V. Harikrishna. Know More.
  Thursday, August 18, 2022, 18:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X