For Quick Alerts
  ALLOW NOTIFICATIONS  
  For Daily Alerts

  'ಟಿಣಿಂಗಾ ಮಿಣಿಂಗಾ' ಕೇಳಿ ವಾಹ್ ಎಂದ ಫೈಟ್ ಮಾಸ್ಟರ್ಸ್ ರಾಮ್-ಲಕ್ಷ್ಮಣ್

  |

  ದುನಿಯಾ ವಿಜಯ್ ನಟಿಸಿ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ ಸಿನಿಮಾ ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ತೆರೆಗೆ ಬರಬೇಕಿತ್ತು. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಥಿಯೇಟರ್‌ಗಳಿಗೆ 100 ಪರ್ಸೆಂಟ್ ಅವಕಾಶ ಸಿಗದ ಕಾರಣ ದಿನಾಂಕ ಮುಂದೂಡಿದೆ.

  ಸಿನಿಮಾ ಮುಂದಕ್ಕೆ ಹೋದ ನಿರಾಸೆ ಅಭಿಮಾನಿಗಳಲ್ಲಿದ್ದರೂ ಸಲಗ ಹಾಡುಗಳನ್ನು ಕೇಳಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಅದರಲ್ಲೂ ಇತ್ತೀಚಿಗಷ್ಟೆ ರಿಲೀಸ್ ಆಗಿದ್ದ ಪ್ರಮೋಷನಲ್ ಹಾಡು 'ಟಿಣಿಂಗಾ ಮಿಣಿಂಗಾ ಟಿಶ್ಯು' ಹಾಡಂತೂ ಗಾಂಧಿನಗರದಲ್ಲಿ ಟ್ರೆಂಡ್ ಸೃಷ್ಟಿಸಿದೆ.

  'ಸಲಗ' ಹಾಡಿಗೆ ದನಿಯಾದ ಸಿದ್ದಿ ಸಮುದಾಯದ ಚಿನ್ನದ ಹುಡುಗಿಯ ಭಾವಕ ಮಾತು'ಸಲಗ' ಹಾಡಿಗೆ ದನಿಯಾದ ಸಿದ್ದಿ ಸಮುದಾಯದ ಚಿನ್ನದ ಹುಡುಗಿಯ ಭಾವಕ ಮಾತು

  ಯಾರೂ ನಿರೀಕ್ಷೆ ಮಾಡದಂತೆ ಈ ಸಾಂಗ್ ಕಂಪೋಸ್ ಮಾಡಿದ್ದು, ಕನ್ನಡ ಪ್ರೇಕ್ಷಕರು ಬೆರಗುಗೊಂಡು ನೋಡಿ ಆನಂದಿಸುತ್ತಿದ್ದಾರೆ. ಇದೀಗ, ಭಾರತದ ಖ್ಯಾತ ಸಾಹಸ ನಿರ್ದೇಶಕರಾದ ರಾಮ್-ಲಕ್ಷ್ಮಣ್ ಮಾಸ್ಟರ್ ಸಹ 'ಟಿಣಿಂಗಾ ಮಿಣಿಂಗಾ ಟಿಶ್ಯು' ಹಾಡು ನೋಡಿ ಎಂಜಾಯ್ ಮಾಡ್ತಿದ್ದಾರೆ. ಹಾಡಿನ ಶೈಲಿ, ಮ್ಯೂಸಿಕ್ ನೋಡಿ ಬೆರಗುಗೊಂಡಿದ್ದಾರೆ.

  ''ದುನಿಯಾ ವಿಜಯ್ ಅವರು ನಿರ್ದೇಶನ ಮಾಡಿರುವುದು ಸಂತಸ ಇದೆ. ಅವರೊಬ್ಬರ ಆಕ್ಷನ್ ಹೀರೋ. ಈಗತಾನೆ ಹಾಡು ನೋಡಿದ್ವಿ. ತುಂಬಾ ಚೆನ್ನಾಗಿದೆ. ಕೆಪಿ ಶ್ರೀಕಾಂತ್ ಅವರು ಈ ಚಿತ್ರ ನಿರ್ಮಿಸಿದ್ದು ಸಿನಿಮಾಗೆ ಯಶಸ್ಸು ಸಿಗಲಿ ಎಂದು ಮನಸಾರೆ ಶುಭಹಾರೈಸುತ್ತೇವೆ'' ಎಂದು ವಿಡಿಯೋ ಹಂಚಿಕೊಂಡಿದ್ದಾರೆ.

