For Quick Alerts
    ALLOW NOTIFICATIONS  
    For Daily Alerts

    'RRR' ಚಿತ್ರದ ಬಿಗ್ ಅಪ್ ಡೇಟ್; ಹಾಡು ಬಿಡುಗಡೆ ದಿನಾಂಕ ಘೋಷಣೆ

    |

    ಟಾಲಿವುಡ್ ಮಾತ್ರವಲ್ಲದೇ ಇಡೀ ಭಾರತೀಯ ಸಿನಿಮಾರಂಗ ಎದುರು ನೋಡುತ್ತಿರುವ 'ಆರ್ ಆರ್ ಆರ್' ಸಿನಿಮಾದ ಬಗ್ಗೆ ದೊಡ್ಡ ಅಪ್ ಡೇಟ್ ಹೊರಬಿದ್ದಿದೆ. ಚಿತ್ರದಿಂದ ಮೊದಲ ಹಾಡನ್ನು ಬಿಡುಗಡೆ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದ್ದು, ದಿನಾಂಕ ಕೂಡ ಬಹಿರಂಗ ಪಡಿಸಿದೆ. ಸುಮಾರು ಮೂರು ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಸುದ್ದಿ ಕೊಂಚ ಸಮಾಧಾನ ತಂದಿದೆ.

    ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಆರ್ ಆರ್ ಆರ್ ಸಿನಿಮಾದ ಆಡಿಯೋ ಹಕ್ಕು ಮಾರಾಟವಾಗಿತ್ತಿದ್ದಂತೆ ದೊಡ್ಡ ಸುದ್ದಿ ಹೊರಬಿದ್ದಿರುವುದು ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತೆ ಆಗಿದೆ. ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದ ಮೊದಲ ಹಾಡು ಯಾವಾಗ ತೆರೆಗೆ ಬರಲಿದೆ? ಹಾಡಿನ ವಿಶೇಷತೆ ಏನು? ಇಲ್ಲಿದೆ ಮಾಹಿತಿ...

    ಆಗಸ್ಟ್ 1ಕ್ಕೆ ಮೊದಲ ಹಾಡು

    ಆಗಸ್ಟ್ 1ಕ್ಕೆ ಮೊದಲ ಹಾಡು

    'ಆರ್ ಆರ್ ಆರ್' ಸಿನಿಮಾದ ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಒಂದು ಪೋಸ್ಟರ್ ರಿಲೀಸ್ ಆದರೆ ಸಾಕು ದೊಡ್ಡ ಹಬ್ಬದಂತೆ ಸಂಭ್ರಮಿಸುತ್ತಿದ್ದ ಅಭಿಮಾನಿಗಳಿಗೀಗ ಹಾಡು ಬಿಡುಗಡೆ ಆಗುತ್ತಿರುವ ಸುದ್ದಿ ಕೇಳಿ ಮತ್ತಷ್ಟು ಸಂತಸಗೊಂಡಿದ್ದಾರೆ. ಅಂದಹಾಗೆ ಆರ್ ಆರ್ ಆರ್ ಸಿನಿಮಾದ ಮೊದಲ ಹಾಡು ಆಗಸ್ಟ್ 1ಕ್ಕೆ ಬೆಳಗ್ಗೆ 11ಗಂಟೆಗೆ ಬಿಡುಗಡೆಯಾಗುತ್ತಿದೆ.

    ದೋಸ್ತಿ ಹಾಡು

    ದೋಸ್ತಿ ಹಾಡು

    RRR ಚಿತ್ರದಿಂದ ಬರ್ತಿರುವ ಮೊದಲ ಹಾಡು 'ದೋಸ್ತಿ..' ಬಗ್ಗೆ ಇರುವ ಹಾಡಾಗಿದೆ. ಈ ಬಗ್ಗೆ ಚಿತ್ರತಂಡ ಬಹಿರಂಗಪಡಿಸಿದೆ. ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ದೋಸ್ತಿ ಬಗ್ಗೆ ಇರುವ ಹಾಡು ಇದಾಗಿರುವ ಸಾಧ್ಯತೆ ಇದೆ. ಇತ್ತೀಚಿಗೆ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಇಬ್ಬರು ಬೈಕ್ ಏರಿ ಜಾಲಿ ರೈಡ್ ಹೊರಟಿರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಈ ಪೋಸ್ಟರ್ ಇಬ್ಬರ ಸ್ನೇಹ ಬಾಂಧವ್ಯವನ್ನು ತೋರಿಸುತ್ತಿತ್ತು. ಇದೀಗ ದೋಸ್ತಿ ಹಾಡು ಬಿಡುಗಡೆಯಾಗುತ್ತಿದ್ದು, ಕುತೂಹಲ ಹೆಚ್ಚಾಗಿದೆ.

    ಎಂ ಎಂ ಕೀರವಾಣಿ ಸಂಗೀತ

    ಎಂ ಎಂ ಕೀರವಾಣಿ ಸಂಗೀತ

    ಆರ್ ಆರ್ ಆರ್ ಸಿನಿಮಾಗೆ ಖ್ಯಾತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಸಂಗೀತ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದೆ ಸೇರಿದಂತೆ ಒಟ್ಟು ಐದು ಭಾಷೆಯಲ್ಲಿ ದೋಸ್ತಿ ಹಾಡು ಬಿಡುಗಡೆಯಾಗುತ್ತಿದೆ. ತೆಲುಗಿನಲ್ಲಿ ಹಾಡಿಗೆ ಸಿರಿವೆನ್ನೆಲಾ ಸೀತರಾಮ ಶಾಸ್ತ್ರಿ ಸಾಹಿತ್ಯ ಬರೆದಿದ್ದು, ವೇದಲ ಹೇಮಚಂದ್ರ ಧ್ವನಿ ನೀಡಿದ್ದಾರೆ.

    ದಾಖಲೆ ಬೆಲೆಗೆ ಆಡಿಯೋ ಹಕ್ಕು ಮಾರಾಟ

    ದಾಖಲೆ ಬೆಲೆಗೆ ಆಡಿಯೋ ಹಕ್ಕು ಮಾರಾಟ

    ಆರ್ ಆರ್ ಆರ್ ಸಿನಿಮಾದ ಆಡಿಯೋ ಹಕ್ಕು ದಾಖಲೆ ಮಾರಾಟವಾಗಿದೆ. ಟಿ- ಸಿರೀಸ್ ಮತ್ತು ಲಹರಿ ಆಡಿಯೋ ಸಂಸ್ಥೆ RRR ಚಿತ್ರದ ಆಡಿಯೋವನ್ನು ತನ್ನದಾಗಿಸಿಕೊಂಡಿದೆ. ಮೂಲಗಳ ಪ್ರಕಾರ ಆರ್ ಆರ್ ಆರ್ ಆಡಿಯೋ ಬರೊಬ್ಬರಿ 25 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

    ಆಕ್ಟೋಬರ್ ನಲ್ಲಿ ಬಿಡುಗಡೆ ಸಾಧ್ಯತೆ

    ಆಕ್ಟೋಬರ್ ನಲ್ಲಿ ಬಿಡುಗಡೆ ಸಾಧ್ಯತೆ

    ಚಿತ್ರದಲ್ಲಿ ಜೂ.ಎನ್ ಟಿ ಆರ್ ಕೋಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ವಿಶೇಷ ಎಂದರೆ ಚಿತ್ರದಲ್ಲಿ ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಸಹ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಸಿನಿಮಾ ಅಕ್ಟೋಬರ್ 13ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

    English summary
    First Song From SS Rajamouli’s RRR Movie To Release on August 1 at 11 am.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X