  ಪ್ರಸ್ತುತ, ರಾಮ್-ಲಕ್ಷ್ಮಣ್ ಮಾಸ್ಟರ್ 'ಜೇಮ್ಸ್' ಚಿತ್ರೀಕರಣದಲ್ಲಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ 'ಜೇಮ್ಸ್' ಸಿನಿಮಾದ ಆಕ್ಷನ್ ದೃಶ್ಯದ ಶೂಟಿಂಗ್ ನಡೆಯುತ್ತಿದ್ದು, ರಾಮ್-ಲಕ್ಷ್ಮಣ್ ಮಾಸ್ಟರ್ ಸ್ಟಂಟ್ ನಿರ್ದೇಶಿಸುತ್ತಿದ್ದಾರೆ. ಚೇತನ್ ಕುಮಾರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

  ಅಂದ್ಹಾಗೆ, ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡನ್ನು ಗಿರಿಜಾ ಸಿದ್ಧಿ, ಗೀತಾ ಸಿದ್ಧಿ ಹಾಗೂ ಚೆನ್ನಕೇಶವ ಹಾಡಿದ್ದಾರೆ. ಹಾಡಿದ್ದಲ್ಲದೇ ಹಾಡಿನಲ್ಲಿ ನೃತ್ಯ ಸಹ ಮಾಡಿದ್ದಾರೆ. ಈ ಹಾಡಿನಲ್ಲಿ ಹೆಜ್ಜೆ ಹಾಕಿರುವ ಹೆಣ್ಣು ಮಕ್ಕಳು ಆಫ್ರಿಕನ್‌ರಂತೆ ಕಾಣುತ್ತಾರಾದರೂ ಅವರೆಲ್ಲರೂ ಕರ್ನಾಟಕದವರೇ ಅಪ್ಪಟ ಕನ್ನಡಿಗರೇ. ರಾಜ್ಯದ ಹೆಮ್ಮೆಯ ಸಿದ್ದಿ ಜನಾಂಗದ ಹೆಣ್ಣು ಮಕ್ಕಳವರು. ಈ ಹಾಡಿನಲ್ಲಿ ದುನಿಯಾ ವಿಜಯ್ ಸಹ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ವಿಜಯ್ ವೃತ್ತಿ ಜೀವನದಲ್ಲಿ ಈ ಸಿನಿಮಾ ದೊಡ್ಡ ಬ್ರೇಕ್ ಕೊಡಲಿದೆ ಎಂದು ಫ್ಯಾನ್ಸ್ ಭವಿಷ್ಯ ಹೇಳುತ್ತಿದ್ದಾರೆ.

  Fight masters Ram Lakshman heap praises on the music of Salaga

  ಆಗಸ್ಟ್ 5 ರಂದು ರಿಲೀಸ್ ಆಗಿರುವ ಸಲಗ ಪ್ರಮೋಷನಲ್ ಹಾಡು ಯೂಟ್ಯೂಬ್‌ನಲ್ಲಿ 3.3 ಮಿಲಿಯನ್ (30 ಲಕ್ಷ) ವೀಕ್ಷಣೆ ಕಂಡಿದೆ. ಹಾಡು ತುಂಬಾ ಹೊಸದಾಗಿದೆ, ಸಾಹಿತ್ಯ ವಿಶೇಷವಾಗಿದೆ ಎಂದು ಕಾಮೆಂಟ್ ಮೂಲಕ ಸಂಗೀತ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೂ ಮುಂಚೆ ಸಲಗ ಚಿತ್ರದ ಪ್ರಮೋಷನಲ್ ಹಾಡನ್ನು ಶಿವರಾಜ್ ಕುಮಾರ್ ನೋಡಿ ಮೆಚ್ಚಿಕೊಂಡಿದ್ದು, ಶುಭಕೋರಿದ್ದರು. ಟಿಣಿಂಗಾ ಮಿಣಿಂಗಾ ಹಾಡು ಮಾತ್ರವಲ್ಲ, ಇದಕ್ಕೂ ಮೊದಲು ರಿಲೀಸ್ ಆಗಿದ್ದ ಸೂರಿ ಅಣ್ಣಾ....., ಟೈಟಲ್ ಹಾಡು, ಹಾಗೂ ಸಂಜನಾ ಐ ಲವ್ ಯೂ ಹಾಡುಗಳು ಹಿಟ್ ಆಗಿವೆ.

  ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಈ ಚಿತ್ರವನ್ನು ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. 'ಡಾಲಿ' ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜನಾ ಆನಂದ್ ನಾಯಕಿ. ಚರಣ್ ರಾಜ್ ಸಂಗೀತ ನಿರ್ದೇಶನದ ಹಾಡುಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ. ಸದ್ಯಕ್ಕೆ ಬಿಡುಗಡೆಯ ಬಗ್ಗೆ ಗೊಂದಲ್ಲಿರುವ ಚಿತ್ರತಂಡ ಮುಂದಿನ ದಿನಾಂಕ ಯಾವುದು ಎಂದು ಯೋಚನೆ ಮಾಡುತ್ತಿದೆ.

  English summary
  South indian Famous Fight masters Ram Lakshman heap praises on the music of Salaga.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X